Beast Box Office collection Day 12 : ಗಲ್ಲಾಪೆಟ್ಟಿಗೆಲ್ಲಿ ಫೇಲಾದ ಬೀಸ್ಟ್
ಏಪ್ರಿಲ್ 13 ರಂದು ರಿಲೀಸ್ ಆದ ಬೀಸ್ಟ್ KGF 2 ಮುಂದೆ ಡಲ್ ಆಗಿದೆ.. ತಮಿಳುನಾಡಿನಲ್ಲೂ ಬೀಸ್ಟ್ ಮುಂದೆ KGF 2 ಅಬ್ಬರಿಸುತ್ತಿದೆ.. ಬೀಸ್ಟ್ ಸಿನಿಮಾಗೆ ಹೇಳಿಕೊಳ್ಳುವಂತಹ ಉತ್ತಮ ರೆಸ್ಪಾನ್ಸ್ ಸಿಗ್ತಿಲ್ಲ.. ವಿಜಯ್ ಅವರ ಅಪಿಯರೆನ್ಸ್ ಅವರ ನಟನೆಗೆ ಫುಲ್ ಮಾರ್ಕ್ಸ್ ಸಿಕ್ರೂ ,,, ಸಿನಿಮಾ ಬಗ್ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿಲ್ಲ..
ಈ ರೀತಿ ಬೆಟ್ಟದಷ್ಟು ನಿರೀಕ್ಷೆ ಹುಟ್ಟುಹಾಕಿ ಟುಸಸ್ ಆದ ಬೀಸ್ಟ್ ಸಿನಿಮಾ ದಳಪತಿ ಅಭಿಮಾನಿಗಳ ಡಿಸಪಾಯಿಂಟ್ ಮೆಂಟ್ ಗೆ ಕಾರಣವಾಗಿದೆ..
ದಳಪತಿ ವಿಜಯ್ ಬೀಸ್ಟ್ ಆರಂಭಿಕ ವಾರಾಂತ್ಯದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನವನ್ನು ಕಂಡಿತು. ಎರಡನೇ ವಾರದಲ್ಲಿ ಚಿತ್ರವು ವೇಗವನ್ನು ಪಡೆದುಕೊಳ್ಳುವಲ್ಲಿ ವಿಫಲವಾಗಿದೆ.
ಏಪ್ರಿಲ್ 13 ರಂದು ದಳಪತಿ ವಿಜಯ್ ಅವರ Beast ಗಲ್ಲಾಪೆಟ್ಟಿಗೆಯಲ್ಲಿ ಅಷ್ಟಾಗಿ ಮೋಡಿ ಮಾಡ್ತಿಲ್ಲ..
KGF 2 ಜೊತೆಗೆ ತೀವ್ರ ಸ್ಪರ್ಧೆ ಬೀಸ್ಟ್ ಗೆ ದೊಡ್ಡ ಹೊಡೆಎತ ನೀಡಿದೆ.. ವ್ಯಾಪಾರ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಅವರು ವಿಜಯ್ ಅವರ ಚಿತ್ರ ಎರಡನೇ ವಾರದಲ್ಲಿ ವೇಗವನ್ನು ಪಡೆಯುವಲ್ಲಿ ವಿಫಲವಾಗಿದೆ ಎಂದು ತಿಳಿಸಿದ್ದಾರೆ.. “#Beast WW ಬಾಕ್ಸ್ ಆಫೀಸ್ ಅಂತಿಮವಾಗಿ ಚಿತ್ರವು ರೂ 150 ಕೋಟಿ ದಾಟಲು ನಿರ್ವಹಿಸುತ್ತದೆ. ವಾರ 1 – ರೂ 143.72 ಕೋಟಿ. ವಾರ 2 ದಿನ 1 – ರೂ 1.96 ಕೋಟಿ. ದಿನ 2 – ರೂ 1.53 ಕೋಟಿ. ದಿನ 3 – ರೂ 1.30 ಕೋಟಿ. ದಿನ 4 – ರೂ 1.58 ಕೋಟಿ. ಒಟ್ಟು – ರೂ 150.09 ಕೋಟಿ .”
ಬೀಸ್ಟ್ ನಗರದಲ್ಲಿ 26 ಶೋಗಳನ್ನು ಹೊಂದಿದ್ದು, ನಗರದಲ್ಲಿ 2.32 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ತಿರುಚ್ಚಿ ಫಿಲ್ಮ್ಸ್‌ನ ಟ್ವಿಟರ್ ಹ್ಯಾಂಡಲ್ ಬರೆದಿದೆ.