ನೀನಾಸಂ ಸತೀಶ್ ನಟನೆಯ “ಅಶೋಕ ಬ್ಲೇಡ್” ಶೂಟಿಂಗ್ ಶುರು
ನಟ ನೀನಾಸಂ ಸತೀಶ್ ಹೊಸ ಚಿತ್ರವೊಂದಕ್ಕಾಗಿ ಸಹಿ ಹಾಕಿದ್ದಾರೆ, ಆ ಚಿತ್ರದ ಮುಹೂರ್ತ ನಿನ್ನೆ (ಮೇ 15 ) ರಂದು ಧರ್ಮಗಿರಿ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ನೆರವೇರಿದೆ. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸತೀಶ್ ನಟನೆಯ ಚಿತ್ರಕ್ಕೆ ‘ಅಶೋಕ ಬ್ಲೇಡ್’ ಎಂದು ಹೆಸರಿಡಲಾಗಿದೆ.
ಚಿತ್ರದ ಮೊದಲ ಸನ್ನಿವೇಶಕ್ಕೆ ಪಿ.ಶೇಷಾದ್ರಿ ಆರಂಭ ಫಲಕ ತೋರಿದರು. ಟಿಎನ್ ಸೀತಾರಾಂ ಕ್ಯಾಮೆರಾ ಚಾಲನೆ ಮಾಡಿದರು. ಚಿತ್ರರಂಗದ ಅನೇಕ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.
ಸಾಮಾನ್ಯವಾಗಿ ಹೀರೋಗೆ ಕಥೆ ಹೇಳೋಕೆ ನಿರ್ದೇಶಕರು ಬರುತ್ತಾರೆ, ಆದರೆ ಈ ಚಿತ್ರಕ್ಕೆ ನಾನೇ ಕಥೆ ಹುಡುಕಿಕೊಂಡು ಹೋಗಿದ್ದೆ ಎಂದು ಸಿನಿಮಾ ಆರಂಭವಾದ ಬಗ್ಗೆ ಸತೀಶ್ ನಿನಾಸಂ ಮಾಹಿತಿ ಬಿಚ್ಚಿಟ್ಟಿದ್ದಾರೆ. ಚಿತ್ರಕ್ಕೆ ನಾಯಕಿಯಾಗಿ ಕಾವ್ಯ ಶೆಟ್ಟಿ ಕಾಣಿಸಿಕೊಲ್ಳುತ್ತಿದ್ದಾರೆ. ಟಿ ಕೆ ದಯಾನಂದ ಅವರ ಕಥೆಗೆ ವಿನೋದ್ ದೋಂಡಾಳೆ ನಿರ್ದೇಶನವಿದೆ.
ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ, ಛಾಯಾಗ್ರಾಹಕ ಲವಿತ್ ಹಾಗೂ ನಟ ಬಿ.ಸುರೇಶ್ ಸಹ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ವೃದ್ಧಿ ಕ್ರಿಯೇಷನ್ಸ್ ಹಾಗೂ ಸತೀಶ್ ಪಿಕ್ಚರ್ ಹೌಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.