Meena : ಹಿರಿಯ ನಟಿ ಮೀನಾ ತಾಯಿಯಾಗ್ತಿದ್ದಾರಾ..??
ಕನ್ನಡ , ತಮಿಳು , ತೆಲುಗು , ಮಲಯಾಳಂ ಹೀಗೆ ಸೌತ್ ಇಂಡಸ್ಟ್ರಿಯಲ್ಲಿ ಸ್ಟಾರ್ ಗಳ ಜೊತೆಗೆ ಸ್ಕ್ರೀನ್ ಶೇರ್ ಮಾಡಿ ಮಿಂಚಿರುವ ಹಿರಿಯ ನಟಿ ಮೀನಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್..
ಇದೀಗ ಮೀನಾ ತಾಯಿಯಾಗಲಿದ್ದಾರೆ ಎಂಬ ಸುದ್ದಿ ಹಲ್ ಚಲ್ ಸೃಷ್ಟಿ ಮಾಡಿದೆ . ಇಂತಹ ಸುದ್ದಿಗೆ ಕಾರಣ ಅವರು ಹಾಕಿರುವ ಬೇಬಿ ಬಂಪ್ ಫೋಟೋ..
ಅಂದ್ಹಾಗೆ ಈಗಾಗಲೇ ಮೀನಾ ಹೆಣ್ಣುಮಗಳಿಗೆ ತಾಯಿಯಾಗಿದ್ದಾರೆ.. ನೈನಿಕಾ ಅವರ ಪುತ್ರಿಯಾಗಿದ್ದು , ಸಿನಿಮಾರಂಗದಲ್ಲಿ ಬಾಲ ಕಲಾವಿದೆಯೂ ಆಗಿದ್ದಾರೆ..
ಮದುವೆಯ ನಂತರ ಮೀನಾ ಸಿನಿಮಾರಂಗದಿಂದ ದೂರ ಉಳಿದಿದ್ದರು.. . ಆದರೆ ಇತ್ತೀಚೆಗೆ ಇಂಡಸ್ಟ್ರಿಯಲ್ಲಿ ಎರಡನೇ ಇನ್ನಿಂಗ್ಸ್ ಶುರು ಮಾಡಿದ್ದಾರೆ. ತಾಯಿ, ಸಹೋದರಿಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಆದರೆ, ಇತ್ತೀಚೆಗೆ ಮೀನಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಇತ್ತೀಚೆಗಷ್ಟೇ ಒಂದು ಪೋಸ್ಟ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಒಂದು ಕಾಲದಲ್ಲಿ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಈ ರೀತಿಯಾದ ಲುಕ್ ಪಡೆಯುವುದು ತುಂಬಾ ಸುಲಭವಾಗಿತ್ತು.. ಈಗ ಎಲ್ಲವೂ ಬದಲಾಗಿದೆ. ಆಗ ಕವರ್ ಮಾಡಲು ಭಾರವಾದ ಸೀರೆಗಳನ್ನು ಧರಿಸಲು ಬಯಸಿದ್ದೆ ಆದರೆ ಈಗ ಲುಕ್ ಗೆ ಆದ್ಯತೆ ನೀಡಲಾಗಿದೆ.. ನೈಸರ್ಗಿಕವಾಗಿ ಕಾಣಲು ಶಿಫಾನ್ ಸೀರೆಗಳನ್ನು ಸಹ ಧರಿಸಬಹುದು ಎಂದು ಅವರು ವೀಡಿಯೊವನ್ನು ಹಂಚಿಕೊಂಡಿದ್ದು ಮಾಹಿತಿ ನೀಡಿದ್ದಾರೆ..
ಅಂದ್ರೆ ಅವರ ಬೇಬಿ ಬಂಪ್ ಫೋಟೋ ನಕಲಿ.. ಅವರು ಮಾಹಿತಿ ನೀಡಲು ಈ ರೀತಿ ತೋರಿಸಿಕೊಂಡಿದ್ದಾರಷ್ಟೇ..