Rashmika : ಜ್ಯೂನಿಯರ್ NTR ಸಿನಿಮಾದಿಂದ ಆಲಿಯಾ ಔಟ್ , ರಶ್ಮಿಕಾ ಇನ್..
RRR ಸಿನಿಮಾ ಮೂಲಕ ಮೊದಲ ಬಾರಿಗೆ ಸೌತ್ ಸಸಿನಿಮಾ ಇಂಡಸ್ಟ್ರಿ ಪ್ರವೇಶಿಸಿದ್ದ ಆಲಿಯಾಗೆ ಸೌತ್ ನಲ್ಲಿ ಇನ್ನೂ ಹೆಚ್ಚು ಸಿನಿಮಾಗಳನ್ನ ಮಾಡುವ ಆಸೆಯಿತ್ತು.. ಅಲ್ಲದೇ ಜ್ಯೂ. NTR ಅವರ ಮುಂದಿನ ಸಿನಿಮಾದಲ್ಲಿ ಅವರು ನಟಿಸಲಿದ್ದಾರೆ ಎಂದೇ ಹೇಳಲಾಗಿತ್ತು.. ಆದ್ರೆ ಈಗ ಆಲಿಯಾ ಈ ಸಿನಿಮಾದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗ್ತಿದೆ.. ಇದಕ್ಕೆ ಪ್ರಮುಖ ಕಾರಣ ಆಲಿಯಾಗೆ RRR ನಲ್ಲಿ ಅತಿ ಚಿಕ್ಕ ಪಾತ್ರ ಕೊಟ್ಟಿರುವುದು ಎಂದೇ ಹೇಳಲಕಾಗ್ತಿದೆ..
ಅಂದ್ಹಾಗೆ ಆಲಿಯಾ ಬದಲಾಗಿ ಇದೀಗ ಕನ್ನಡ ಬಿಟ್ಟು ಬೇರೆ ಭಾಷೆಗಳಲ್ಲಿ ಸೆಟಲ್ ಆಗಿರುವ ಕಿರಿಕ್ ಪಾರ್ಟಿ ನಟಿ ರಶ್ಮಿಕಾ ಮಂದಣ್ಣ ಫೈನಲ್ ಆಗಿದ್ಧಾರೆ.. ಚಿತ್ರದ ಸಕ್ಸಸ್ ನಂತರ ಯಂಗ್ ಟೈಗರ್ ಜ್ಯೂ.ಎನ್ಟಿಆರ್ ಕೊರಟಾಲ ಶಿವ ನಿರ್ದೇಶನದ ಹೊಸ ಚಿತ್ರದಲ್ಲಿ ಕಾಣಸಿಕೊಳ್ಳಲು ಸಜ್ಜಾಗಿದ್ದಾರೆ.
ಪುಷ್ಪ ಸಸಿನಿಮಾದ ಸಕ್ಸಸ್ ನ ನಂತರ ಪುಷ್ಪ 2 ನಲ್ಲಿ ಮತ್ತೆ ಬಾಲಿವುಡ್ ನಲ್ಲೂ ಬ್ಯುಸಿಯಾಗಿರುವ ರಶ್ಮಿಕಾ ತಮಿಳಿನ ಸೂಪರ್ ಸ್ಟಾರ್ ದಳಪತಿ ವಿಜಯ್ 66ನೇ ಸಿನಿಮಾಗೂ ಆಯ್ಕೆಯಾಗಿದ್ದರು.. ಈ ಸಿನಿಮಾದ ಮುಹೂರ್ತ ಇತ್ತೀಚೆಗೆ ಸೆರವೇರಿದೆ..
Shilpa Shetty : ರೋಹಿತ್ ಶೆಟ್ಟಿಯ ಕಾಪ್ ಯೂನಿವರ್ಸ್ ಸೇರಿಕೊಂಡ ಶಿಲ್ಪಾ ಶೆಟ್ಟಿ
Mrunal Thakur : ಬಾಡಿ ಶೇಮಿಂಗ್ ಗೆ ಗುರಿಯಾಗಿದ್ದರಂತೆ ಕ್ಯೂಟ್ ನಟಿ ಮೃನಾಲ್..!!!