KGF 2 : ಸಿನಿಮಾ , ಯಶ್ ನಟನೆ ಕೊಂಡಾಡಿದ ಪ್ರಭಾಸ್ , ರಾಮ್ ಚರಣ್
ರಾಕಿಂಗ್ ಸ್ಟಾರ್ ಯಶ್ ಅಭಿನಯದ KGF 2 ಹಿಂದಿ ಆವೃತ್ತಿಯು ಒಟ್ಟಾರೆ 8 ದಿನಗಳಲ್ಲಿ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.. ಭಾರತೀಯ ಬಾಕ್ಸ್ ಆಫೀಸ್ ನಲ್ಲಿ 800 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.. ಈ ಮೂಲಕ ಅಮಿರ್ ಖಾನ್ ರ ದಂಗಲ್ ಸಿನಿಮಾದ ಸರ್ವಾಕಾಲೀನ ದಾಖಲೆ ಮುರಿಯಲು ಸಿದ್ಧವಾಗಿದೆ ಸಿನಿಮಾ…
8 ದಿನಗಳಲ್ಲಿ 800 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ.. KGF 2 ಕನ್ನಡ ಸಿನಿಮಾರಂಗದ ಗತಿ ಬದಲಾಯಿಸಿದೆ… ಎಲ್ಲರೂ ಕನ್ನಡ ಸಿನಿಮಾರಂಗದತ್ತ ತಿರುಗಿ ನೋಡುವಂತೆ ಮಾಡಿದೆ..
ಆದ್ರೆ ಯಾಕೆ ನಮ್ಮ ಕನ್ನಡದ ಸ್ಟಾರ್ ಗಳು ಮಾತ್ರ ಸಿನಿಮಾ ಬಗ್ಗೆ ಮಾತನಾಡ್ತಿಲ್ಲ.. ಮೌನವಾಗಿದ್ದಾರೆ… ಪ್ರಶಂಸೆ ವ್ಯಕ್ತಪಡಿಸುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.. ಆದ್ರೆ ಇದರ ನಡುವೆಯೇ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರು ಸಿನಿಮಾವನ್ನ ಮಾಸ್ಟರ್ ಪೀಸ್ ಎಂದು ಕೊಂಡಾಡಿದ್ದರು.. ತೆಲುಗಿನ ಸೂಪರ್ ಸ್ಟಾರ್ , ಐಕಾನ್ ಸ್ಟಾರ್ ಅಲ್ಲು ಅರ್ಜುನ್ KGF 2 ನೋಡಿ ಕೊಂಡಾಡಿದ್ದರು..
ಈಗ RRR ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಮೆಗಾ ಪವರ್ ಸ್ಟಾರ್ ರಾಮ್ ಚರಣ್ KGF 2 ಸಿನಿಮಾವನ್ನ ಕೊಂಡಾಡಿದ್ದಾರೆ ಜೊತೆಗೆ ಯಶ್ ಅಭಿನಯವನ್ನ ಮೈಂಡ್ ಬ್ಲೋಯಿಂಗ್ ಎಂದಿದ್ದಾರೆ..
ಅಷ್ಟೇ ಅಲ್ಲ ಬಾಹುಬಲಿ ಖ್ಯಾತಿಯ ಪ್ರಭಾಸ್ ಅವರು ಕೂಡ ಸಿನಿಮಾವನ್ನ ಕೊಂಡಾಡಿದ್ದಾರೆ.. ಯಶ್ ಅವರ 2 ಬಾಕ್ಸ್ ಆಫೀಸ್‌ನಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ ಚಲನಚಿತ್ರವು ಅತಿದೊಡ್ಡ ಸೂಪರ್‌ಹಿಟ್ ಆಗಿದೆ. ಹಾಗಾಗಿ, ಪ್ರಭಾಸ್ ಮತ್ತು ರಾಮ್ ಚರಣ್ ವಿಶೇಷ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ ಮತ್ತು ಚಿತ್ರತಂಡವನ್ನು ಅಭಿನಂದಿಸಿದ್ದಾರೆ.
ಕೆಜಿಎಫ್ ಅಧ್ಯಾಯ 2 ತಂಡಕ್ಕೆ ಪ್ರಭಾಸ್ ಅಭಿನಂದನಾ ಪೋಸ್ಟ್ ಹಂಚಿಕೊಂಡಿದ್ದಾರೆ..
ಕೇವಲ ಏಳು ದಿನಗಳಲ್ಲಿ, ಕೆಜಿಎಫ್ ಚಾಪ್ಟರ್ 2 ಪ್ರಭಾಸ್ ಅಭಿನಯದ ಬಾಹುಬಲಿಯ ಜೀವಮಾನದ ಗಳಿಕೆಯನ್ನು ದಾಟಿತು. ಈಗ, ಆಕ್ಷನ್ ಥ್ರಿಲ್ಲರ್ ಅದರ ಥಿಯೇಟ್ರಿಕಲ್ ರನ್‌ನ ಎರಡನೇ ವಾರದಲ್ಲಿದೆ. ಪ್ರಭಾಸ್ ಇನ್‌ಸ್ಟಾಗ್ರಾಮ್‌ಗೆ ಕರೆದೊಯ್ದು ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಇತರರನ್ನು ಅಭಿನಂದಿಸಿದ್ದಾರೆ.