ಮಹೇಶ್ ಬಾಬು ಹಾಗೂ ಕೀರ್ತಿ ಸುರೇಶ್ ನಟನೆಯ ಸರ್ಕಾರು ವಾರಿ ಪಾಟ ಸಿನಿಮಾ ಮೇ 12 ರಂದು ರಿಲೀಸ್ ಆಗಿದ್ದು ಥಿಯೇಟರ್ ಗಳಲ್ಲಿ ಧೂಳೆಬ್ಬಿಸುತ್ತಿದೆ..
ಸಿನಿಮಾ ಥಿಯೇಟರ್ ನಲ್ಲಿ ಭರ್ಜರಿಯಾಗಿ ರೆಸ್ಪಾನ್ಸ್ ಪಡೆದುಕೊಂಡು ಮುನ್ನುಗ್ಗುತ್ತಿದೆ.
ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಈ ಹಿನ್ನೆಲ್ಲೆಯಲ್ಲಿ ಈ ಚಿತ್ರದ ನಟರು ಯಾವ ಎಷ್ಟು ಸಂಭಾವನೆ ತೆಗೆದುಕೊಂಡಿದ್ದಾರೆ ಎಂಬ ವಿಚಾರ ಈಗ ಚರ್ಚೆಯ ವಿಷಯವಾಗಿದೆ.
ನಿರ್ದೇಶಕ ಪರಶುರಾಮ್ 10 ಕೋಟಿ, ಮಹೇಶ್ಬಾಬು 35-50 ಕೋಟಿ ತೆಗೆದುಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಚಿತ್ರದ ಬಜೆಟ್ ಗೆ ತಕ್ಕಂತೆ ಮಹೇಶ್ ಸಂಭಾವನೆಯ ಲೆಕ್ಕಾಚಾರವೂ ಬದಲಾಗುತ್ತದೆ.
ಆದರೆ, ಸೂಪರ್ ಸ್ಟಾರ್ ಎಷ್ಟು ಹಣ ತೆಗೆದುಕೊಂಡರೂ ಅದರಲ್ಲೇ ಮಕ್ಕಳಿಗಾಗಿ ಸಾಕಷ್ಟು ಸೇವೆ ಮಾಡುತ್ತಾರೆ.
ಹೀಗಾಗಿ ಅವರು ಪಡೆಯುವ ಸಂಭಾವನೆ ಎಷ್ಟಿದ್ದರೂ ತಪ್ಪೇನಿಲ್ಲ ಎನ್ನುತ್ತಾರೆ ಅಭಿಮಾನಿಗಳು.
ಸರ್ಕಾರುವಾರಿ ಪಾಟ ಸಿನಿಮಾವನ್ನು ಮೈತ್ರೀ ಮೂವೀ ಮೇಕರ್ಸ್, ಜಿಎಂಬಿ ಎಂಟರ್ಟೈನ್ಮೆಂಟ್, ನವೀನ್ ಯೆರ್ನೇನಿ, ವೈ. ರವಿಶಂಕರ್, ರಾಮ್ ಅಚಂತ, ಗೋಪಿಚಂದ್ ಅಚಂತ ನಿರ್ಮಿಸಿದ್ದಾರೆ.
ತಮನ್ ಸಂಗೀತ ನೀಡಿರುವ ಈ ಚಿತ್ರ ಮೇ 12 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ.