ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಲಕ್ಷ್ಮಿ ಬಾರಮ್ಮ’ ಚಿನ್ನು ರಶ್ಮಿ
ಲಕ್ಷ್ಮಿ ಬಾರಮ್ಮ ಸೀರಿಯಲ್ ಮೂಲಕ ಚಿನ್ನು ಆಗಿಯೇ ಮನೆ ಮಾತಾದ ಕಿರುತೆರೆ ನಟಿ ರಶ್ಮಿ ಪ್ರಭಾಕರ್ ತಮ್ಮ ಬಹುಕಾಲದ ಗೆಳೆಯನ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. ಶುಭ ವಿವಾಹ, ಜೀವನ ಚೈತ್ರ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ರಶ್ಮಿ ನಟಿಸಿದ್ದಾರೆ.
ಬೆಂಗಳೂರಿನಲ್ಲಿ ನಿಖಿಲ್ ಎಂಬುವವರ ಕೈಹಿಡಿದಿದ್ದಾರೆ. ಇವರ ವಿವಾಹ ಸಮಾರಂಭದಲ್ಲಿ ಅನೇಕ ಕಿರುತೆರೆ ಕಲಾವಿದರು ಭಾಗಿಯಾಗಿದ್ದರು.. ವಿಶೇಷ ಅಂದ್ರೆ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಮೊದಲಿಗೆ ಚಂದು , ಚಿನ್ನು ಆಗಿ ನಟಿಸಿದ್ದ ಚಂದನ್ ಹಾಗೂ ಕವಿತಾ ಗೌಡ ಕೂಡ ಭಾಗಿಯಾಗಿ ಶುಭ ಹಾರೈಸಿದ್ದಾರೆ..
ರಶ್ಮಿ ಪ್ರಭಾಕರ್ ಮಹಾಭಾರತ, ದರ್ಪಣ, ಮನಸೆಲ್ಲ ನೀನೇ ಶುಭಾ ವಿವಾಹ ಹಾಗೂ ತೆಲುಗಿನಲ್ಲಿ ಪೌರ್ಣಿಮಿ, ಕಾವ್ಯಾಂಜಲಿ ಸೇರಿದಂತೆ ಹತ್ತಾರು ಧಾರಾವಾಹಿಗಳಲ್ಲಿ ನಟಿಸಿದ್ಧಾರೆ..
ಅಂದ್ಹಾಗೆ ರಶ್ಮಿಯ ಕೈ ಹಿಡಿದಿರುವ ನಿಖಿಲ್ ಅವರಿಗೆ ಈ ಹಿಂದೆ ಮಾಧ್ಯಮ ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವವಿದೆ. ಪ್ರಸ್ತುತ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿ ಆಗಿದ್ದಾರೆ. ಮೂರು ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದರು.. ಇದೀಗ ಹಸೆಮಣೆ ಏರಿದ್ಧಾರೆ.