ಮೋಹಕ ತಾರೆ ರಮ್ಯಾ ಸದ್ಯ ಸಿನಿಮಾರಂಗ ಹಾಗೂ ರಾಜಕೀಯ ೆರಡರಿಂದಲೂ ಅಂತರ ಕಾಯ್ದುಕೊಂಡು ವರ್ಷಗಳೇ ಕಳೆದಿದೆ.. ಆದ್ರೀಗ ಮತ್ತದೇ ರಾಜಕೀಯವಾಗಿಯೇ ಚರ್ಚೆಯಾಗ್ತಿದ್ದಾರೆ..
ನಟಿ ರಮ್ಯಾ ಇತ್ತೀಚೆಗೆ ಡಿ.ಕೆ.ಶಿವಕುಮಾರ್, KPCC ವಿರುದ್ಧ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗಳು ಭಾರೀ ಟ್ರೋಲ್ ಆಗ್ತಿದ್ದು , ಡಿಕೆ ಶಿವಕುಮಾರ್ ಮತ್ತೆ ನಲಪಾಡ್ ಈ ಬಗ್ಗೆ ಪ್ರತ್ಯುತ್ತರಗಳನ್ನ ನೀಡಿದ್ದರು.. ಇದಕ್ಕೆ ಈಗ ರಮ್ಯಾ ಟಾಂಗ್ ಕೊಟ್ಟಿದ್ದಾರೆ..
ಎಂಬಿ ಪಾಟೀಲ್ ವಿರುದ್ಧ ಡಿಕೆ ಶಿವಕುಮಾರ್ ನೀಡಿದ್ದ ಹೇಳಿಕೆ ವಿರುದ್ಧ ರಮ್ಯಾ ಟ್ವೀಟ್ ಮಾಡಿದ್ದರು.. ಆ ನಂತರ ತಮ್ಮ ಟ್ವೀಟ್ ಗೆ ಬಂದ ನೆಗೆಟಿವ್ ಕಮೆಂಟ್ ಗಳಿಂದ ರಮ್ಯಾ ಸಿಟ್ಟಾಗಿದ್ದರು.. ಈ ಕಾರ್ಯವನ್ನು ಡಿ.ಕೆ.ಶಿವಕುಮಾರ್ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಐಟಿ ಸೆಲ್ ಮಾಡುತ್ತಿದೆ ಎಂದಿದ್ದರು.
ರಮ್ಯಾರ ಹೇಳಿಕೆಗೆ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಕಿಡಿಕಾರುತ್ತಾ ರಮ್ಯಾ ಇಷ್ಟು ದಿನ ಎಲ್ಲಿದ್ದರು ಎಂಬುದು ಸಹ ಗೊತ್ತಿಲ್ಲ.ಈಗ ತಮ್ಮ ಇರುವಿಕೆಯನ್ನು ತೋರಿಸಲು ಹೀಗೆ ನಮ್ಮ ನಾಯಕರ ವಿರುದ್ಧ ಟ್ವೀಟ್ ಮಾಡುತ್ತಿದ್ದಾರೆ. ಯಾವುದೋ ಹುದ್ದೆಯ ಆಸೆಗಾಗಿ ಅವರು ಹೀಗೆ ಮಾಡುತ್ತಿದ್ದಾರೆ. ಸೀಟಿನ ಮೇಲೆ ಟವೆಲ್ ಹಾಕುವ ತಂತ್ರ ಎಂದಿದ್ದರು.
ನಲಪಾಡ್ ಮಾತಿನಿಂದ ರಮ್ಯಾ ಸಿಟ್ಟಾಗಿದ್ದು 2018 ರಲ್ಲಿ ನಲಪಾಡ್ನಿಂದ ಹಲ್ಲೆಗೊಳಗಾಗಿ ವಿದ್ವತ್ನ ಚಿತ್ರದ ಜೊತೆಗೆ ನಲಪಾಡ್ ಹಾಗೂ ಆತನ ಬೆಂಬಲಿಗರು ಮಾಡಿದ್ದ ಇತರ ಅಪರಾಧ ಪ್ರಕರಣದ ಸುದ್ದಿಗಳ ಚಿತ್ರಗಳನ್ನು ಹಂಚಿಕೊಂಡು , ಜಾಮೀನಿನ ಮೇಲೆ ಹೊರಗಿರುವವ, ಕರ್ನಾಟಕ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ, ಶಾಸಕ ಹ್ಯಾರಿಸ್ ಪುತ್ರ ನನ್ನ ಪ್ರಾಮಾಣಿಕತೆ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾನೆ ಎಂದು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ..