KGF 2 ಬಗ್ಗೆ ಮಾತನಾಡುತ್ತಾ ಹಿಂದಿ ಇನ್ನೂ ರಾಷ್ಟ್ರೀಯ ಭಾಷೆಯಾಗಿಲ್ಲ ಎಂದ ಕಿಚ್ಚ
ಉಪೇಂದ್ರ ನಟನೆಯ R ಸಿನಿಮಾದ ಬಿಡುಗಡೆ ಸಮಾರಂಭದಲ್ಲಿ ಕಿಚ್ಚ ಸುದೀಪ್ ಅವರು ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಮಾತನಾಡ್ತಾ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದಿದ್ದಾರೆ.. ದಕ್ಷಿಣದ ನಿರ್ದೇಶಕರು ಜಾಗತಿಕ ಉಪಸ್ಥಿತಿಯನ್ನು ಹೊಂದಿರುವ ಸಿನಿಮಾಗಳನ್ನ ಮಾಡುತ್ತಿದ್ದಾರೆ ಬಾಲಿವುಡ್ ಈಗ ತೆಲುಗು ಮತ್ತು ತಮಿಳಿನಲ್ಲಿ ಡಬ್ಬಿಂಗ್ ಆಗುತ್ತಿದೆ, ಆದರೆ ಯಶಸ್ಸಿನ ಪ್ರಮಾಣ ಕಡಿಮೆಯಾಗಿದೆ ಎಂದಿದ್ದಾರೆ..
ಅಲ್ಲದೇ KGF 2 ಅಬ್ಬರದ ಬಗ್ಗೆಯೂ ಮಾತನಾಡುತ್ತಾ ಪ್ಯಾನ್ ಇಂಡಿಯಾ ಚಿತ್ರವನ್ನು ಕನ್ನಡದಲ್ಲಿ ನಿರ್ಮಿಸಲಾಗಿದೆ ಎಂದು ನೀವು ಹೇಳಿದ್ದೀರಿ. ನಾನು ಒಂದು ಸಣ್ಣ ತಿದ್ದುಪಡಿ ಮಾಡಲು ಬಯಸುತ್ತೇನೆ. ಹಿಂದಿ ಇನ್ನು ರಾಷ್ಟ್ರೀಯ ಭಾಷೆಯಾಗಿಲ್ಲ. ಅವರು (ಬಾಲಿವುಡ್) ಇಂದು ಪ್ಯಾನ್-ಇಂಡಿಯಾ ಚಲನಚಿತ್ರಗಳನ್ನು ಮಾಡುತ್ತಿದ್ದಾರೆ. ಅವರು ತೆಲುಗು ಮತ್ತು ತಮಿಳಿನಲ್ಲಿ ಡಬ್ಬಿಂಗ್ ಮಾಡುವ ಮೂಲಕ (ಯಶಸ್ಸು ಕಂಡುಕೊಳ್ಳಲು) ಹೆಣಗಾಡುತ್ತಿದ್ದಾರೆ, ಆದರೆ ಅದು ಆಗುತ್ತಿಲ್ಲ. ಇಂದು ನಾವು ಎಲ್ಲೆಡೆ ಹಿಟ್ ಆಗುವ ಚಿತ್ರಗಳನ್ನ ಮಾಡುತ್ತಿದ್ದೇವೆ ಎಂದರು.