ಕಮಲಿ ಧಾರಾವಾಹಿಯ ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್
ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿ ‘ಕಮಲಿ’ಗೆ ದೊಡ್ಡ ಅಭಿಮಾನಿ ಬಳಗವೇ ಇದೆ.. ಈ ಧಾರವಾಹಿ ಅನೇಕರ ಫೇವರೇಟ್ ಕೂಡ.. ಇದೀಗ ಈ ಧಾರಾವಾಹಿಯ ನಿರ್ದೇಶಕರಾದ ಅರವಿಂದ್ ಕೌಶಿಕ್ ಅವರನ್ನ ವಂಚನೆ ಪ್ರಕರಣದಲ್ಲಿ ಅರೆಸ್ಟ್ ಮಾಡಲಾಗಿದೆ..
ಅಂದ್ಹಾಗೆ ಧಾರಾವಾಹಿ ನಿರ್ಮಾಕರು ನಿರ್ದೇಶಕ ಅರವಿಂದ್ ವಿರುದ್ಧ ಲಕ್ಷಾಂತರ ರೂಪಾಯಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.. ವೈಯ್ಯಾಲಿಕಾವಲ್ ಪೊಲೀಸರು ನಿರ್ದೇಶಕರನ್ನ ಬಂಧಿಸಿದ್ದಾರೆ.
ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಹೆಸರು ಮಾಡಿದ್ದ ಅರವಿಂದ್ ಕೌಶಿಕ್, ನಮ್ ಏರಿಯಾದಲ್ಲಿ ಒಂದಿನ, ಹುಲಿರಾಯ ಶಾರ್ದೂಲ, ಸಿನಿಮಾಗಳ ನಿರ್ದೇಶನ ಮಾಡಿದ್ದರು. ಕನ್ನಡ ಕಿರುತೆರೆಯಲ್ಲಿ ಅರವಿಂದ್ ಕೌಶಿಕ್ ಕಮಲಿ ಧಾರವಾಹಿ ನಿರ್ದೇಶನ ಮಾಡಿದ್ದರು. ಕಮಲಿ ಧಾರವಾಹಿ ನಿರ್ಮಾಣ ಮಾಡಲಿಕ್ಕೆ ರೋಹಿತ್ 73 ಲಕ್ಷ ಹಣ ಹೂಡಿಕೆ ಮಾಡಿದ್ದರು.
ಧಾರವಾಹಿ ತೆರೆಕಂಡ ನಂತರ ಹಣ ಹಿಂತಿರುಗಿಸದೇ ಲಾಭಾಂಶವನ್ನೂ ನೀಡದೇ ವಂಚಸಿದ್ದಾರೆ ಎಂದು ನಿರ್ಮಾಪಕ ರೋಹಿತ್ ವೈಯ್ಯಾಲಿಕಾವಲ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ನಿರ್ದೇಶಕ ಅರವಿಂದ್ ಕೌಶಿಕ್ ವಿರುದ್ದ ಐಪಿಸಿ ಸೆಕ್ಷನ್ 506 ಮತ್ತು 420 ಅಡಿ ಪ್ರಕರಣ ದಾಖಲಿಸಿದ್ದರು.
2020ರಲ್ಲಿಯೇ ರೋಹಿತ್ ಎಸ್, ಅರವಿಂದ್ ಕೌಶಿಕ್ ಹಾಗೂ ಇನ್ನಿತರರ ವಿರುದ್ಧ ದೂರು ನೀಡಿದ್ದರು. ಕಮಲಿ ಧಾರಾವಾಹಿಯನ್ನು ರೋಹಿತ್.ಎಸ್ ನಿರ್ಮಾಣ ಮಾಡಿದ್ದಾರೆ. ಆರಂಭದಲ್ಲಿ ಕಮಲಿ ಸಂಚಿಕೆಗಳ ಟೈಟಲ್ ಕಾರ್ಡ್ ನಲ್ಲಿ ನಿರ್ಮಾಪಕ ರೋಹಿತ್.ಎಸ್ ಎಂದೇ ತೋರಿಸಲಾಗಿದೆ. ಬಳಿಕ ರೋಹಿತ್ ಹೆಸರನ್ನ ತೆಗೆದು ಹಾಕಲಾಗಿತ್ತು. ತಾವು ನಿರ್ದೇಶಕ ಅಶೋಕ್ ಕಶ್ಯಪ್ ರ ಸತ್ವ ಮೀಡಿಯಾಗೆ 73 ಲಕ್ಷ ರುಪಾಯಿ ಹಣ ನೀಡಿದ್ದು ಧಾರಾವಾಹಿ ಪ್ರಾರಂಭವಾದಾಗಿನಿಂದಲೂ ಒಂದು ರುಪಾಯಿ ಲಾಭವನ್ನೂ ಪಡೆದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು..
ವಯ್ಯಾಲಿ ಕಾವಲ್ ಪೊಲೀಸ್ ಠಾಣೆಯಲ್ಲಿ ನಿರ್ದೇಶಕ ಅಶೋಕ್ ಕಶ್ಯಪ್, ಪತ್ನಿ ಶಿಲ್ಪಾ, ನವೀನ್ ಸಾಗರ್ ಮತ್ತು ಜೀ ಕನ್ನಡ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು ವಿರುದ್ಧ ಎಸ್ ರೋಹಿತ್ ದೂರು ನೀಡಿದ್ದರು. ಆದರೆ ಈಗ ನಿರ್ದೇಶಕ ಅಶೋಕ್ ಕಶ್ಯಪ್ ರನ್ನ ಪೊಲೀಸರು ಬಂಧಿಸಿದ್ದಾರೆ.