KGF 2 ಸಿನಿಮಾದ ನಂತರ ಎಲ್ಲರಿಗೂ ಕಣ್ಣಿರುವುದು ಕನ್ನಡದ 777 ಚಾರ್ಲಿ ಸಿನಿಮಾದ ಮೇಲೆ.. ರಕ್ಷಿತ್ ಶೆಟ್ಟಿ ಅಭಿನಯದ ಈ ಬಹುನಿರೀಕ್ಷೆಯ ‘ಇಂಡಿಯನ್’ ಸಿನಿಮಾದಲ್ಲಿ ನಾಯಿ ಮತ್ತು ಮನಷ್ಯನ ನಡುವಿನ ಬಾಂಧವ್ಯದ ಬಗ್ಗೆ ತಿಳಿಸಲಾಗಿದ್ದು , ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿದ್ದು ಉತ್ತಮ ಪ್ರದರ್ಶನ ಕಂಡಿದೆ.. ಅಂದ್ಹಾಗೆ 777 ಚಾರ್ಲಿ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ..
ಶ್ವಾನ ಮತ್ತು ಮನುಷ್ಯನ ನಡುವಿನ ಬಾಂಧವ್ಯವನ್ನ ಒಳಗೊಂಡಿರು ಈ ಚಿತ್ರಕ್ಕೆ ಕಿರಣ್ ರಾಜ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ ಸಖತ್ ಎಮೋಷನಲ್ ಆಗಿದೆ ಎನ್ನವುದನ್ನ ಟ್ರೇಲರ್ ನೋಡಿದ ಕೂಡಲೆ ತಿಳಿದುಬರಲಿದೆ. ರಕ್ಷಿತ್ ಶೆಟ್ಟಿ ಜೊತೆ ಸಂಗೀತ ಶೃಂಗೇರಿ, ರಾಜ್ ಬಿ ಶೆಟ್ಟಿ , ದಾನೀಶ್ ಸೇಠ್ ಮೊದಲಾದವರು ನಟಿಸಿದ್ದಾರೆ.
777 ಚಾರ್ಲಿ ಪ್ಯಾನ್ ಇಂಡಿಯಾ ಸಿನಿಮಾ, ಕನ್ನಡ ಹಿಂದಿ ತೆಲುಗು ತಮಿಳು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಮಾಡಲಾಗುತ್ತಿದೆ ಹಾಗಾಗಿ ಪರಭಾಷೆಯ ಹಲವು ಹೀರೋ ಹಿರೋಹಿನ್ ಗಳು ಈ ಚಿತ್ರದ ಟ್ರೇಲರ್ ನ್ನ ಶೇರ್ ಮಾಡಿ ಸಪೋರ್ಟ್ ಮಾಡಿದ್ದಾರೆ.
ತಮಿಳಿನ ಖ್ಯಾತ ನಟ ಧನುಷ್, ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಸೇರಿ ಹಲವು ಭಾಷೆಯ ಘಟಾನುಘಟಿಗಳು ಈ ಚಿತ್ರದ ಟ್ರೆಲರ್ ಹಂಚಿಕೊಂಡು ಶುಭ ಕೋರಿದ್ದಾರೆ. ಸಿನಿಮಾ ಜೂನ್ 10 ರಂದು ಪ್ರಪಂಚದಾದ್ಯಂತ ತೆರೆಕಾಣಲಿದೆ.