ಬಾಲಿವುಡ್ ಅಲ್ಲ ಇನ್ಮುಂದೆ ಇಂಡಿಯನ್ ಸಿನಿಮಾಗಳು…!!! ಬಾಲಿವುಡ್ ಮುಳುಗುವುದಕ್ಕೆ ಮುಖ್ಯ ಕಾರಣವಿದು..!!
ಅದೊಂದು ಕಾಲವಿತ್ತು… ಭಾರತೀಯ ಸಿನಿಮಾರಂಗವೆಂದ್ರೆ ಬಾಲಿವುಡ್ ಎನ್ನುತ್ತಿದ್ದ ಕಾಲವದು.. ಸೌತ್ ಸಿನಿಮಾಗಳನ್ನ ಬಾಲಿವುಡ್ ಮಂದಿ ಕೇವಲವಾಗಿ ನೋಡ್ತಿದ್ದ ಕಾಲವದು… ಬಾಲಿವುಡ್ ನಲ್ಲಿ ಎಂತಹದ್ದೇ ಕೆಟ್ಟ ಸಿನಿಮಾ ಬಂದ್ರೂ ಹಿಟ್ ಆಗ್ತಿದ್ದ ಕಾಲವದು.. 10 ವರ್ಷದ ಹಿಂದೆ ಭಾರತೀಯ ಸಿನಿಮಾರಂಗವೇ ಬೇರೆ.. ಆಗ ಬಾಲಿವುಡ್ ನಲ್ಲಿ ಖಾನ್ ಗಳ ಆಡಳಿತವಿತ್ತು.. ಅಮೀರ್ , ಶಾರುಖ್ , ಸಲ್ಲು ಭಾಯ್ ಎಂತಹದ್ದೇ ಸಿನಿಮಾ ಮಾಡಲಿ ಸೂಪರ್ ಹಿಟ್ ಬ್ಲಾಕ್ ಬಾಸ್ಟರ್ ಎನ್ನುವ ಕಾಲವದು..
ಅಕ್ಷಯ್ ಕುಮಾರ್ , ಸುನೀಲ್ ಶೆಟ್ಟಿ , ಹೃತಿಕ್ ರೋಷನ್ ಸಿನಿಮಾಗಳನ್ನೂ ಮೆಚ್ಚುತ್ತಿದ್ದರು.. ತಪ್ಪಲ್ಲ ಅವರೆಲ್ಲಾ ಅಪ್ರತಿಮ ಕಲಾವಿದರೇ.. ಆದ್ರೆ ಬಾಲಿವುಡ್ ಮಂದಿಗೆ ಸೌತ್ ಸಿನಿಮಾಗಳಂದ್ರೆ ಕೇವಲವಾಗಿಬಿಟ್ಟಿತ್ತು.. ಆದ್ರೀಗ ಕಾಲ ಬದಲಾಗಿದೆ.. ಜನರ ದೃಷ್ಟಿ ಕೋನ ಬದಲಾಗಿದೆ… ಹಿಂದಿ ಬೆಲ್ಟ್ ನಲ್ಲೂ ಜನರು ಸೌತ್ ಸಿನಿಮಾಗಳಿಗೆ ಬಹುಪರಾಕ್ ಹೇಳ್ತಿದ್ಧಾರೆ…
KGF 2 : ವೀಕೆಂಡ್ ನಲ್ಲಿ ಸಾವಿರ ಕೋಟಿ ಗಡಿ ದಾಟುತ್ತಾ ಬಾಕ್ಸ್ ಆಫೀಸ್ ಕಲೆಕ್ಷನ್
ಈ ಮ್ಯಾಜಿಕ್ ಗೆ ಕಾರಣವಾಗಿದ್ದು , ಬಾಹುಬಲಿ , ಬಾಹುಬಲಿ 2 , ರೋಬೋ , ರೋಬೋ 2 , KGF , ಪುಷ್ಪ , RRR , KGF 2… ಈ ಸಿನಿಮಾಗಳು ಹಿಂದಿ ಸಿನಿಮಾರಂಗವನ್ನೇ ಡಾಮಿನೇಟ್ ಮಾಡಿವೆ..
ಬಾಲಿವುಡ್ ಮಂದಿಗೆ ಭಯ ಹುಟ್ಟಿಸಿಬಿಟ್ಟಿವೆ.. ಅದ್ರಲ್ಲೂ ಏಪ್ರಿಲ್ 14 ಕ್ಕೆ ರಿಲೀಸ್ ಆದ KGF 2 ಅಬ್ಬರಿಸುತ್ತೆ ಅಂತ ಎಲ್ಲರೂ ಆ ಸಸಿನಿಮಾ ಕ್ರೇಜರ್ ನೋಡಿಯೇ ಊಹಿಸಿದ್ದರು ಹೊರತಾಗಿ ಬಾಲಿವುಡ್ ನ ಸೋ ಕಾಲ್ಡ್ ಸ್ಟಾರ್ ಗಳು ನಮ್ಮ ಕನ್ನಡದ KGF 2 ಸಿನಿಮಾ ಬಾಕ್ಸ್ ಆಫೀಸ್ ಮಾತ್ರವೇ ಶೇಕ್ ಮಾಡೋದಿಲ್ಲ… ಬದಲಾಗಿ ಬಾಲಿವುಡ್ ನ ಅಂತ್ಯದ ಆರಂಭಕ್ಕೆ ನಾಂದಿ ಹಾಡಲಿದೆ ಅಂತ..
ರಾಜ್ ಕುಮಾರ್ ಅವರ ಹುಟ್ಟುಹಬ್ಬ : ಅರ್ಥಪೂರ್ಣವಾಗಿ ಆಚರಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್
ತೂಫಾನ್ ಹೊಡೆತಕ್ಕೆ ಬಾಲಿವುಡ್ ಶೇಕ್ ಆಗಿದೆ… ಬಾಲಿವುಡ್ ವರ್ಚಸ್ಸು ಉಳಿಸೋದಕ್ಕೆ ಬಿ ಟೌನ್ ಸ್ಟಾರ್ ಗಳು ಮಹಾ ಪ್ಲಾನ್ ಮಾಡ್ತಿದ್ಧಾರೆ… ಅಂದ್ಹಾಗೆ ಬಾಲಿವುಡ್ ಅಂತ್ಯದ ಆರಂಭ ಶುರುವಾಗಿದ್ದು ಯಾವಾಗ ಗೊತ್ತಾ…??? ಸುಸಾಂತ್ ಸಿಂಗ್ ರಂತಹ ಪ್ರತಿಭಾವಂತ ಉದಯೋನ್ಮುಖ ನಟ ಬಾರದ ಲೋಕಕ್ಕೆ ಪಯಣ ಬೆಳೆಸಿದಾಗ…
ಸುಶಾಂತ್ ಸಿಂಗ್ ನಿಧನದ ನಂತರದಿಂದ ಇಲ್ಲಿವರೆಗೂ ಬಾಯ್ಕಾಟ್ ಬಾಲಿವುಡ್ ಟ್ರೆಮಡ್ ಆಗ್ತಲೇ ಇರುತ್ತೆ.. ಯಾವ ಸಿನಿಮಾವೇ ಬರಲಿ… ಸುಶಾಂತ್ ನಿಧನದ ನಂತರದಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಬಾಲಿವುಡ್ ಮಾಫಿಯಾ, ನೆಪೋಟಿಸಮ್ , ಸ್ಟಾರ್ ಕಿಡ್ ಗಳ ವಿರುದ್ಧ ಕ್ರಾಂತಿ ಶುರುವಾಯ್ತು… ಜನರು ಬಾಲಿವುಡ್ ಸಿನಿಮಾಗಳನ್ನ ಬಹಿಷ್ಕರಿಸಲಾರಂಭಿಸಿದ್ರು.. ಬಾಲಿವುಡ್ ನಲ್ಲಿ ಸಂಪ್ರದಾಯ , ಸಂಸ್ಕ್ರಿತಿಗೆ ಮಾಡುವ ಅಪಮಾನ , ಅತೀವ ಪಾಶ್ಮಿಮಾತ್ಯತೆಯನ್ನ ತಿರಸ್ಕರಿಸುತ್ತಾ ಬಂದರು…
ಇಂದು ಬಾಲಿವುಡ್ ಮುಳುಗುವ ಹಂತ ತಲುಪಿದೆ… ಇನ್ಮುಂದೆ ಏನಿದ್ರೂ ಭಾರತೀಯ ಸಿನಿಮಾಗಳಷ್ಟೇ.. ಬಾಲಿವುಡ್ ಸಿನಿಮಾಗಲ್ಲ… ಆ ಕಾಲ ಶುರುವಾಗಿದೆ… ಮುಂದುವರೆಯಲಿದೆ…