KGF 2 : ಬಾಕ್ಸ್ ಆಫೀಸ್ 10ನೇ ದಿನದ ಕಲೆಕ್ಷನ್ – 900 ಕೋಟಿ
ಬಾಕ್ಸ್ ಆಫೀಸ್ ಶೇಕ್ ಮಾಡ್ತಿರುವ ನಮ್ಮ KGF 2 ಸಿನಿಮಾ ಕೇವಲ 10ದಿನಗಳಲ್ಲಿ ಸುಮಾರು 900 ಕೋಟಿ ರೂ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ..
KGF 2 ಮೊದಲ ದಿನವೇ ಭಾರತದಲ್ಲಿ 135 ಕೋಟಿ ಕಲೆಕ್ಷನ್ ಮಾಡಿತ್ತು.. KGF 2 ವಿಶ್ವಾದ್ಯಂತ ಬಾಕ್ಸ್ಆಫೀಸ್‌ನಲ್ಲಿ ಸುಮಾರು 900 ಕೋಟಿ ಗಳಿಸಿದೆ. ಅಂದ್ಹಾಗೆ ಈ ಸಿನಿಮಾ ಹಿಂದಿ ಬೆಲ್ಟಟ್ ನಲ್ಲಿ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿದೆ..
ಒಂದೇ ವಾರದಲ್ಲಿ ಅತಿ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ವಿಚಾರದಲ್ಲಿ ಹಿಂದಿ ವರ್ಷನ್ ನಲ್ಲಿ ಅಲ್ದೇ ಭಾರತೀಯ ಸಿನಿಮಾವಾಗಿಯೂ ಹೊಸ ದಾಖಲೆ ಬರೆದಿದೆ ಸಿನಿಮಾ..
RRR , ಬಾಹುಬಲಿ 2, ದಂಗಲ್, ಸುಲ್ತಾನ, ಟೈಗರ್ ಜಿಂದಾ ಹೈ ಎಲ್ಲಾ ದಾಖಲೆಗಳು ಚಿಂದಿ ಚಿತ್ರಾನ್ನ ಬೂಂದಿ ಮೊಸ್ರಾನ್ನ ಆಗೋಗಿದೆ..
ಈ ಚಿತ್ರವು ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್‌ಗಳಿಗೆ ಜನರನ್ನು ಸೆಳೆಯುತ್ತಿದೆ ಎಂದು ಹೇಳಲಾಗುತ್ತದೆ.
ಚಿತ್ರ ಈಗ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣ್ತಿದೆ.. ಈ ವೀಕೆಂಡ್ ನಲ್ಲಿ 1000 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ದಾಟಲಿದ್ದು ಬಾಹುಬಲಿ 2 , RRR , ದಂಗಲ್ ರೆಕಾರ್ಡ್ ನೂ ಸಹ ಇಂಡಿಯಾದಲ್ಲಿ ಬ್ರೇಕ್ ಮಾಡಲಿದೆ ಎನ್ನುತ್ತಿದ್ದಾರೆ ಸಿನಿಮಾ ಪಂಡಿತರು..
ಚಿತ್ರವು ಮೊದಲ ವಾರದಲ್ಲಿ ವಿಶ್ವದಾದ್ಯಂತ 750 ಕೋಟಿ ರೂ. ಎರಡನೇ ವಾರದಲ್ಲಿ ಬಾಕ್ಸ್ ಆಫೀಸ್ ನಲ್ಲಿ ಓಟ ಮುಂದುವರೆದಿದ್ದು , ಈ ವಾರಂತ್ಯಕ್ಕೆ 1000 ಕೋಟಿ ದಡಿ ದಾಟೋದ್ರಲ್ಲಿ ನೋ ಡೌಟ್…
ಮುಂದುವರಿಯುತ್ತದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಸಂಜಯ್ ದತ್, ರವೀನಾ ಟಂಡನ್ ಮತ್ತು ಶ್ರೀನಿಧಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
KGF 2 : ಯಾಕೆ ಬೆಸ್ಟ್ ಎಂದ ‘ಅಧೀರ’..!!
KGF 2 box office collection 10th day crosses 9000 crores