KRK Trailer : ವಿಜಯ್ ಸೇತುಪತಿ ಜೊತೆ ಸಮಂತಾ , ನಯನತಾರಾ ಟ್ರೈಯಾಂಗಲ್ ಲವ್..!!!
ವಿಜಯ್ ಸೇತುಪತಿ ಹೀರೋ ಆಗಿ ಹಿಟ್ ಆಗಿರೋದಕ್ಕಿಂತ ಹೆಚ್ಚಾಗಿ ವಿಲ್ಲನ್ ಆಗಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.. ‘ಸೈರಾ’ ಚಿತ್ರದಲ್ಲಿ ಪೋಷಕ ನಟನಾಗಿ ಮತ್ತು ‘ಮಾಸ್ಟರ್’ ‘ಉಪ್ಪೇನಾ’ ಚಿತ್ರದಲ್ಲಿ ಖಳನಾಯಕನಾಗಿ ಟಾಲಿವುಡ್ ಪ್ರೇಕ್ಷಕರನ್ನು ರಂಜಿಸಿದ್ದಾರೆ.
ಇದೀಗ ಮತ್ತೊಮ್ಮೆ ತಮಿಳಿನಲ್ಲಿ ಅವರು ಹೀರೋ ಆಗಿ ನಟಿಸುತ್ತಿದ್ದಾರೆ.. ಅವರು ಹೀರೋ ಆಗಿ ತಮಿಳಿನಲ್ಲಿ ನಟಿಸಿರುವ ಅನೇಕ ಸಿನಿಮಾಗಳು ತೆಲುಗಿಗೂ ಡಬ್ ಆಗಿವೆ. ಆದರೆ.. ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ವಿಫಲವಾಗಿವೆ.
ಆದರೆ ಈ ಬಾರಿ ಅವರು ಹೀರೋ ಆಗಿ ಯಶಸ್ಸು ಗಳಿಸುವ ತವಕದಲ್ಲಿದ್ಧಾರೆ. ಅವರು ನಾಯಕನಾಗಿ ನಟಿಸಿರುವ ‘ಕೆಆರ್‌ಕೆ’ (ಕಣ್ಮಣಿ ರಾಂಬೋ ಖತೀಜಾ) ಚಿತ್ರ ಏಪ್ರಿಲ್ 28 ರಂದು ಬಿಡುಗಡೆಯಾಗಲಿದೆ.
ಈ ಚಿತ್ರವನ್ನು ನಯನತಾರಾ ಗೆಳೆಯ ವಿಘ್ನೇಶ್ ಶಿವನ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿಗೆ ನಾಯಕಿಯರಾಗಿ ನಯನತಾರಾ ಮತ್ತು ಸಮಂತಾ ನಟಿಸಿದ್ದಾರೆ.
ಇನ್ನು ಟ್ರೈಲರ್ ವಿಚಾರಕ್ಕೆ ಬಂದರೆ. ಸಮಂತಾ ಹಾಗೂ ನಯನತಾರಾ ಹಾಗೂ ವಿಜಯ್ ಸೇತುಪತಿ ಅವರದ್ದು ಟ್ರಯಾಂಗಲ್ ಲವ್ ಸ್ಟೋರಿಯಂತೆ ಕಂಡುಬಂದಿದೆ..
ಒಂದೆಡೆ ನಯನತಾರಾ ಅವರ ಜೊತೆಗೆ ಮದುವೆ, ಮತ್ತೊಂದೆ ಸಮಂತಾ ಜೊತೆಗೆ ಪ್ರೀತಿ ಎರಡರ ನಡುವೆ ಸಿಲುಕಿ ವಿಜಯ್ ಸೇತುಪತಿ ಒದ್ದಾಟವನ್ನ ಟ್ರೇಲರ್ ನಲ್ಲಿ ತೋರಿಸಲಾಗಿದೆ..