KGF 2 ಬ್ಲಾಕ್ ಬಾಸ್ಟರ್ ಹಿಟ್ ಆಗಿದೆ.. 1200 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮೂಲಕ ಹೊಸ ದಾಖಲೆ ಬರೆದಿದೆ.. ವಿಶ್ವಾದ್ಯಂತ ಅತಿ ಹೆಚ್ಚ ಗಳಿಸಿದ 3 ನೇ ಭಾರತೀಯ ಸಿನಿಮಾವಾದ್ರೆ , ಭಾರತದಲ್ಲಿ 2 ನೇ ಸ್ಥಾನದಲ್ಲಿದೆ..
ಇದೀಗ ಶೀಘ್ರದಲ್ಲೇ ಸಿನಿಮಾ ಒಟಿಟಿ Amazon Prime ನಲ್ಲಿ ಸ್ಟ್ರೀಮಿಂಗ್ ಆಗಲಿದ್ದು , ಫಸ್ಟ್ ಟೈಮ್ ವೀವರ್ಸ್ ಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ..
ಸದ್ಯಕ್ಕೆ ಅಮೆಜಾನ್ ಪ್ರೈಮ್ ಮೆಂಬರ್ ಅಲ್ಲದವರು ಸಿನಿಮಾ ನೋಡುವಂತೆ ಅವಕಾಶ ಕಲ್ಪಿಸಲಾಗಿದೆ. ಸಾಮಾನ್ಯವಾಗಿ ಅಮೆಜಾನ್ ಪ್ರೈಮ್ ಸದಸ್ಯರಾದವರು ಮಾತ್ರ ಅಲ್ಲಿರುವ ಸಿನಿಮಾ ವೀಕ್ಷಣೆ ಮಾಡುವಂತಹ ಅವಕಾಶವಿತ್ತು. ಆದರೆ, ಕೆಜಿಎಫ್ 2 ಸಿನಿಮಾವನ್ನು ರೆಂಟಲ್ ಬೇಸಸ್ ಆಧಾರದಲ್ಲಿ ನೋಡುವಂತಹ ತಂತ್ರಜ್ಞಾನವನ್ನು ಭಾರತದಲ್ಲಿ ಜಾರಿ ಮಾಡುತ್ತಿದ್ದು, ಇಂತಿಷ್ಟು ಹಣ ಕೊಟ್ಟು 24 ಗಂಟೆಯೊಳಗೆ ಕೆಜಿಎಫ್ 2 ಸಿನಿಮಾ ನೋಡಬಹುದಾಗಿದೆ.
ಇದಕ್ಕೆ ಅಮೆಜಾನ್ ಪ್ರೈಮ್ ಸದಸ್ಯರಾಗುವ ಅಗತ್ಯವಿಲ್ಲ. ಈ ರೀತಿಯ ವ್ಯವಸ್ಥೆಯನ್ನು ಅಮೆಜಾನ್ ಪ್ರೈಮ್ ವಿದೇಶದಲ್ಲಿ ಪರಿಚಯಿಸಿದೆ. ಆದರೆ, ಭಾರತದಲ್ಲಿ ಇದೇ ಮೊದಲ ಬಾರಿಗೆ ಪರಿಚಯಿಸಲಾಗ್ತಿದೆ. ಈ ತಿಂಗಳಾಂತ್ಯದಲ್ಲಿ ಸಿನಿಮಾ ಒಟಿಟಿಗೆ ಬರುವ ಸಾಧ್ಯತೆಯಿದೆ..