Avika gour : 1920 ಹಾರರ್ ಆಫ್ ದಿ ಹಾರ್ಟ್ ಮೂಲಕ ಬಾಲಿವುಡ್ ಪ್ರವೇಶ
ಕಿರುತೆರೆಯಲ್ಲಿ ಮಿಂಚಿ ನಂತರ ಹಿರಿತೆರೆಗೆ ಕಾಲಿಟ್ಟ ಅವಿಕಾ ಗೋರ್ ಕನ್ನಡ , ತೆಲುಗು ಸೇರಿದಂತೆ ಬೇರೆ ಬೇರೆ ಭಾಷೆ ಸಿನಿಮಾಗಳಲ್ಲಿ ನಟಿಸಿದ್ದಾರೆ.. ಆದ್ರೆ ಇದೇ ಮೊದಲ ಬಾರಿಗೆ ಬಾಲಿವುಡ್ ಗೆ ಪಾದಾರ್ಪಣೆ ಮಾಡ್ತಿದ್ದಾರೆ… ಬಾಲಿವುಡ್ ನಲ್ಲಿ ಹಾರರ್ ಸಿನಿಮಾ ಮೂಲಕ ಡೆಬ್ಯೂಟ್ ಮಾಡಲು ಹೊರಟಿದ್ದಾರೆ..
ವಿಕ್ರಮ್ ಭಟ್ ನಿರ್ದೇಶನದ ‘1920- ಹಾರರ್ಸ್ ಆಫ್ ದಿ ಹಾರ್ಟ್’ ಸಿನಿಮಾ ಮೂಲಕ ಅವಿಕಾ ಗೋರ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ.
ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ಚಲನಚಿತ್ರಗಳಲ್ಲಿ ಹೆಸರು ಮಾಡಿದ ನಂತರ , ಈಗ ಬಾಲಿವುಡ್ ಗೆ ಎಂಟ್ರಿಕೊಡ್ತಿದ್ದಾರೆ.. ‘1920 – ಹಾರರ್ಸ್ ಆಫ್ ದಿ ಹಾರ್ಟ್’ ಸಿನಿಮಾದ ಜೊತೆಗೆ ಹಿಂದಿ ಚಿತ್ರರಂಗಕ್ಕೆ ಪ್ರವೇಶಿಸುತ್ತಾರೆ.
ನಟಿ ಅವಿಕಾ ಗೋರ್ ದೂರದರ್ಶನ ಕಾರ್ಯಕ್ರಮ, ‘ಬಾಲಿಕಾ ವಧು’ ಮತ್ತು ನಂತರ ‘ಸಸುರಾಲ್ ಸಿಮಾರ್ ಕಾ’ ನಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಅವರು ಬಾಲಿಕಾ ವಧುನಲ್ಲಿ ಆನಂದಿ ಪಾತ್ರಕ್ಕಾಗಿ ಜನಪ್ರಿಯರಾಗಿದ್ದಾರೆ. ಅವರು ವಿವಿಧ ಪ್ರಾದೇಶಿಕ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಆದರೆ ಈಗ, ಅವರು ಬಾಲಿವುಡ್ ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.
ಅಅವಿಕಾ ಗೋರ್ ಈಗಾಗಲೇ ಸೌತ್ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. 2013 ರಲ್ಲಿ, ಅವರು ‘ಉಯ್ಯಾಲಾ ಜಂಪಾಲಾ’ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಚಿತ್ರದಲ್ಲಿನ ತನ್ನ ಪಾತ್ರಕ್ಕಾಗಿ ಅವರು ಅತ್ಯುತ್ತಮ ಯುವ ನಟಿ ಪ್ರಶಸ್ತಿ ಪಡೆದಿದ್ದರು. ‘ಸಿನಿಮಾ ಚೂಪಿಸ್ತ ಮಾವ’, ‘ಕೇರ್ ಆಫ್ ಫುಟ್‌ಪಾತ್ 2’, ‘ಎಕ್ಕಡಿಕಿ ಪೋತಾವು ಚಿನ್ನವಾಡ’, ‘ರಾಜು ಗರಿ ಗಾದಿ 3’ ಮತ್ತು ‘ನೆಟ್’ ಮುಂತಾದ ಯಶಸ್ವಿ ಚಿತ್ರಗಳಲ್ಲಿ ನಟಿಸಿದರು.
Balika vadhu