ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ಬಹುನಿರೀಕ್ಷೆಯ ‘777 ಚಾರ್ಲಿ’ ಸಿನಿಮಾದ ಟ್ರೇಲರ್ 5 ಭಾಷೆಗಳಲ್ಲೂ ರಿಲೀಸ್ ಆಗಲಿದೆ.. ಈಗಾಗಲೇ ಸಿನಿಮಾದ ಹಾಡು , ಪೋಸ್ಟರ್ ಗಳು ಜನರ ಗಮನ ಸೆಳೆದಿವೆ..
ಮೇ 16 ಮಧ್ಯಾಹ್ನ 12.12 ಕ್ಕೆ ‘777 ಚಾರ್ಲಿ’ ಸಿನಿಮಾದ ಟ್ರೇಲರ್ 5 ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಏಕಕಾಲದಲ್ಲಿ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಲಿದೆ. ಆಯಾ ಭಾಷೆಯ ಸ್ಟಾರ್ ನಟರು ಸಿನಿಮಾದ ಟ್ರೈಲರ್ನ್ನು ರಿಲೀಸ್ ಮಾಡಲಿದ್ದಾರೆ.
ತೆಲುಗಿನಲ್ಲಿ ಸಾಯಿ ಪಲ್ಲವಿ ಈ ಸಿನಿಮಾದ ಟ್ರೇಲರ್ ರಿಲೀಸ್ ಮಾಡಲಿದ್ದಾರೆ. ಸಾಯಿ ಪಲ್ಲವಿಗೆ ನಟ ವೆಂಕಟೇಶ್, ಲಕ್ಷ್ಮೀ ಮಂಚು ಕೂಡ ಸಾಥ್ ನೀಡಲಿದ್ದಾರೆ.
ಜೂನ್ 10 ಕ್ಕೆ ವಿಶ್ವದ್ಯಾಂತ ‘777 ಚಾರ್ಲಿ’ ಸಿನಿಮಾ ರಿಲೀಸ್ ಆಗಲಿದೆ. ಕಿರಣ್ ರಾಜು ನಿರ್ದೇಶನ ಮಾಡಿರುವ 777 ಚಾರ್ಲಿ ಸಿನಿಮಾ ಜೂನ್ 10 ಕ್ಕೆ ಎಲ್ಲಾ ಥಿಯೇಟರ್ಗಳಲ್ಲಿ ಅಬ್ಬರಿಸಲು ಸಜ್ಜಾಗಿದೆ. ಕೆಜಿಎಫ್ 2 ಬಳಿಕ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.