KGF 2 : ವೀಕೆಂಡ್ ನಲ್ಲಿ ಸಾವಿರ ಕೋಟಿ ಗಡಿ ದಾಟುತ್ತಾ ಬಾಕ್ಸ್ ಆಫೀಸ್ ಕಲೆಕ್ಷನ್
10 ನೇ ದಿನವೂ ಬಾಕ್ಸ್ ಆಫೀಸ್ ನಲ್ಲಿ KGF 2 ತನ್ನ ತೂಫಾನಿ ಓಟವನ್ನ ಮುಂದುವರೆಸಿದೆ.. ಈವರೆಗೂ ಸಹ ಬಹುತೇಕ ಕಡೆಗಳಲ್ಲಿ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ… ಸಿನಿಮಾವನ್ನ ಜನ ಮೆಚ್ಚಿಕೊಳ್ತಿದ್ಧಾರೆ.. ಈ ವೀಕೆಂಡ್ ಸಿನಿಮಾದ ಕೆಲೆಕ್ಷನ್ 1000 ಕೋಟಿ ಗಡಿ ದಾಟಲಿದೆ..
10 ದಿನಗಳಲ್ಲಿ ಸುಮಾರು 900 ಕೋಟಿ ಕಲೆಕ್ಷನ್ ಮಾಡಿದೆ… ಹಿಂದಿ ಬೆಲ್ಟ್ ನಲ್ಲಿ ಸುಮಾರು 300 ಕೋಟಿ ಕಲೆಕ್ಷನ್ ಮಾಡಿದೆ… ಹಲವಾರು ದಾಖಲೆಗಳನ್ನು ಮುರಿದ ಚಿತ್ರವಾಗಿದೆ.. ಹಿಂದಿ ಬೆಲ್ಟ್‌ನಲ್ಲಿ ಅತಿ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ..
ಹಿಂದಿಯಲ್ಲಿ ಈವರೆಗೆ 375 ಕೋಟಿ ರೂಪಾಯಿಗೂ ಹೆಚ್ಚು ಪ್ರಾಫಿಟ್ ಮಾಡಿದೆ.. ಹಿಂದಿ ಬೆಲ್ಟ್‌ನಲ್ಲಿ ಈ ಚಿತ್ರವು ವರ್ಷದ ಅತಿದೊಡ್ಡ ಹಿಟ್ ಎಂದು ಘೋಷಿಸಲಾಗಿದೆ. ಚಿತ್ರವು ತನ್ನ 10 ನೇ ದಿನಕ್ಕೆ ಎಲ್ಲಾ ಭಾಷೆಗಳಿಂದ ರೂ 36 ಕೋಟಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.
ಕರ್ನಾಟಕದಲ್ಲಿ ಚಿತ್ರ 10ನೇ ದಿನಕ್ಕೆ 7 ಕೋಟಿ ಕಲೆಕ್ಷನ್ ಮಾಡಿದೆ. ತೆಲುಗಿನಲ್ಲಿ ಈ ಚಿತ್ರ 10ನೇ ದಿನಕ್ಕೆ 3 ಕೋಟಿ ಕಲೆಕ್ಷನ್ ಮಾಡಿದೆ.
ತಮಿಳುನಾಡಿನಲ್ಲಿ ಈ ಚಿತ್ರವು ಹಿಂದಿ ಆವೃತ್ತಿಗೆ ಸರಿಸಮಾನವಾಗಿ 6.5 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ವರದಿಯಾಗಿದೆ. ಈ ಚಿತ್ರ ಕೇರಳದಲ್ಲಿ 3 ಕೋಟಿ ಕಲೆಕ್ಷನ್ ಮಾಡಿದೆ.
ಇಂದು ಈ ಚಿತ್ರ 40 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಅಂದಾಜಿದೆ ಎಂದು ವರದಿ ಹೇಳಿದೆ.