ನಾಲ್ಕನೇ ವಾರವೂ ಬಾಕ್ಸ್ ಆಫೀಸ್ ನಲ್ಲಿ KGF 2 ಅಬ್ಬರ ತಗ್ಗಿಲ್ಲ.. ಒಂದೆಡೆ ಹಾಲಿವುಡ್ ನ ಡಾಕ್ಟರ್ ಸ್ಟ್ರೇಂಜ್ ಸಿನಿಮಾ ಇಡೀ ವಿಶ್ವಾಂತ ಅಂತೆಯೇ ಭಾರತದಲ್ಲಿ ರಿಲೀಸ್ ಆಗಿ ಮೋಡಿ ಮಾಡ್ತಿದ್ರೆ ಮತ್ತೊಂದೆಡೆ ಮಹೇಶ್ ಬಾಬು ನಟನೆಯ ಸರ್ಕಾರು ವಾರಿ ಪಾಟ ಸಿನಿಮಾ ಕೂಡ ರಾಕಿ ಭಾಯ್ ಗೆ ಟಕ್ಕರ್ ಕೊಡೋಕೆ ಬಂದಿದೆ.. ಆದ್ರೆ ರಾಕಿ ಭಾಯ್ ಹವಾ ತಗ್ಗಿಲ್ಲ.. ಸದ್ಯಕ್ಕೆ ತಗ್ಗೋದೂ ಇಲ್ಲ ಎಂದೇ ಹೇಳಲಾಗ್ತಿದೆ..
ಇನ್ನೊಂದು ದಿನ. ಇದು ಚಾಲನೆಯಲ್ಲಿ ನಾಲ್ಕನೇ ವಾರವಾಗಿರುವುದರಿಂದ ಸಾಕಷ್ಟು ಗಮನಾರ್ಹವಾಗಿದೆ ಮತ್ತು ಚಿತ್ರಕ್ಕಾಗಿ ಹಿಂದಿನ ಮತ್ತು ಪ್ರಸ್ತುತದಿಂದ ಪೈಪೋಟಿ ಇದೆ. ಚಿತ್ರವು ಈಗ ಹಿಂದಿ ಆವೃತ್ತಿಯಲ್ಲೇ ಒಟ್ಟು 419.55 ಕೋಟಿ ರೂ ಕಲೆ ಹಾಕಿದೆ.. ವರ್ಲ್ಡ್ ವೈಡ್ 1200 ಕೋಟಿ ಸನಿಹ ತಲುಪಿದೆ.. ಸೌತ್ ಕೊರಿಯಾದಲ್ಲೂ ಸಿನಿಮಾ ರೆಕಾರ್ಡ್ ಮಾಡಿದೆ.. KGF 2 ಈಗ ದಕ್ಷಿಣ ಕೊರಿಯಾಗೆ ಎಂಟ್ರಿ ಕೊಟ್ಟಿದೆ. ಅಲ್ಲೂ ಸಿನಿಮಾ ಹವಾ ಜೋರಾಗಿದೆ..
ದಕ್ಷಿಣ ಕೊರಿಯಾದಲ್ಲಿ ತೆರೆಕಾಣುತ್ತಿರುವ ಮೊದಲ ಕನ್ನಡ ಸಿನಿಮಾ ಇದಾಗಿದೆ.. ಸೌತ್ ಕೊರೊಯಾದಲ್ಲೂ ಸಿನಿಮಾ ಧೂಳೆಬ್ಬಿಸುತ್ತಿದೆ ಎನ್ನಲಾಗಿದೆ..