ಅಪ್ಪು ನಮ್ಮನ್ನೆಲ್ಲ ಅಗಲಿ ತಿಂಗಳುಗಳೇ ುರುಳಿದೆ.. ಆದ್ರೂ ಅವರ ಅಗಲಿಕೆಯ ನೋವು ಮಾಸಿಲ್ಲ.. ಆಗಾಗ ಅವರ ಹೆಸರಿನಲ್ಲಿ ಅರ್ಥ ಪೂರ್ಣ ಕೆಲಸಗಳು ನಡೆಯುತ್ತಿರುತ್ತವೆ.. ಇದೀಗ ಅಕಾಲಿಕ ಮೃತ್ಯು ತಡೆಯುವ ಸಲುವಾಗಿ ಹಾಗೂ ಸಾಂಕ್ರಾಮಿಕ ರೋಗಗಳಿಗೆ ಔಷಧಿ ಕಂಡು ಹಿಡಿಯುವ ಯೋಜನೆಯಿಂದ ಎಲೆಕ್ರಾನಿಕ್ ಸಿಟಿಯಲ್ಲಿ ‘ಧೀರ್ಘಾಯುಷ್ಯ’ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ..
ಇದಕ್ಕೆ ಪುನೀತ್ ರಾಜ್ಕುಮಾರ್ ಎಂದು ಹೆಸರಿಡಲಾಗುವುದು ಎಂದು ಸಚಿವ ಅಶ್ವತ್ಥನಾರಾಯಣ್ ಹೇಳಿದ್ದಾರೆ.
ಐಟಿ-ಬಿಟಿ ಇಲಾಖೆಯ ಪ್ರತಿಷ್ಠಿತ ಕಾರ್ಯಕ್ರಮವಾದ ಬೆಂಗಳೂರು ಬಯೋ-ಇನ್ನೋವೇಶನ್ ಸೆಂಟರ್ ನ ಬೆಂಬಲದ ಮೂಲಕ ವಿವಿಧ ನವೋದ್ಯಮಗಳು ಅಭಿವೃದ್ಧಿಪಡಿಸಿರುವ 6 ಜೀವವಿಜ್ಞಾನ ಸಾಧನಗಳನ್ನು ಎಲೆಕ್ಟ್ರಾನಿಕ್ ಸಿಟಿಯ ಹೆಲಿಕ್ಸ್ ಬಿಟಿ ಪಾರ್ಕ್ನಲ್ಲಿ ಉದ್ಘಾಟಿಸಿದ ಬಳಿಕ ಡಾ. ಅಶ್ವಥ್ ನಾರಾಯಣ ಅವರು ಈ ಬಗ್ಗೆ ತಿಳಿಸಿದ್ದಾರೆ..