ಅಂಡರ್ ವರ್ಲ್ಡ್ ಕಥೆ ಹೇಳಹೊರಟ ಧ್ರುವ – ಪ್ರೇಮ್
ಮುಂಬರುವ ಧ್ರುವ ಸರ್ಜಾ ಹಾಗೂ ಪ್ರೇಮ್ ಕಾಂಬಿನೇಷನ್ ನ ಸಿಇನಿಮಾ ಮೇಲೆ ಈಗಿನಿಂದಲೇ ಕ್ರೇಜ್ ಹೆಚ್ಚಾಗಿದೆ… ಅದ್ಧೂರಿ ಜೊತೆಗೆ ಕ್ರೇಜಿ ಕಾಂಬಿನೇಷ್ ಆಗಿರಲಿದೆ ಈ ಸಿನಿಮಾ.. ಇನ್ನೂ
ಪ್ರಸ್ತುತ ಎ ಪಿ ಅರ್ಜುನ್ ನಿರ್ದೇಶನದ ಮಾರ್ಟಿನ್ ಸಿನಿಮಾದ ಚಿತ್ರೀಕರಣದಲ್ಲಿ ಧ್ರುವ ಬ್ಯುಸಿಯಾಗಿದ್ರೆ ,, ಪ್ರೇಮ್ ಅವರು ಇತ್ತೀಚೆಗಷ್ಟೇ ಏಕ್ ಲವ್ ಯಾ ಸಿನಿಮಾ ರಿಲೀಸ್ ಆಗಿ ಸಕ್ಸಸ್ ಖುಷಿಯಲ್ಲಿದ್ದಾರೆ..
ಇದೀಗ ಪ್ರೇಮ್ ಧ್ರುವ ಸಿನಿಮಾ ಲಾಂಚ್ ಆಗಿದೆ.. ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು , ಧ್ರುವ ಸಂಪೂರ್ಣವಾಗಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಈ ಸಿನಿಮಾ ಮೂಲಕ ಗುರುತಿಸಿಕೊಳ್ಳಲಿದ್ಧಾರೆ.
ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್ ಕಾಂಬಿನೇಷನ್ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ಇದೇ ಸಿನಿಮಾವನ್ನು ಅಣ್ಣಾವ್ರ ಹುಟ್ಟುಹಬ್ಬದ ದಿನದಂದು, ಮೈಸೂರಿನ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಮುಹೂರ್ತ ಮಾಡಿದೆ. ಪೂಜೆ ಸಲ್ಲಿಸಿದ ನಂತರ ನಿರ್ದೇಶಕ ಪ್ರೇಮ್, ರಕ್ಷಿತಾ, ಧ್ರುವ ಸರ್ಜಾ ಹಾಗೂ ನಿರ್ಮಾಪಕರಾದ ನಿಶಾ ವೆಂಕಟ್ ಕೊಣಂಕಿ ಚಿತ್ರಕ್ಕೆ ಚಾಲನೆ ನೀಡಿದರು.
ಅಂದ್ಹಾಗೆ ಈ ಸಿನಿಮಾದ ಬಗ್ಗೆ ಸಾಕಷ್ಟು ಕ್ಯೂರಿಯಾಸಿಟಿ ಇದೆ.. ಅದಕ್ಕೆ ಕಾರಣ ‘1970-ಯುದ್ಧದ ಮುನ್ನುಡಿ ಇಲ್ಲಿಂದ ಆರಂಭ’ ಎಂದು ಪೋಸ್ಟರ್ ನಲ್ಲಿ ಗಮನ ಸೆಲೆಯುತ್ತಿರುವ ಸಬ್ ಟೈಟಲ್.
ಸದ್ಯ ಸಿನಿಮಾದ ಶೂಟಿಂಗ್ ಆರಂಭ ಆಗಿದ್ದು, ಮೇ ತಿಂಗಳಿನಲ್ಲಿ ಚಿತ್ರದ ಟೈಟಲ್ ಲಾಂಚ್ ಮಾಡಲು ಚಿತ್ರ ತಂಡ ಮುಂದಾಗಿದೆ. ಅಂದ್ಹಾಗೆ ಇದು 1970ರ ಬೆಂಗಳೂರಿನ ಭೂಗತಲೋಕದ ನೈಜ ಕಥೆಯನ್ನು ಆಧರಿಸಿದ ಚಿತ್ರವಾಗಿದ್ದು, ಫ್ಯಾನ್ ಇಂಡಿಯಾ ಸಿನಿಮಾವಾಗಿದೆ.