Kangana Ranouth : ಕಂಗನಾಗೆ ಪುರುಷರೆಂದರೆ ಆಗುವುದಿಲ್ಲವಂತೆ, ಅದಿಕ್ಕೆ ಮದುವೆ ಆಗಿಲ್ವಾ ,,??
ಬಾಲಿವುಡ್ ನಟಿ ಕಂಗನಾ ರಣೌತ್ ಹಾಗೂ ವಿವಾದಗಳಿಗೆ ಒಂದು ಅವಿನಾಭಾವ ಸಂಬಂಧವಿದೆ. ವಿವಾದಗಳೇ ಕಂಗನಾರನ್ನ ಬಿಟ್ರೂ ವಿವಾದಗಳು ಕಂಗನಾ ಬೆನ್ನು ಬಿಡಲ್ಲ.. ಎಷ್ಟು ಒಳ್ಳೆ ನಟಿ ಎಂಬ ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೋ ಅದಕ್ಕಿಂತ 100 ಪಟ್ಟು ವಿವಾದಗಳ ಮೂಲಕವೇ , ಸದಾ ಏನಾದ್ರೂ ಒಂದು ವಿಚಾರವನ್ನ , ಯಾರದರೂ ಒಬ್ರನ್ನ ವಿರೋಧಿಸುತ್ತಲೇ , ನೇರವಾಗಿ ಮಾತನಾಡ್ತಾ ದಿಟ್ಟತನ ಪ್ರದರ್ಶಿಸುವ ನಟಿ..
ಒಂದ್ ರೀತಿ ಬಾಲಿವುಡ್ ‘ಕ್ವೀನ್’ ಗೆ ವಿವಾದಗಳಂದ್ರೆ ಭಾರೀ ಇಷ್ಟ ಏನ್ನುವಂತಾಗಿದೆ.. ಅವರ ಜನಪ್ರಿಯತೆಯೂ ಇತರರಿಗಿಂತ ಹೆಚ್ಚಿದೆ..
ಸದ್ಯ ಲಾಕ್ ಅಪ್ ರಿಯಾಲಿಟಿ ಶೋ ಮುಗಿದಿದೆ..
ಇತ್ತೀಚೆಗೆ ಕಂಗನಾ ಮದುವೆ ಬಗ್ಗೆ ಮಾತನಾಡಿದ್ದು , ತಾವು ಯಾಕೆ ಈವರೆಗೂ ಮದುವೆಯಾಗಿಲ್ಲ ಎಂಬುದನ್ನ ಬಹಿರಂಗಪಡಿಸಿದ್ದಾರೆ,.,
‘ಧಾಕಡ್’ ಸಿನಿಮಾ ಪ್ರಚಾರದ ವೇಳೆ ಮಾತನಾಡಿರುವ ಕಂಗನಾ ಧಾಕಡ್ ಸಿನಿಮಾದಲ್ಲಿನ ಹುಡುಗಿರಂತೆ ತಾವು ನಿಜ ಜೀವನದಲ್ಲಿ ಇದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ನಿಜ ಜೀವನದಲ್ಲಿ ಯಾರು ಹಾಗೆಲ್ಲ ಹುಡುಗರಿಗೆ ಹೊಡೆದುಕೊಂಡು ಓಡಾಡುತ್ತಾರೆ. ನಾನಂತೂ ಹಾಗಿಲ್ಲ. ಕಂಗನಾ ಹುಡುಗರನ್ನು ಹೊಡೆಯುತ್ತಾಳೆ, ಬಹಳ ಸಿಟ್ಟಿನ ಹುಡುಗಿ ಎಂದೆಲ್ಲ ನಿನ್ನಂಥಹವರು ನನ್ನ ಬಗ್ಗೆ ಸುಳ್ಳು ಸುದ್ದಿ ಹರಡಿಸಿದ್ದೀರಿ. ಅದಕ್ಕೆ ನನಗಿನ್ನೂ ಮದುವೆ ಆಗಿಲ್ಲ ಎಂದು ತಮಾಷೆ ಮಾಡಿದ್ದಾರೆ.. ನನ್ನ ಬಗ್ಗೆ ಹಲವರು ತಪ್ಪಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದಾರೆ ಪ್ರಚಾರ ಮಾಡಿದ್ದಾರೆ. ಇದರಿಂದ ನನಗೆ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನಷ್ಟವಾಗಿದೆ ಎಂದೂ ಹೇಳಿಕೊಂಡಿದ್ದಾರೆ..