KGF 2 : ಸೌತ್ ಸಿನಿಮಾಗಳನ್ನ ನೋಡಿಲ್ಲ , ನೋಡೋದು ಇಲ್ಲ , ಸಕ್ಸಸ್ ತಾತ್ಕಾಲಿಕ : ನವಾಜುದ್ದೀನ್
ಬಾಲಿವುಡ್ ಮುಳುಗೋಗ್ತಿದೆ… ಆದ್ರೂ ಕೆಲ ಸೋ ಕಾಲ್ಡ್ ಸ್ಟಾರ್ ಗಳ ತಲೆಗೆ ಈ ವಿಚಾರ ಹೋಗಿಲ್ಲ ಅನ್ಸುತ್ತೆ.. ಅಲ್ಲಾ ಭಾರತೀಯ ಸಿನಿಮಾಗಳೆಂದ್ರೆ ಬಾಲಿವುಡ್ ಅಲ್ಲ,,, ಈಗೇನಿದ್ರೂ ಇಂಡಿಯನ್ ಸಿನಿಮಾಗಳು ಅಂತ ಯಾರಾದ್ರೂ ಅವರ ತಲೆಗೆ ಹೋಗುವಂತೆ ಹೇಳುವ ಅವಶ್ಯಕತೆ ಇದ್ಯೆನೋ.. ಬಾಲಿವುಡ್ ಸ್ಟಾರ್ ಗಳಿಗೆ ಈಗ ಸೌತ್ ಸಿನಿಮಾಗಳ ಮೇಲೆ ಉರಿ ಶುರುವಾಗೋಗಿದೆ..
ಬಾಲಿವುಡ್ ಮಂದಿಗೆ ತಮ್ಮ ನೆಲೆ ಉಳಿಸಿಕೊಳ್ಳುವ ಹುಚ್ಚಾಸೆ ಇದ್ದಿದ್ರೆ ,, ರೀಮೇಕ್ ಸಿನಿಮಾಗಳನ್ನೇ ಮಾಡ್ತಿರಲಿಲ್ಲ.. ಕಂಟೆಂಟ್ ಇಲ್ದೇ ಸೌತ್ ಸಿನಿಮಾಗಳನ್ನೇ ರೀಮೇಕ್ ಮಾಡಿಕೊಂಡವರು ಈಗ RRR , KGF 2 , ಬಾಹುಬಲಿ , ಪುಷ್ಪ , ರೋಬೋ ಸಿನಿಮಾಗಳ ಮೇಲೆ ಉರಿದುಕೊಂಡಿದ್ದಾರೆ..
ಯಾರೋ ಬೆರಳೆಣಿಕೆಯಷ್ಟು ಜನ ಮಾತ್ರವೇ ಸಿನಿಮಾಗಳಿಗೆ ಸಪೋರ್ಟ್ ಮಾಡಿದ್ರೆ ಇನ್ನೂ ಕೆಲ ಸೋ ಕಾಲ್ಡ್ ಬಿ ಟೌನ್ ಸ್ಟಾರ್ ಗಳಿಗೆ ಪಾಪ ಸೌತ್ ಅಬ್ಬರವನ್ನ ಸಹಿಸೋದಕ್ಕಾಗ್ತಿಲ್ಲ..
ಹೌದು.. ಇದಕ್ಕೆ ಕಾರಣವೇ ಇತ್ತೀಚೆಗೆ ಬಾಲಿವುಡ್ ನಟ ನವಾಜ್ ಉದ್ದೀನ್ ಸಿದ್ಧಿಕ್ಕಿ ಸೌತ್ ಸಿನಿಮಾಗಳ ಬಗ್ಗೆ ನೀಡಿರುವ ಹೇಳಿಕೆ…
ಇಡೀ ವಿಶ್ವಕ್ಕೆ ತಮ್ಮ ಪವರ್ ತೀರಿಸಿರುವ ಸೌತ್ ಸಿನಿಮಾಗಳ ಆರ್ಭಟ ತಾತ್ಕಾಲಿಕ ಎಂದಿದ್ದಾರೆ ಮಿಸ್ಟರ್ ನವಾಜುದ್ದೀನ್..
ಹಿಂದಿ ಬೆಲ್ಟ್ ನಲ್ಲೂ ಬಾಲಿವುಡ್ ಕೈ ಬಿಟ್ಟು ಜನ ಸೌತ್ ಸಿನಿಮಾಗಳಿಗೆ ಜೈಕಾರ ಹಾಕ್ತಿರೋದನ್ನ ಬಹುಶಃ ಸಹಿಸಲಾಗದೇ ಇಂತಹ ಹೇಳಿಕೆ ನೀಡ್ತಿರಬೇಕೆಂದು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಸಿದ್ದಿಕ್ಕಿಯನ್ನ ಹಿಗ್ಗಾಮುಗ್ಗಾ ಟ್ರೋಲ್ ಮಾಡ್ತಿದ್ದಾರೆ..
ಅಲ್ಲ… ಸಿನಿಮಾ ಅಂದ್ರೆ ನಮ್ದೇ,,., ರೀಮೇಕ್ ಮಾಡಿದ್ರೂ ನಾವೇ ಗ್ರೇಟ್… ಸಿನಿಮಾ ಕಥೆಗಳನ್ನ ಕದ್ರೂ ನಾವೇ ಸುಪ್ರೀಂ ಅಂದುಕೊಂಡಿದ್ದವರಿಗೆ ಸೌತ್ ಸಿನಿಮಾಗಳ ಆರ್ಭಟ ಅಸೂಯೆ ಹುಟ್ಟಿಸಿದೆ.. ಏನ್ ಮಾಡೋಕಾಗಲ್ಲ..
ನವಾಜುದ್ದೀನ್ ಸಿದ್ಧಿಕಿ ನಟಿಸಿರುವ ‘ಹೀರೋಪಂತಿ 2’ ಸಿನಿಮಾ ಬಿಡುಗಡೆ ಆಗಿದೆ.. ಅಬ್ಬರಿಸುತ್ತೋ ಇಲ್ವೋ ಗೊತ್ತಿಲ್ಲ.. ಇದೇ ಸಿನಿಮಾದ ಪ್ರಚಾರದ ವೇಳೆ ನಡೆದ ಸಂದರ್ಶನವೊಂದ್ರಲ್ಲಿ ಮಾತನಾಡಿರೋ ನವಾಜುದ್ದೀನ್ ಸಾಹೇಬ್ರು ದಕ್ಷಿಣ ಭಾರತದ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿದ್ದು, ಬಾಲಿವುಡ್ ಅನ್ನು ಮೀರಿಸಿ ಬೆಳೆಯುತ್ತಿರುವ ಬಗ್ಗೆ ಸಂದರ್ಶಕಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
ಸಿನಿಮಾಗಳು ಹಿಟ್ ಆದಾಗ ಎಲ್ಲರೂ ಅದರ ಬಗ್ಗೆ ಮಾತನಾಡುತ್ತಾರೆ, ಒಂದೆರಡು ಸಿನಿಮಾ ಫ್ಲಾಪ್ ಆದರೆ ಆ ಜನ ಮರೆತುಬಿಡುತ್ತಾರೆ ಎಂದಿದ್ಧಾರೆ.. ಇವರ ಮಾತಿನ ಅರ್ಥ ಸ್ಪಷ್ಟ.. ದಕ್ಷಿಣ ಭಾರತ ಸಿನಿಮಾಗಳ ಯಶಸ್ಸು ತಾತ್ಕಾಲಿಕ ಎಂಬುದು ಇವರ ಅಭಿಪ್ರಾಯ.. ಓ… ಭ್ರಮೆ..!!! ಎನ್ನುವುದು ಜನರ ಅಭಿಪ್ರಾಯ…
ಇದೇ ವೇಳೆ RRR , ಪುಷ್ಪ, KGF 2 ಸಿನಿಮಾಗಳ ಯಶಸ್ಸಿನ ಬಗ್ಗೆ ಸಂದರ್ಶಕಿ ಮಾಡಿದ ಪ್ರಶ್ನೆಗೆ ಉತ್ತರಿಸಿರುವ ನವಾಜುದ್ದೀನ್ ಆ ಸಿನಿಮಾಗಳನ್ನು ನಾನು ನೋಡಿಲ್ಲ. ನೋಡುವುದೂ ಇಲ್ಲ. ನನಗೆ ಕಮರ್ಶಿಯಲ್ ಸಿನಿಮಾಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ನನಗೆ ಇಷ್ಟವಾಗುವುದಿಲ್ಲ. ಅಂಥಹ ಸಿನಿಮಾಗಳಲ್ಲಿ ನಟಿಸುತ್ತೇನೆ, ಆದರೆ ಅಂಥಹ ಸಿನಿಮಾಗಳನ್ನು ನೋಡುವುದಿಲ್ಲ ಎಂದಿದ್ದಾರೆ ನವಾಜುದ್ದೀನ್ ಸಿದ್ಧಿಕಿ.
ಸೂಪರ್ ಅಂತಹ ಸಿನಿಮಾಗಳಲ್ಲಿ ನಟಿಸುತ್ತಾರಂತೆ ನೋಡೋದಿಲ್ವಂತೆ… ವ್ಹಾ ವ್ಹಾ…!!!
ಅಷ್ಟೇ ಅಲ್ಲ ಇದೇ ವೇಳೆ ಮಾತು ಮುಂದುವಚರೆಸಿರುವ ಮಿಸ್ಟರ್ ನವಾಜುದ್ದೀನ್ ಅವರು ”ಯಾವುದೇ ಸಿನಿಮಾ ಹಿಟ್ ಆದಾಗ ಜನರೆಲ್ಲ ಅದರ ಬಗ್ಗೆ ಮಾತನಾಡಲು ಆರಂಭಿಸುತ್ತಾರೆ. ಹಿಟ್ ಸಿನಿಮಾದ ನಂತರ ಬರುವ ಸ್ಕ್ರಿಪ್ಟ್‌ಗಳು ಅದೇ ಮಾದರಿಯಲ್ಲಿಯೇ ಇರುತ್ತವೆ, ನಟರೂ ಸಹ ಹಿಟ್ ಸಿನಿಮಾದ ರೀತಿಯಲ್ಲಿಯೇ ಕತೆಗಳನ್ನು ಆಯ್ಕೆ ಮಾಡಿಕೊಳ್ಳಲು ತೊಡಗುತ್ತಾರೆ. ಆದರೆ ಅದೆಲ್ಲ ತಾತ್ಕಾಲಿಕ ಅಷ್ಟೆ, ಒಂದೆರಡು ಸಿನಿಮಾ ಫ್ಲಾಪ್ ಆದರೆ ಜನ ಎಲ್ಲವನ್ನೂ ಮರೆತುಬಿಡುತ್ತಾರೆ. ಆದರೆ ಜನ ಚಿತ್ರಮಂದಿರಕ್ಕೆ ಮರಳಿ ಬರುತ್ತಿದ್ದಾರೆ ಎಂಬುದು ಸಂತೋಷದ ವಿಷಯ ಎಂದಿದ್ದಾರೆ..
ಈ ನಟ ನಮ್ಮ ಇಂಡಿಯನ್ ಸಿನಿಮಾಗಳನ್ನ ನೋಡಿಲ್ವಂತೆ.. ಆದ್ರೆ ವಿದೇಶಿ ಸಿನಿಮಾಗಳನ್ನ ನೋಡಿದ್ದಾರಂತೆ.. ಅವನ್ನ ಇಷ್ಟ ಪಟ್ಟಿದ್ದಾರಂತೆ.. ತಪ್ಪಿಲ್ಲ ಸಿನಿಮಾ ಚನಾಗಿದ್ರೆ ಎಲ್ಲಾ ಬಾಷೆಯ ಸಿನಿಮಾಗಳು ಇಷ್ಟವಾಗ್ತವೆ.. ಆದ್ರೆ ನಮ್ಮ ಸೌತ್ ಸಿನಿಮಾಗಳನ್ನ ನೋಡುವುದು ಟೈಮ್ ವೇಸ್ಟ್ ಎಂಬಂತೆ ಮಾತನಾಡಿದ್ಧಾರೆ …
ಅವರೇನ್ ಹೇಳಿದ್ದಾರೆ ನೋಡಿ ,,, ನೀವೇ ಅರ್ಥ ಮಾಡಿಕೊಳ್ಳಿ..!!
”ನನ್ನ ಜೀವನದ ಎರಡು ಗಂಟೆ ಯಾವುದಕ್ಕಾದರೂ ನೀಡುತ್ತಿದ್ದೇನೆ ಅಂದರೆ ಅದು ಅದ್ಭುತವಾಗಿರಬೇಕು. ನನ್ನನ್ನು ಯೋಚನೆಗೆ ಹಚ್ಚಬೇಕು, ನನ್ನಲ್ಲಿ ಸ್ಪೂರ್ತಿ ತುಂಬಬೇಕು, ನನ್ನ ಮೆದುಳಿಗೆ ಕೆಲಸ ನೀಡಬೇಕು, ನಾನು ಇನ್ನೂ ಉತ್ತಮ ವ್ಯಕ್ತಿಯಾಗುವಲ್ಲಿ ಪ್ರೇರೇಪಿಸಬೇಕು, ಅಂಥಹ ಸಿನಿಮಾಗಳನ್ನಷ್ಟೆ ನಾನು ನೋಡುತ್ತೇನೆ. ಕೆಲವು ದಿನಗಳ ಹಿಂದೆ ನಾನು ಫ್ರೀಯಾಗಿದ್ದೆ, ಆಗ ಕಿಂಗ್ ರಿಚರ್ಡ್ಸ್, ಕೋಡಾ ಸಿನಿಮಾಗಳನ್ನು ನೋಡಿದೆ” ಎಂದಿದ್ದಾರೆ.
ದಕ್ಷಿಣ ಸಿನಿಮಾಗಳ ಯಶಸ್ಸಿಗೆ ಭಯಬಿದ್ದು ಸೌತ್ ಸಿನಿಮಾಗಳ ಬಗ್ಗೆ ಕೇವಲವಾಗಿ ಮಾತನಾಡಿರೋ ಮಿಸ್ಟರ್ ನವಾಜುದ್ದೀನ್ ಸಾಹೇಬ್ರು ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರ ಪೇಟ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ..
ಒಟ್ನಲ್ಲಿ ಬಾಲಿವುಡ್ ನವರಿಗೆ ಸೌತ್ ಸಿನಿಮಾ ಸಕ್ಸಸ್ ಸಹಿಸೋಕಾಗದೇ ಹೀಗೆ ಏನೇನೋ ಮಾತನಾಡ್ತಾ ಇದ್ದಾರೆ… ಆದ್ರೆ ಸೌತ್ ಸಿನಿಮಾಗಳ ಆರ್ಭಟ ಈಗ ಸದ್ಯಕ್ಕಂತೂ ತಗ್ಗಲ್ಲ,,, ಅಲ್ಲ ಬಾಲಿವುಡ್ ನ ಪೂರ್ತಿ ಮಲಗಿಸಿದ ನಂತರವೇ ಇದು ಸೋ ಕಾಲ್ಡ್ ಬಾಲಿವುಡ್ ನ ಸ್ಟಾರ್ ಗಳಿಗೆ ಅರ್ಥವಾಗೋದು ಅಂತ ಕಾಣುತ್ತೆ..
ಅಷ್ಟಕ್ಕೂ ಬಾಲಿವುಡ್ ಸಾಯುತ್ತಿರೋದಕ್ಕೆ ಮುಖ್ಯ ಕಾರಣವೇ , ನೆಪೋಟಿಸಮ್ , ಸ್ಟ್ರಗ್ಲಿಂಗ್ ಆಕ್ಟರ್ ಗಳಿಗೆ ಅವರು ಮಾಡೋ ಅವಮಾನ , ಸ್ಟಾರ್ ಕಿಡ್ ಗಳಿಗಷ್ಟೇ ಅವಕಾಶಗಳು , ರೀಮೇಕ್ ಸಿನಿಮಾಗಳನ್ನ ನಂಬಿ ಬದುಕುತ್ತಿರುವುದು , ಕಂಟೆಂಟ್ ಕೊರತೆ , ಸಂಪ್ರದಾಯಕ್ಕೆ ಅವಮಾನ , ಪಾಶ್ಚಿಮಾತ್ಯತೆಯೇ ಹೆಚ್ಚು ತೋರಿಸುವ ಶೈಲಿ , ವಿವಾದಗಳು , ಬಾಲಿವುಡ್ ಮಾಫಿಯಾ,,,,
ಇದೆಲ್ಲಾಕಿಂತ ಹೆಚ್ಚು ಬಾಲಿವುಡ್ ಅವನತಿಗೆ ನಾಂದಿ ಹಾಡಿದ್ದು ಸುಶಾಂತ್ ಸಿಂಗ್ ರಂತಹ ಪ್ರತಿಭಾವಂತ ನಟ ಬಾರದ ಲೋಕಕ್ಕೆ ಪಪಯಣ ಬೆಳೆಸಿದ್ದು., ಅವರಿಗೆ ಇಂಡಸ್ಟ್ರಿಯಲ್ಲಿ ಆದ ಹಿಂಸೆ ,, ಅವಕಾಶಗಳನ್ನ ಕೈತಪ್ಪಿಸಿದ್ದರಿಂದಲೇ ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ,.
ಅಂದ್ಹಾಗೆ ಹೊಟ್ಟೆ ಉರಿದುಕೊಳ್ತಿರುವ ಬಾಲಿವುಡ್ ಸ್ಟಾರ್ ಗಳ ಮುಂದೆ ಕೆಲವರು ಸೌತ್ ಸಿನಿಮಾಗಳನ್ನ ಕೊಂಡಾಡುತ್ತಿರುವವರೂ ಇದ್ದಾರೆ.. ಕಂಗನಾ ರಣೌತ್ ಕೂಡ ಈ ಪೈಕಿ ಒಬ್ಬರು..
KGF 2 , RRR : nawazzuddin mocks south cinemas