ತಮಿಳು ಹೀರೋ ಸಂತಾನಂಗೆ ಪ್ರಶಾಂತ್ ರಾಜ್ ಆಕ್ಷನ್ ಕಟ್..!!!
ಸೆಟ್ಟೇರಿತು ನಿರ್ದೇಶಕ ಪ್ರಶಾಂತ್ ರಾಜ್ ಹೊಸ ಸಿನಿಮಾ..ತಮಿಳು ಹೀರೋ ಸಂತಾನಂಗೆ ಆಕ್ಷನ್ ಕಟ್..ಸರಳವಾಗಿ ನೆರವೇರಿತು ಸಿನಿಮಾದ ಮುಹೂರ್ತ
ಆರೆಂಜ್, ದಳಪತಿ, ಜೂಮ್, ಲವ್ ಗುರು ಸಿನಿಮಾಗಳ ಖ್ಯಾತಿಯ ಪ್ರಶಾಂತ್ ರಾಜ್ ನಿರ್ದೇಶನದ ಹೊಸ ಸಿನಿಮಾ ಸೆಟ್ಟೇರಿದೆ. ಈ ಬಾರಿ ಪ್ರಶಾಂತ್ ಕನ್ನಡದ ಜೊತೆಗೆ ತಮಿಳಿನಲ್ಲೂ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಅದರ ಮೊದಲ ಭಾಗವಾಗಿ ಇವತ್ತು ಬೆಂಗಳೂರಿನ ಕೊಂದಂಡ ರಾಮ ದೇಗುಲದಲ್ಲಿರುವ ಸಾಯಿಬಾಬಾ ಮಂದಿರದಲ್ಲಿ ಸಿನಿಮಾದ ಮುಹೂರ್ತ ನೆರವೇರಿದೆ.
ಇಂದಿನಿಂದ ಶೂಟಿಂಗ್ ಶುರು
ಫಾರ್ಚುನ್ ಫಿಲ್ಮಂ ಬ್ಯಾನರ್ ನಡಿ ಪ್ರೊಡಕ್ಷನ್ ನಂಬರ್ 10 ಟೈಟಲ್ ನಡಿ ಸೆಟ್ಟೇರಿರುವ ಈ ಸಿನಿಮಾದಲ್ಲಿ ತಮಿಳಿನ ಖ್ಯಾತ ನಟ ಸಂತಾನಂ ನಾಯಕನಾಗಿ ನಟಿಸ್ತಿದ್ದು, ತಾನ್ಯ ಹೋಪ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಜಾನರ್ ಈ ಸಿನಿಮಾಗೆ ನವೀನ್ ರಾಜ್ ಬಂಡವಾಳ ಹೂಡಿದ್ದಾರೆ. ಇಂದಿನಿಂದ ಶೂಟಿಂಗ್ ಶುರು ಮಾಡಿರುವ ಪ್ರಶಾಂತ್ ರಾಜ್, ಫಸ್ಟ್ ಡೇ ಶೆಡ್ಯೂಲ್ಡ್ ನಲ್ಲೂ ಬೆಂಗಳೂರಿನಲ್ಲಿ ಮುಗಿಸಿಕೊಂಡು, ಆ ನಂತ್ರ ಚೆನ್ನೈನಲ್ಲಿ ಹಾಗೂ ವಿದೇಶದಲ್ಲಿ ಹಾಡು, ಕೆಲವೊಂದು ದೃಶ್ಯಗಳನ್ನು ಚಿತ್ರೀಕರಿಕರಿಸಲು ಪ್ಲ್ಯಾನ್ ಹಾಕಿಕೊಂಡಿದ್ದಾರೆ.
ಪ್ರಶಾಂತ್ ರಾಜ್ ಸಿನಿಮಾಗಳು ಅಂದ್ರೆ ಅಲ್ಲಿ ಸಂಗೀತಕ್ಕೆ ಹೆಚ್ಚಿನ ಪ್ರಾಧ್ಯಾನ್ಯತೆ ಇರುತ್ತದೆ. ಅದರಂತೆ ಈ ಬಾರಿ ಪ್ರಶಾಂತ್ ಮ್ಯೂಸಿಕಲ್…,.