Dolly dhananjay
Head Bush : Dolly Dhananjay : ಕಂಪ್ಲೀಟ್ ಶೂಟಿಂಗ್ ಮುಗಿಸಿದ ಡಾಲಿ
ಬಹುಭಾಷಷಾ ನಟಟನಾಗಿ , ಹೀರೋ ಆಗಿ ವಿಲ್ಲನ್ ಆಗಿ ಮಿಂಚುತ್ತಿರುವ ನಿರ್ಮಾಪಕನಾಗಿಯೂ ಯಶಸ್ಸು ಗಳಿಸಿರುವ ವರ್ಸಟೈಲ್ ಆಕ್ಟರ್ ಡಾಲಿ ಧನಂಜಯ್ ಗೆ ದೊಡಡ್ಡ ಅಭಿಮಾನಿಗಳ ಬಳಗವೇ ಇದೆ.. ಇತ್ತೀಚೆಗೆ ಅವರ ಬಡವ ರಾಸ್ಕಲ್ ಸಿನಿಮಾ ಸೂಪರ್ ಹಿಟ್ ಆಗಿದೆ..
ಇದೀಗ ಡಾಲಿ ಧನಂಜಯ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದು , ಈ ನಡುವೆಯೇ ಹೆಡ್ ಬುಷ್ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ.. ಬೆಂಗಳೂರು ಅಂಡರ್ ವರ್ಲ್ಡ್ ಡಾನ್ ಎ .ಪಿ. ಜಯರಾಜ್ ಜೀವನಾಧಾರಿತ ಸಿನಿಮಾ ಹೆಡ್ ಬುಷ್ .
ಇದೀಗ ಈ ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದೆ.. ಬೆಂಗಳೂರಿನಲ್ಲೇ ಚಿತ್ರದ ಚಿತ್ರೀಕರಣ ನಡೆದಿದೆ. ಡಾಲಿ ಧನಂಜಯ ಜಯರಾಜ್ ಅವರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರವನ್ನು ಶೂನ್ಯ ನಿರ್ದೇಶಿಸುತ್ತಿದ್ದಾರೆ.
1970 ರ ಬೆಂಗಳೂರಿನ ಭೂಗತ ಜಗತ್ತನ್ನು ಈ ಸಿನಿಮಾ ಮೂಲಕ ತೋರಿಸಲು ತಂಡ ಸಜ್ಜಾಗಿದೆ.
ಡಾಲಿ ಧನಂಜಯ, ಪಾಯಲ್ ರಜಪೂತ್, ರವಿಚಂದ್ರನ್, ಲೂಸ್ ಮಾದ ಯೋಗಿ, ವಸಿಷ್ಠ ಎನ್ ಸಿಂಹ, ದೇವರಾಜ್, ಶೃತಿ ಹರಿಹರನ್, ರಘು ಮುಖರ್ಜಿ, ಬಾಲು ನಾಗೇಂದ್ರ ಸೇರಿದಂತೆ ದೊಡಡ್ಡ ತಾರಾಬಳಗವೇ ಸಿನಿಮಾದಲ್ಲಿದೆ..
ಅಂದ್ಹಾಗೆ ಡಾಲಿ ಪಿಕ್ಚರ್ಸ್ ಹಾಗೂ ಸೋಮಣ್ಣ ಟಾಕೀಸ್ ಲಾಂಛನದಲ್ಲಿ ಡಾಲಿ ಧನಂಜಯ ಹಾಗೂ ರಾಮ್ಕೊ ಸೋಮಣ್ಣ ಈ ಚಿತ್ರವನ್ನ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.
ಚರಣ್ ರಾಜ್ ಸಂಗೀತ ನಿರ್ದೇಶನ , ಸುನೊಜ್ ವೇಲಾಯಧನ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ..
Head Bush : dolly completes shooting