ಬಹುಭಾಷಾ ನಟಿ ಸಾಯಿ ಪಲ್ಲವಿ ಗಾರ್ಗಿ ಸಿನಿಮಾ ಮೂಲಕಜ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿರುವ ವಿಚಾರ ಗೊತ್ತೇ ಇದೆ..
ಅಷ್ಟೇ ಅಲ್ಲ ಕನ್ನಡದಲ್ಲಿ ತಾವೇ ಡಬ್ ಮಾಡುವ ಸಲುವಾಗಿ ಕನ್ನಡವನ್ನೂ ಕಲಿಯುತ್ತಿರುವುದು ಕನ್ನಡಾಭಿಮಾನಿಗಳ ಮನಗೆದ್ದಿದೆ..
ಸಾಯಿ ಪಲ್ಲವಿ ಕನ್ನಡ ಕಲಿಯಲು ನಟಿ ಶೀತಲ್ ಶೆಟ್ಟಿ ಸಹಾಯ ಮಾಡ್ತಿದ್ದಾರೆ.. ತಮಿಳಿನಲ್ಲಿ ತಯಾರಾಗುತ್ತಿರುವ ಗಾರ್ಗಿ ಸಿನಿಮಾ ಕನ್ನಡ , ತೆಲುಗು , ಹಿಂದಿ , ಮಲಯಾಳಂನಲ್ಲೂ ಬರಲಿದೆ..
ಈ ಸಿನಿಮಾಗೆ ಗೌತಮ್ ರಾಮಚಂದ್ರನ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಾರ್ಗಿ ಚಿತ್ರಕ್ಕಾಗಿ ತಮ್ಮ ಪಾತ್ರಕ್ಕೆ ಸಾಯಿ ಪಲ್ಲವಿ ಅವರೇ 5 ದಿನಗಳಲ್ಲಿ ಕನ್ನಡ ಕಲಿತು ಡಬ್ ಮಾಡಿದ್ದಾರೆ. ನಟಿಯ ಕನ್ನಡ ಕಲಿಕೆಗೆ ಶೀತಲ್ ಶೆಟ್ಟಿ ಕೈ ಜೋಡಿಸಿದ್ದಾರೆ.
ಕನ್ನಡ ಹಿರಿಯ ನಿರ್ದೇಶಕ ಎಆರ್ ಬಾಬು ಅವರ ಪುತ್ರ ಎಆರ್ ಶಾನ್ ತಮಿಳು ಅವತರಣಿಕೆಯನ್ನ ಕನ್ನಡಕ್ಕೆ ಭಾಷಾಂತರ ಮಾಡಿದ್ರು. ಶೀತಲ್ ಶೆಟ್ಟಿ ಅವರ ಶೀ ಟೈಲ್ಸ್ ಡಬ್ಬಿಂಗ್ ಸ್ಟುಡಿಯೋದಲ್ಲಿ ಸಾಯಿ ಪಲ್ಲವಿ ಕನ್ನಡ ಅವತರಣಿಕೆಯಲ್ಲಿ ಡಬ್ಬಿಂಗ್ ಮಾಡಿದ್ದಾರೆ. ಮೊದಲ ಪ್ರಾಜೆಕ್ಟ್ ಸಾಯಿ ಪಲ್ಲವಿ ಜತೆ ಕೆಲಸ ಮಾಡಿದ ಕುರಿತು ಶೀತಲ್ ಶೆಟ್ಟಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದಾರೆ..