ಬಾಲಿವುಡ್ ಗೆ ಸಚಿನ್ ಪುತ್ರಿ ಸಾರಾ ಪಾದಾರ್ಪಣೆ..!!
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಪುತ್ರ ತಂದೆಯಂತೆ ಕ್ರಿಕೆಟ್ ಹಾದಿಯಲ್ಲಿ ಹೆಜ್ಜೆ ಹಾಕಿದ್ಧಾರೆ.. ಪ್ರಸ್ತುತ ಮುಂಬೈ ಇಂಡಿಯನ್ಸ್ ತಂಡದ ಹೆಚ್ಚುವರಿ ಆಟಗಾರ ಆಗಿದ್ದಾರೆ,..
ಆದ್ರೆ ತೆಂಡೂಲ್ಕರ್ ಅವರ ಪುತ್ರಿ ಮಾತ್ರ ತಾಯಿಯ ಹಾದಿಯಲ್ಲಿ ಸಾಗಿದ್ದು ಲಂಡನ್ ನಲ್ಲಿ ಮೆಡಿಸಿನ್ ಪದವಿ ಪಡೆದಿದ್ದಾರೆ.. ಆದ್ರೆ ನಟನೆಯತ್ತ ಆಸಕ್ತಿ ಬೆಳೆಸಿಕೊಂಡಿದ್ಧಾರೆ.. ಕೆಲ ತಿಂಗಳ ಹಿಂದೆ ಬ್ರ್ಯಾಂಡ್ ಒಂದಕ್ಕೆ ಮಾಡೆಲ್ ಆಗಿ ಕಾಣಿಸಿಕೊಂಡಿದ್ದರು. ಈಗ ಸಾರಾ ತೆಂಡೂಲ್ಕರ್ ಸಿನಿಮಾಗಳಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಬಿ ಟೌನ್ ನಲ್ಲಿ ಸೌಂಡ್ ಮಾಡ್ತಿದೆ..
ಸಾರಾ ತೆಂಡೂಲ್ಕರ್ ನಟನಾ ತರಬೇತಿ ಪಡೆಯುತ್ತಿದ್ದು, ಸಿನಿಮಾಗಳಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಅಂದ್ಹಾಗೆ ಸಾರಾ ಸಿನಿಮಾರಂಗ ಪ್ರವೇಶ ಅವರ ತಾಯಿಯ ಆಸೆಯಂತೆ.. ಸಾರಾ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್.. ಅವರಿಗೆ ಇನ್ ಸ್ಟಾಗ್ರಾಂನಲ್ಲಿ 1.9 ಮಿಲಿಯನ್ ಫಾಲೋವರ್ ಗಳಿದ್ದಾರೆ.. ಬಾಲಿವುಡ್ ನಲ್ಲಿ ಅವರ ಅದೃಷ್ಟ ಹೇಗಿರಲಿದೆ ಅನ್ನೋದನ್ನ ಕಾದು ನೋಡ್ಬೇಕಿದೆ..
ಯಾಕೆಂದ್ರೆ ಎಷ್ಟೇ ದೊಡ್ಡ ಸ್ಟಾರ್ ಗಳಾದ್ರೂ ಕೆಲವರು ಹಿಟ್ ಆದ್ರೆ ಇನ್ನೂ ಕೆಲವರ ಅದೃಷ್ಟ ಕೈ ಕೊಡುತ್ತೆ… ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಶ್ರೀದೇವಿ ಜಾಹ್ನವಿ ಕಪೂರ್.. ಜಾಹ್ನವಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ಧಾರೆ.. ಯಾವುದರಲ್ಲೂ ಯಶಸ್ಸು ಮಾತ್ರ ಸಿಕ್ಕಿಲ್ಲ.. ಮತ್ತೊಂದೆಡೆ ಸೈಫ್ ಪುತ್ರಿ ಸಾರಾ ಅಲಿ ಖಾನ್ ಮಿಂಚುತ್ತಿದ್ದಾರೆ..
ಇತ್ತ ಅನನ್ಯಾ ಪಾಂಡೆ ಫ್ಲಾಪ್ ಆಗ್ತಿದ್ದರೆ ,, ಮತ್ತೊಂದೆಡೆ ಆಲಿಯಾ ಹಿಟ್ ಆಗಿದ್ದಾರೆ.. ಅದೇ ರಣಬೀರ್ ಕಪೂರ್ , ಅಭಿಷೇಕ್ ಬಚ್ಚನ್ ಕೂಡ ಹೇಳಿಕೊಳ್ಳುವಂತಹ ಹಿಟ್ ಸಿನಿಮಾಗಳನ್ನ ನೀಡಿಲ್ಲ.