Shilpa Shetty : ರೋಹಿತ್ ಶೆಟ್ಟಿಯ ಕಾಪ್ ಯೂನಿವರ್ಸ್ ಸೇರಿಕೊಂಡ ಶಿಲ್ಪಾ ಶೆಟ್ಟಿ
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಿನಿಮಾಗಳಲ್ಲಿ ನಟಿಸುತ್ತಿರೋದು ಕಡಿಮೆ,,,,, ಆದ್ರೆ ಜಾಹಿರಾತು ಫಿಟ್ ನೆಸ್ ವಿಚಾರದಿಂದ ಸುದ್ದಿಯಲ್ಲಿರುತ್ಥಾರೆ.., ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್.. ಇದೆಲ್ಲದರ ಜೊತೆಗೆ ನಟಿ ರಿಯಾಲಿಟಿ ಶೋಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ..
ಇದೀಗ ಅವರು ಮುಂದಿನ ಪ್ರಾಜೆಕ್ಟ್ ನಲ್ಲಿ ಗನ್ ಹಿಡಿಯಲು ರೆಡಿಯಾಗಿದ್ಧಾರೆ.. ಅಂದ್ರೆ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಸ್ಟ್ರೀಮಿಂಗ್ ಸರಣಿ ‘ಇಂಡಿಯನ್ ಪೊಲೀಸ್ ಫೋರ್ಸ್’ ನ ಭಾಗವಾಗಿ ಶಿಲ್ಪಾ ಶೆಟ್ಟಿ ಅವರು ನಟಿಸುತ್ತಿರುವುದನ್ನ ಅಧಿಕೃತವಾಗಿ ಘೋಷಿಸಲಾಗಿದೆ,
ಶಿಲ್ಪಾ ಈ ಸರಣಿಯ ಮೊದಲ, ಟೆರರ್ ಲುಕ್ ಅನ್ನ ಹಂಚಿಕೊಂಡಿದ್ದಾರೆ “ಮೊದಲ ಬಾರಿಗೆ OTT ಪ್ಲಾಟ್ ಫಾರ್ಮ್‌ಗೆ ಫೈಯರ್ ಹಚ್ಚಲು ಸಿದ್ಧವಾಗಿದೆ. ಆಕ್ಷನ್ ಕಿಂಗ್ ರೋಹಿತ್ ಶೆಟ್ಟಿ ಅವರ ಕಾಪ್ ಯೂನಿವರ್ಸ್ ಇಂಡಿಯನ್ ಪೋಲೀಸ್ ಫೋರ್ಸ್ ಆನ್ ಪ್ರೈಮ್‌ನಲ್ಲಿ ಸೇರಲು ಸೂಪರ್ ಥ್ರಿಲ್ ಆಗುತ್ತಿದೆ ಎಂದಿದ್ದಾರೆ. ಚಿತ್ರೀಕರಣ ನಡೆಯುತ್ತಿದೆ..