KGF 2 : 12 ನೇ ದಿನವೂ ಬಾಕ್ಸ್ ಆಫೀಸ್ ನಲ್ಲಿ ರಾಕಿಗೆ ಜಯ – 1000 ಕೋಟಿಗೆಷ್ಟು ಬೇಕು..??
12 ನೇ ದಿನವೂ ನಿಲ್ಲದ ‘ಕೆಜಿಎಫ್ 2’ ಅಬ್ಬರ
ಬಾಕ್ಸ್ ಆಫೀಸ್ ನಲ್ಲಿ ತೂಫಾನ್ ಎಬ್ಬಿಸಿರುವ KGF 2 ಸಿನಿಮಾದ ಅಬ್ಬರ ಸದ್ಯಕ್ಕಂತೂ ಕಡಿಮೆಯಾಗೋ ಯಾವುದೇ ಲಕ್ಷಣ ಕಾಣ್ತಿಲ್ಲ.. ಈಗಾಗಲೇ ಸಿನಿಮಾ 900 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಆಗೊದೆ. 1000 ಕೋಟಿ ಕ್ಲಬ್ ಸೇರೋಕೆ ಹೆಚ್ಚು ಟೈಮ್ ಹಿಡಿಯೋದಿಲ್ಲ.. RRR , ಬಾಹುಬಲಿ 2 ಎಲ್ಲದರ ರೆಕಾರ್ಡ್ ಬೀಟ್ ಮಾಡೊಕೆ ತುಂಬಾ ಟೈಮ್ ಹಿಡಿಯೋದಿಲ್ಲ.. ಇನ್ನೂ ಮೇ 27 ರವರೆಗೂ ಥಿಯೇಟರ್ ಗಳಲ್ಲಿ ಸಸಿನಿಮಾ ಅಬ್ಬರಿಸಿ ಆ ನಂತರವಷ್ಟೇ ಒಟಿಟಿಗೆ ಬರಲಿದೆ..
Sandalwood : ಜವಾರಿ ಭಾಷೆಯ ‘ಬಯಲುಸೀಮೆ’ ಸಿನಿಮಾ ಆಡಿಯೋ ಲಾಂಚ್
ಯಶ್ ಅಭಿನಯದ ಸಿನಿಮಾ 12 ನೇ ದಿನವೂ ಆಕ್ಸ್ ಆಫೀಸ್ ನಲ್ಲಿ ಅಬ್ಬರಿಸುತ್ತಿದೆ.. ಅದೇ ರಿಲೀಸ್ ಆಗಿ 3 ದಿನವಳೇ ಕಳೆದ್ರೂ ಜೆರ್ಸಿ ಬಾಕ್ಸ್ ಆಫೀಸ್ ನಲ್ಲಿ ಡಲ್ ಹೊಡೆಯುತ್ತಿದೆ..
ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರವು ಏಪ್ರಿಲ್ 14 ರಂದು ಬಿಡುಗಡೆಯಾದಾಗಿನಿಂದ ಹಲವಾರು ದಾಖಲೆಗಳನ್ನು ಮುರಿಯುತ್ತಿದೆ ಮತ್ತು ಇತರ ಚಿತ್ರಗಳನ್ನು ಹಿಂದೆ ಹಾಕುತ್ತಿದೆ.
ಶಾಹಿದ್ ಕಪೂರ್ ಅಭಿನಯದ ‘ಜೆರ್ಸಿ’ ಚಿತ್ರವೂ ರಾಕಿ ಭಾಯ್ ಅಬ್ಬರದ ಮುಂದೆ ನಲುಗುತ್ತಿದೆ.. ಪ್ರೇಕ್ಷಕರ ಹೃದಯದಲ್ಲಿ ತನ್ನ ಛಾಪು ಮೂಡಿಸಲು ಸಾಧ್ಯವಾಗಲಿಲ್ಲ.
ಈ ಚಿತ್ರವು ಶೀಘ್ರದಲ್ಲೇ 1000 ಕೋಟಿ ರೂಪಾಯಿಗಳನ್ನು ಮುರಿಯುವ ನಿರೀಕ್ಷೆಯಿದೆ. ಸಿನಿಮಾ 12 ನೇ ದಿನ 7 ಕೋಟಿ ಕಲೆಕ್ಷನ್ ಮಾಡಿದೆ..
ಹಿಂದಿ ಬೆಲ್ಟ್ ನಲ್ಲಿ ಒಟ್ಟಾರೆ 321 ಕೋಟಿ ರೂ ಕಲೆಕ್ಷನ್ ಮಾಡಿದೆ..
ಒಟ್ಟಾರೆಯಾಗಿ 12 ದಿನಗಳಲ್ಲಿ ಸಿನಿಮಾ 930 ಕೋಟಿ ವಲ್ಡ್ ವೈಡ್ ಕಲೆಕ್ಷನ್ ಮಾಡಿದೆ..
‘ಕೆಜಿಎಫ್ 2’ ಸಿನಿಮಾವನ್ನ ಪ್ರಶಾಂತ್ ನೀಲ್ ಬರೆದು ನಿರ್ದೇಶಿಸಿದ್ದಾರೆ, ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಿದೆ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಇದರಲ್ಲಿ ಶ್ರೀನಿಧಿ ಶೆಟ್ಟಿ, ಪ್ರಕಾಶ್ ರಾಜ್, ಮಾಳವಿಕಾ ಅವಿನಾಶ್, ಜಾನ್ ಕೊಕ್ಕೆನ್ ಮತ್ತು ಸರಣ್ ಕೂಡ ಇದ್ದಾರೆ.
#RockyBhai is #RocKING on [second] Sun… #KGF2 hits it out of the stadium yet again… *Weekend 2* crosses ₹ 50 cr mark, FANTASTIC… NOW, 6TH HIGHEST GROSSING *HINDI* FILM… [Week 2] Fri 11.56 cr, Sat 18.25 cr, Sun 22.68 cr. Total: ₹ 321.12 cr. #India biz. #Hindi pic.twitter.com/QNgGIGwrgP
— taran adarsh (@taran_adarsh) April 25, 2022