Rashmika Mandanna : ಮುಂಬೈನಲ್ಲೂ ‘ಕಿರಿಕ್’ ರಾಣಿಯದ್ದೇ ಹವಾ,,!!!
ಭಾನುವಾರ ಮಧ್ಯಾಹ್ನ ಮುಂಬೈನಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದು, ಪಾಪರಾಜಿಗಳು ಅಭಿಮಾನಿಗಳು ಅವರನ್ನ ಸುತ್ತುವರೆದ ದೃಶ್ಯ ಕಂಡುಬಂದಿದೆ.. ಈ ವಿಡಿಯೋ ವೈರಲ್ ಆಗ್ತಿದ್ದು ಎಷ್ಟೇ ಇರಿಟೇಟ್ ಆದ್ರೂ ಸಹ ನಗುತ್ತಲೇ ಎಲ್ಲರತ್ತ ಕೈ ಬೀಸಿ ನಗುಬೀರಿ ಕೈನಲ್ಲೇ ಪುಟ್ಟ ಹಾರ್ಟ್ ಸಿಂಬಲ್ ತೋರಿಸಿ ಅಭಿಮಾನಿಗಳಿಗೆ ಸೆಲ್ಫಿಗೆ ಫೋಸ್ ಕೊಟ್ಟು ತೆರಳಿದ್ದಾರೆ..
ರಶ್ಮಿಕಾ ಮುಂಬೈನ ರೆಸ್ಟೋರೆಂಟ್‌ನಿಂದ ಹೊರಬರುತ್ತಿರುವುದನ್ನು ನೋಡಿದ ಅಭಿಮಾನಿಗಳ ಗುಂಪು ಅವರನ್ನು ಸುತ್ತುವರೆದು ಸೆಲ್ಫಿಗಾಗಿ ಮುಗಿಬಿದ್ದಿದ್ಧಾರೆ. ಜನಸಮೂಹದ ಹೊರತಾಗಿಯೂ, ರಶ್ಮಿಕಾ ದೊಡ್ಡ ನಗು ಬೀರಿ ಹೊರಟರು..
ಸದ್ಯ ಬಾಲಿವುಡ್ ನಲ್ಲಿ 3 ನೇ ಸಿನಿಮಾದಲ್ಲಿ ರಣ್ ವೀರ್ ಜೊತೆಗೆ ನಟಿಸುತ್ತಿರುವ ರಶ್ಮಿಕಾ ಇತ್ತೀಚೆಗೆ ರಣವೀರ್ ಜೊತೆಗೆ ಮನಾಲಿಯಲ್ಲಿ ಕಾಣಿಸಿಕೊಂಡಿದ್ದರು.. ಇದೀಗ ಮನಾಲಿಯಿಂದ ವಾಪಸ್ಸಾಗಿದ್ಧಾರೆ.