Sanjana Galrani : ಸಂಜನಾ ಸೀಮಂತ ಕಾರ್ಯಕ್ರಮ
ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಸದ್ಯ ಗರ್ಭವತಿಯಾಗಿದ್ದು , ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ.. ಫೋಟೋ ವಿಡಿಯೋಗಳನ್ನ ಹಂಚಿಕೊಳ್ತಾ ಇರುತ್ತಾರೆ.. ಡ್ರಗ್ ಲಿಂಕ್ ಕೇಸ್ ನಲ್ಲಿ ಜೈಲು ಸೇರಿ ಮೂರು ತಿಂಗಳ ನಂತರ ಜಾಮೀನಿನ ಮೇಲೆ ಹೊರಬಂದಿದ್ದ ಸಂಜನಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ.. ಅಂದ್ಹಾಗೆ ಸಂಜನಾ ತುಂಬು ಗರ್ಭಿಣಿಯಾಗಿದ್ದು ,, ಇತ್ತೀಚೆಗೆ ಸೀಮಂತ ಕಾರ್ಯಕ್ರಮ ನೆರವೇರಿದ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ಧಾರೆ..
‘ಗಂಡ ಹೆಂಡತಿ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದ ಸಂಜನಾ ನಂತರ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.. ಪರಭಾಷಾ ಚಿತ್ರಗಳಲ್ಲೂ ನಟಿಸಿದ್ದಾರೆ. ಕೆಲ ದಿನಗಳ ಹಿಂದೆಷ್ಟೇ ತಾವು ಗರ್ಭೀಣಿಯಾಗಿರುವ ವಿಚಾರವನ್ನ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. ಈಗ ಸಂಜನಾ ತಮ್ಮ ಸೀಮಂತದ ಶಾಸ್ತ್ರದ ಸಂಭ್ರಮದ ಕ್ಷಣಗಳ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಈ ಫೋಟೋಗಳು ಭಾರೀ ವೈರಲ್ ಆಗಿದೆ.