ಎಲ್ಲಿ ನೋಡಿದ್ರೂ ರಾಕಿ ಗುಣಗಾನ ,,, ಯಾರ್ ನೋಡಿದ್ರೂ ಪ್ರಶಾಂತ್ ನೀಲ್ ಸಿನಿಮಾದ ಬಗ್ಗೆಯೇ ಚರ್ಚೆ… ಕೆಜಿಎಫ್ ಬಗ್ಗೆಯೇ ಮಾತುಕತೆ… ಸಿನಿಮಾ ಬಾಕ್ಸ್ ಆಫೀಸ್ ನನಲ್ಲಿ ಧೂಳೆಬ್ಬಿಸುತ್ತೆದೆ.. ಗ್ಲೋಬಲ್ ನಲ್ಲಿ ರೂಲ್ ಮಾಡ್ತಿದೆ.. ಬಾಕ್ಸ್ ಆಫೀಸ್ ನಲ್ಲಿ 1100 ಕೋಟಿ ಕಲೆಕ್ಷನ್ ದಾಟಿ ದಂಗಲ್ ರೆಕಾರ್ಡ್ ಚೂರ್ ಚೂರು ಮಾಡಿದೆ,..
ಅಂದ್ಹಾಗೆ ಸಿನಿಮಾ ನೋಡಿದವರಿಗೆ ಚಾಪ್ಟರ್ 3 ಬಂದೇ ಬರುತ್ತೆ ಅಂತ ಅನ್ಸೋದ್ರಲ್ಲಿ ಅನುಮಾನವಿಲ್ಲ.. ಕೆಜಿಎಫ್ ಚಷಾಪ್ಟರ್ ಸುಳಿವನ್ನ ಸಿನಿಮಾದಲ್ಲಿ ನೀಡಲಾಗಿದೆ.. ಅಧಿಕೃತವಾಗಿ ಘೋಷಣೆಯಾಗಿಲ್ಲವಾದ್ರೂ ಸೋಷಿಯಲ್ ಮೀಡಿಯದಲ್ಲಿ KGF 3 ಗೆ ಬೇಡಿಕೆ ಹೆಚ್ಚಾಗಿದೆ..
ಕೆಜಿಎಫ್ 3 ಸಿನಿಮಾ ಮಾರ್ವೆಲ್ ರೀತಿಯಲ್ಲಿ ಬರಲಿದೆ ಎಂಬ ಮಾತುಗಳು ಬರುತ್ತಿವೆ. ಅದಕ್ಕೆ ನಿರ್ಮಾಪಕ ವಿಜಯ್ ಕಿರಂಗದೂರ್ ಸ್ಪಷ್ಟನೆ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ವಿಜಯ್ ಕಿರಂಗದೂರ್ ಕೆಜಿಎಫ್ 3 ಚಿತ್ರದ ಬಗ್ಗೆ ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.
‘ಕೆಜಿಎಫ್ 3 ಸಿನಿಮಾವನ್ನು ತೆರೆಗೆ ತರಲು ಬಯಸಿದ್ದೇವೆ. ಮಾರ್ವೆಲ್ ಶೈಲಿಯಲ್ಲಿ ಈ ಫ್ರ್ಯಾಂಚೈಸ್ ಅನ್ನು ನಿರ್ಮಿಸಲು ನಾವು ಭಾವಿಸುತ್ತೇವೆ.
ಅಕ್ಟೋಬರ್ ನಂತರ ಶೂಟಿಂಗ್ ಶುರುವಾಗಲಿದೆ. ಇದು 2024 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಪ್ರಶಾಂತ್ ನೀಲ್ ಸದ್ಯ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಶೇ.30-35ರಷ್ಟು ಚಿತ್ರೀಕರಣ ಮುಗಿದಿದೆ. ಮುಂದಿನ ವೇಳಾಪಟ್ಟಿ ಮುಂದಿನ ವಾರ ಆರಂಭವಾಗಲಿದೆ.
ಈ ವರ್ಷ ಅಕ್ಟೋಬರ್-ನವೆಂಬರ್ ಒಳಗೆ ಅದನ್ನು ಪೂರ್ಣಗೊಳಿಸಲು ನಾವು ಬಯಸುತ್ತೇವೆ. ಹಾಗಾಗಿ ಅಕ್ಟೋಬರ್ ನಂತರ ಕೆಜಿಎಫ್ 3 ಚಿತ್ರೀಕರಣ ಶುರು ಮಾಡಲಿದ್ದೇವೆ ಎಂದಿದ್ದಾರೆ.