ಇತ್ತೀಚೆಗೆ ಮಹೇಶ್ ಬಾಬು ಟಾಲಿವುಡ್ ಕಕುರಿತಾಗಿ ನೀಡಿದ ಹೇಳಿಕೆ ಭಾರೀ ಸಂಚಲನ ಸೃಷ್ಟಿ ಮಾಡಿದೆ.. ಟಾಲಿವುಡ್ ನ ಸೂಪರ್ ಸ್ಟಾರ್ ಮಹೇಶ್ ಬಾಬು ಈ ಹಿಂದೆ ಹಿಂದಿ ಸಿನಿಮಾರಂಗದಲ್ಲಿ ನಟನೆ ಬಗ್ಗೆ ಮಾತನಾಡಿ ಯಾವುದೇ ಕಾರಣಕ್ಕೂ ಬಾಲಿವುಡ್ ನಲ್ಲಿ ಸಿನಿಮಾ ಮಾಡೋದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದರು..
ಇದೀಗ ಮತ್ತೆ ಬಾಲಿವುಡ್ ಇಂಡಸ್ಟ್ರಿ ಬಗ್ಗೆ ಮಾತನಾಡಿದ್ದಾರೆ. ಸೋಮವಾರ ನಡೆದ ಮೇಜರ್ ಸಿನಿಮಾ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಮಹೇಶ್ ಅವರ ಬಾಲಿವುಡ್ ಪ್ರವೇಶದ ಬಗ್ಗೆ ಪ್ರಶ್ನೆ ಕೇಳಲಾಯಿತು.
ಈ ಸಂದರ್ಭದಲ್ಲಿ ಮಹೇಶ್ ಬಾಬು, ಬಾಲಿವುಡ್ ನನ್ನನ್ನು ಸಹಿಸಿಕೊಳ್ಳಲ್ಲ, ಅಲ್ಲಿ ಸಿನಿಮಾ ಮಾಡಿ ಸಮಯ ವ್ಯರ್ಥ ಮಾಡಲ್ಲ ಎಂದು ಉತ್ತರಿಸಿದರು.
ನನಗೆ ಹಿಂದಿ ಇಂಡಸ್ಟ್ರಿಯಿಂದ ಒಳ್ಳೆಯ ಆಫರ್ ಗಳು ಬಂದಿವೆ. ಆದರೆ ಅವರು ನನ್ನನ್ನು ಸಹಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುವುದಿಲ್ಲ.
ನನ್ನನ್ನು ಭರಿಸಲಾಗದ ಉದ್ಯಮದಲ್ಲಿ ಕೆಲಸ ಮಾಡುವುದು ಸಮಯ ವ್ಯರ್ಥ. ಇಲ್ಲಿ ನನಗೆ ಆಫರ್ಗಳು ಚೆನ್ನಾಗಿ ಬರುತ್ತಿವೆ.
ಜೊತೆಗೆ ಟಾಲಿವುಡ್ ನನಗೆ ಒಳ್ಳೆಯ ಮನ್ನಣೆ, ಗೌರವ, ಸ್ಟಾರ್ ಡಮ್ ನೀಡಿದೆ. ಈ ಬಗ್ಗೆ ನನಗೆ ತುಂಬಾ ಖುಷಿಯಾಗಿದೆ.
ಹಾಗಾಗಿ ನನ್ನ ಇಂಡಸ್ಟ್ರಿ ಬಿಟ್ಟು ಬೇರೆ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವ ಇರಾದೆ ನನಗಿಲ್ಲ ಎಂದಿದ್ದರು..
ಈ ಹೇಳಿಕೆಗೆ ಪರ – ವಿರೋಧ ಚರ್ಚೆಗಳು ಬರುತ್ತಿವೆ..
ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ಸರಿಯಾಗಿಯೇ ಹೇಳಿದ್ದಾರೆ. ಬಾಲಿವುಡ್ ಅವರನ್ನು ನಿಭಾಯಿಸಲು ಸಾಧ್ಯವಿಲ್ಲ ನಾನು ಅದನ್ನು ಒಪ್ಪುತ್ತೇನೆ. ಮಹೇಶ್ ಬಾಬು ಅವರು ತಮ್ಮ ಕೆಲಸದ ಬಗ್ಗೆ ಗೌರವ ಹೊಂದಿದ್ದಾರೆ. ಬಿಟೌನ್ ನ ಅದೆಷ್ಟೋ ನಿರ್ಮಾಪಕರು ಮಹೇಶ್ ರನ್ನ ಸಂಪರ್ಕಿಸಿದ್ದಾರೆ. ಆದರೆ ಮಹೇಶ್ ಬಾಬು ಅವರು ತಮ್ಮ ನಿಲುವನ್ನು ಗಟ್ಟಿಗೊಳಿಸಿದ್ದಾರೆ. ಅವರ ಹೇಳಿಕೆ ವಿವಾದ ಮಾಡುವ ಅಗತ್ಯವಿಲ್ಲ, ಅವರಿಗೆ ಚಿತ್ರರಂಗದ ಮೇಲೆ ಗೌರವವಿದೆ ಎಂದು ಕಂಗನಾ ರಣೌತ್ ಹೇಳಿದ್ದಾರೆ..