Isha : ಬಾಲಿವುಡ್ ನಟನನ್ನ ಒಬ್ಬಂಟಿಯಾಗಿ ಭೇಟಿಯಾಗಲು ನಿರಾಕರಿಸಿದಕ್ಕೆ ಸಿನಿಮಾದಿಂದಲೇ ಕೈಬಿಟ್ಟರು : ಇಶಾ
ಬಾಲಿವುಡ್ ನಟನನ್ನು ಒಬ್ಬಂಟಿಯಾಗಿ ಭೇಟಿಯಾಗಲು ನಿರಾಕರಿಸಿದ್ದರಿಂದ ಸಿನಿಮಾವೊಂದರಿಂದ ನನ್ನನ್ನ ಕೈಬಿಡಲಾಗಿತ್ತು ಎಂದು ಸಸಿನಿಮಾರಂಗದ ಅದ್ರಲ್ಲೂ ಬಾಲಿವುಡ್ ನ ಕರಾಳ ಮುಖವಾಡವನ್ನ ಬಿಚ್ಚಿಟಟ್ಟಿದ್ದಾರೆ ‘ಸೂರ್ಯವಂಶ’ ನಟಿ ಇಶಾ ಕೊಪ್ಪಿಕರ್ ಬಹಿರಂಗಪಡಿಸಿದ್ದಾರೆ..
ಹೌದು ಕನ್ನಡದಲ್ಲಿ ಸೂರ್ಯವಂಶ ಸಿನಿಮಾ ಮೂಲಕ ಖ್ಯಾತಿ ಗಳಿಸಿದ್ದ ಇಶಾ ಬಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾಗಳನ್ನ ಮಾಡಿದ್ದಾರೆ.. ಇಶಾ ಕೊಪ್ಪಿಕರ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸಿನಿಮಾರಂಗದಲ್ಲಿ ತಮಗಾದ ಕಹಿ ಅನುಭವದ ಬಗ್ಗೆ ಮಾತನಾಡಿದ್ದಾರೆ..
ಬಾಲಿವುಡ್ ನಟರೊಬ್ಬರು ತಮ್ಮ ನ್ನ ಒಬ್ಬರೇ ಭೇಟಿಯಾಗಲು ಕೇಳಿದಕ್ಕೆ ನಿರಾಕರಿಸಿದ್ದ ಹಿನ್ನೆಲೆ ಸಿನಿಮಾ ಒಂದರಿಂದ ಕೈಬಿಡಲಾಗಿದ್ದ ಬಗ್ಗೆ ಹೇಳಿಕೊಂಡಿದ್ದಾರೆ.. ಆದ್ರೆ ನಟನ ಹೆಸರನ್ನ ಬಹಿರಂಗ ಪಡಿಸಿಲ್ಲ..