ಬಾಲಿವುಡ್ ನಟಿ ಕಂಗನಾ ರಣೌತ್ ಹಾಗೂ ವಿವಾದಗಳಿಗೆ ಒಂದು ಅವಿನಾಭಾವ ಸಂಬಂಧವಿದೆ. ವಿವಾದಗಳೇ ಕಂಗನಾರನ್ನ ಬಿಟ್ರೂ ವಿವಾದಗಳು ಕಂಗನಾ ಬೆನ್ನು ಬಿಡಲ್ಲ.. ಎಷ್ಟು ಒಳ್ಳೆ ನಟಿ ಎಂಬ ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೋ ಅದಕ್ಕಿಂತ 100 ಪಟ್ಟು ವಿವಾದಗಳ ಮೂಲಕವೇ , ಸದಾ ಏನಾದ್ರೂ ಒಂದು ವಿಚಾರವನ್ನ , ಯಾರದರೂ ಒಬ್ರನ್ನ ವಿರೋಧಿಸುತ್ತಲೇ , ನೇರವಾಗಿ ಮಾತನಾಡ್ತಾ ದಿಟ್ಟತನ ಪ್ರದರ್ಶಿಸುವ ನಟಿ..
ಅಂದ್ಹಾಗೆ ನಟಿ ಬಾಲಿವುಡ್ ವಿರುದ್ಧವೇ ಸದಾ ಹೇಳಿಕೆ ನೀಡುವುದು ಎಲ್ರಿಗೂ ಗೊತ್ತಿದೆ.. ಇದೀಗ ಸೌತ್ ಸಿನಿಮಾಗಳನ್ನ ಮತ್ತೆ ಕಂಗನಾ ಹೊಗಳಿದ್ದಾರೆ.. ಸಂದರ್ಶನವೊಂದರಲ್ಲಿ ಮಾತನಾಡಿದ ಕಂಗನಾ ದಕ್ಷಿಣ ಭಾರತದ ಸಿನಿಮಾಗಳು ತಮ್ಮ ಪ್ರೇಕ್ಷಕರೊಂದಿಗೆ ಹೆಚ್ಚಿನ ಸಂಪರ್ಕವನ್ನು ಇಟ್ಟುಕೊಂಡಿದ್ದಾರೆ. ಹೀಗಾಗಿ ಜನರು ಕೂಡ ದಕ್ಷಿಣ ಭಾರತದ ಸಿನಿಮಾಗಳನ್ನು ತುಂಬಾನೇ ಇಷ್ಟ ಪಡುತ್ತಾರೆ. ಏಕೆಂದರೆ, ಅವರ ಪ್ರತಿ ಸಿನಿಮಾಗಳಲ್ಲಿ ಸಂಸ್ಕೃತಿಯ ಬಗ್ಗೆ ಹೆಚ್ಚಾಗಿ ತೋರಿಸುತ್ತಾರೆ. ಇದು ಜನರಿಗೂ ಹೆಚ್ಚು ಹತ್ತಿರವಾಗುವಂತೆ ಇರುತ್ತದೆ ಎಂದು ಹೇಳಿದ್ದಾರೆ.
ಆದರೆ, ಬಾಲಿವುಡ್ ನಟರು ಹಾಗೂ ಅವರ ಸ್ಟಾರ್ ಮಕ್ಕಳು ವಿದೇಶಕ್ಕೆ ಹೋಗುತ್ತಾರೆ. ಅಲ್ಲಿ ಇಂಗ್ಲೀಷ್ ಸಿನಿಮಾಗಳನ್ನು ನೋಡುತ್ತಾರೆ. ಇಂಗ್ಲೀಷ್ನಲ್ಲಿ ಮಾತ್ರ ಮಾತನಾಡುತ್ತಾರೆ. ಇದರಿಂದ ಅವರು ಮಾಡುವ ಸಿನಿಮಾಗಳು ಜನರಿಗೆ ಅಷ್ಟಾಗಿ ಹತ್ತಿರವಾಗುವುದಿಲ್ಲ. ಇದು ಪ್ರೇಕ್ಷಕರು ಮತ್ತು ಅವರ ನಡುವೆ ಹೆಚ್ಚು ಅಂತರವನ್ನು ಸೃಷ್ಟಿ ಮಾಡುತ್ತದೆ ಎಂದಿದ್ದಾರೆ..
ವಿಶ್ವದಾದ್ಯಂತ ಸೂಪರ್ ಹಿಟ್ ಆದ ದಕ್ಷಿಣ ಭಾರತದ ಸಿನಿಮಾ ಪುಷ್ಪ ಸಕ್ಸಸ್ ಕಾಣಲು ಪ್ರಮುಖ ಕಾರಣವೇ ಅದು. ಈ ಸಿನಿಮಾದ ಕಥಡ ಜನರೊಂದಿಗೆ ನೇರ ಸಂಪರ್ಕವನ್ನು ಹೊಂದಿದೆ. ಆ ಸಿನಿಮಾದಲ್ಲಿ ಪ್ರತಿಯೊಂದು ಪಾತ್ರವು ಜನರಿಗೆ ಹತ್ತಿರವಾಗಿತ್ತು. ತಮ್ಮಲ್ಲಿರುವ ಎಷ್ಟೋ ಜನರ ಜೀವನವನ್ನೇ ಸಿನಿಮಾದಲ್ಲಿ ಪಾತ್ರವನ್ನಾಗಿ ಮಾಡಿ ಅಭಿನಯಿಸಿದ್ದರು. ಹೀಗಾಗಿ ದಕ್ಷಿಣ ಸಿನಿಮಾರಂಗ ಪಾಶ್ಚಿಮಾತ್ಯ ದೇಶಗಳಿಂದ ಸ್ಪೂರ್ತಿ ಪಡೆಯಲು ಇಚ್ಚಿಸುವುದಿಲ್ಲ ಎಂಬುದು ನನ್ನ ಭಾವನೆ ಎಂದಿದ್ದಾರೆ..
ದಕ್ಷಿಣ ಭಾರತದ ಸಿನಿಮಾಗಳ ಕಥೆಗಳಿಗೆ ಹೋಲಿಸಿದರೆ, ಬಾಲಿವುಡ್ ಸಿನಿಮಾಗಳಲ್ಲಿ ಅಷ್ಟಾಗಿ ಕಥೆಗಳು ಚೆನ್ನಾಗಿರುವುದಿಲ್ಲ. ಅದು ಚಿತ್ರದಲ್ಲಿ ನಟಿಸುವ ನಾಯಕನಿಗೂ ಸಂಬಂಧವಿರುವುದಿಲ್ಲ. ಹೀಗಾಗಿ ಜನರಿಗೆ ಬಾಲಿವುಡ್ ಸಿನಿಮಾಗಳು ಅಷ್ಟಾಗಿ ಹತ್ತಿರವಾಗುವುದಿಲ್ಲ. ಬಾಲಿವುಡ್ನಲ್ಲಿರುವ ಹೆಚ್ಚಿನ ಸ್ಕ್ರೀಪ್ಟ್ಗಳು ಕಳಪೆ ಗುಣಮಟ್ಟದಲ್ಲಿವೆ. ಹಾಗಾಗಿ ನಾನು ದೊಡ್ಡ ಪ್ರೊಡಕ್ಷನ್ ಹೌಸ್ಗಳು ಹಾಗೂ ಹೀರೊಗಳೊಂದಿಗೆ ಮಾಡಬೇಕಿದ್ದ ಹಲವು ಸಿನಿಮಾಗಳು ಕಳಪೆ ಗುಣಮಟ್ಟದ್ದಾಗಿದ್ದ ಕಾರಣ ಅಂತಹ ಸಿನಿಮಾಗಳನ್ನು ನಾನು ತಿರಸ್ಕರಿಸಿದ್ದೆ ಎಂದಿದ್ದಾರೆ..