Mollywood ನ ಸ್ಟಾರ್ ನಟಿ ಮಂಜು ವಾರಿಯರ್ ಅವರ ಅಭಿನಯದ ಮುಂಬರುವ ಚಿತ್ರ ‘Jack N’ Jill ‘ ಸಿನಿಮಾದ ಟೀಸರ್ ರಿಲೀಸ್ ಆಗಿದೆ..
ಖ್ಯಾತ ನಿರ್ದೇಶಕ ಸಂತೋಷ್ ಶಿವನ್ ಅವರು ಆಕ್ಷನ್ ಕಟ್ ಹೇಳಿರುವ ಆಕ್ಷನ್-ಪ್ಯಾಕ್ಡ್, ವೈಜ್ಞಾನಿಕ ಕಾಮಿಡಿ ಕಥಾ ಹಂದರ ಹೊಂದಿರುವ ಸಿನಿಮಾವಿದು ಎಂಬುದು ಟ್ರೇಲರ್ ಮೂಲಕ ಗೊತ್ತಾಗುತ್ತೆ..
ಇತ್ತೀಚೆಗೆ ನಿರ್ಮಾಪಕರು ಚಿತ್ರದ ಕುತೂಹಲಕಾರಿ ಟೀಸರ್ ಅನ್ನು ಅನಾವರಣಗೊಳಿಸಿದ್ದಾರೆ.. 35 ಸೆಕೆಂಡ್ಗಳ ಟೀಸರ್ ಸಂಭಾಷಣೆಯೊಂದಿಗೆ ಆರಂಭವಾಗುತ್ತದೆ.. ಅದು ಚಿತ್ರವು ವೈಜ್ಞಾನಿಕ ಕಂಟೆಂಟ್ನೊಂದಿಗೆ ವ್ಯವಹರಿಸಲಿದೆ ಎಂದು ಸುಳಿವು ನೀಡುತ್ತದೆ.
ಸಂಭಾಷಣೆಯು ಹೀಗಿದೆ, “XX ಕ್ರೋಮೋಸೋಮ್ಗಳು ಯಾವಾಗಲೂ XY ಕ್ರೋಮೋಸೋಮ್ಗಳಿಗಿಂತ ಉತ್ತಮವಾಗಿವೆ ಎಂದಿದೆ.. ” ಟೀಸರ್ ನಲ್ಲಿ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿರುವ ದಿವಂಗತ ನಟ ನೆಡುಮುಡಿ ವೇಣು ಅವರನ್ನೂ ತೋರಿಸಿ ಸ್ಮರಿಸಿ ಗೌರವಿಸಸಲಾಗಿದೆ.
ಮೈಸೂರಿನಲ್ಲಿ ಶೂಟಿಂಗ್ ವೇಳೆ ಗಾಯಗೊಂಡ ತೆಲುಗು ನಟ ಗೋಪಿಚಂದ್
ಟೀಸರ್ ನಲ್ಲಿ ಆಕ್ಷನ್ , ಸಸ್ಪೆನ್ಸ್ , ಥ್ರಿಲ್ಲರ್ , ಇನ್ವೆಸ್ಟಿಗೇಷನ್ ಕಾಮಿಡಿ ಎಲಿಮೆಂಟ್ಸ್ ತೋರಿಸಲಾಗಿದೆ..
ನಿರ್ದೇಶಕ ಸಂತೋಷ್ ಶಿವನ್ ನಿರ್ದೇಶನದ ಈ ಚಿತ್ರದ ಸ್ಕ್ರಿಪ್ಟ್ ಅನ್ನು ಸಹ ನಿರ್ದೇಶಕರೇ ಬರೆದಿದ್ದಾರೆ.
‘ಜಾಕ್ ಎನ್ ಜಿಲ್’ ಚಿತ್ರದಲ್ಲಿ ಕಾಳಿದಾಸ್ ಜಯರಾಮ್, ಸೌಬಿನ್ ಶಾಹಿರ್, ಅಜು ವರ್ಗೀಸ್, ಇಂದ್ರನ್ಸ್, ಶೈಲಿ ಕ್ರಿಶನ್, ಬಾಸಿಲ್ ಜೋಸೆಫ್ ಮುಂತಾದವರು ನಟಿಸಿದ್ದಾರೆ. ಸಂತೋಷ್ ಶಿವನ್ ಪ್ರೇಕ್ಷಕರಿಗೆ ಭರವಸೆಯ ವಿಷಯಗಳನ್ನು ತಲುಪಿಸುವಲ್ಲಿ ವಿಫಲರಾಗದ ಕಾರಣ ಪ್ರೇಕ್ಷಕರಲ್ಲಿ ‘ಜಾಕ್ ಎನ್ ಜಿಲ್’ ನಿರೀಕ್ಷೆಯ ಮಟ್ಟವು ನಿಜವಾಗಿಯೂ ಹೆಚ್ಚಾಗಿದೆ.