KGF 2 ನಂತರ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಎರೆಡು ಕನ್ನಡದ ಇಂಡಿಯನ್ ಸಿನಿಮಾಗಳೆಂದ್ರೆ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಮತ್ತೆ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ.. ಇವೆರೆಡೂ ಸಿನಿಮಾಗಳು ಒಂದ್ ರೇಂಜ್ ಗೆ ಹವಾ ಸೃಷ್ಟಿಸಿವೆ… ಎರೆಡೂ ಸಿನಿಮಾಗಳ ಕಾನ್ಸೆಪ್ಟ್ ಬೇರೆನೇ ಇದೆ..
ಇದೀಗ ಕಿಚ್ಚ ಸುದೀಪ್ ಅವರು ರಕ್ಷಿತ್ ಶೆಟ್ಟಿ ಅವರ ‘777 ಚಾರ್ಲಿ’ ಸಿನಿಮಾವನ್ನ ಮೆಚ್ಚಿಕೊಂಡಿದ್ದಾರೆ..
‘777 ಚಾರ್ಲಿ’ ಸಿನಿಮಾ ನೋಡಿದ ಕಿಚ್ಚ ಸುದೀಪ್ ತಮ್ಮ ಅಭಿಪ್ರಾಯವನ್ನು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. 777 ಚಾರ್ಲಿ ಸಿನಿಮಾದ ಟ್ರೈಲರ್ ಗಿಂತ ಹೆಚ್ಚಾಗಿ ಸಿನಿಮಾವನ್ನು ನೋಡಿದ್ದೇನೆ. ನನಗೆ ಸಿನಿಮಾದ ಪ್ರತಿಯೊಂದು ಸೀನ್ ಬಹಳ ಇಷ್ಟವಾಯಿತು. ಇಂತಹ ಅದ್ಬುತ ಸ್ಕ್ರೀಪ್ ಮಾಡಲು ಬಹಳ ಸಮಯ ಹಾಗೂ ಶ್ರಮವನ್ನು ಸಿನಿಮಾ ತಂಡ ಹಾಕಿದೆ. ಅದಕ್ಕೆ ತಕ್ಕಂತೆ ಸಿನಿಮಾ ಕೂಡ ಅದ್ಬುತವಾಗಿ ಮೂಡಿ ಬಂದಿದೆ. ಹೊಸ ರೀತಿಯ ಸಾಹಸಕ್ಕೆ ಕೈ ಹಾಕಿರುವ ನಿಮ್ಮ ಪ್ರಯತ್ನ ನಿಜಕ್ಕೂ ಚೆನ್ನಾಗಿದೆ. ರಕ್ಷಿತ್ ಶೆಟ್ಟಿ ಹಾಗೂ ಸಿನಿಮಾ ತಂಡದ ಎಲ್ಲರಿಗೂ ನನ್ನ ಬೆಸ್ಟ್ ವಿಶ್ ಎಂದು ಸಿನಿಮಾದ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
ನಟ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಟ್ರೈಲರ್ ಅನ್ನು ಇತ್ತೀಚೆಗಷ್ಟೇ 5 ಭಾಷೆಗಳಲ್ಲಿ ರಿಲೀಸ್ ಮಾಡಲಾಗಿತ್ತು. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಯ್ಯೂಟೂಬ್‌ನಲ್ಲಿ ಭಾರೀ ವೀಕ್ಷಣೆ ಪಡೆದುಕೊಂಡಿದೆ.
ಮೇ 16 ಮಧ್ಯಾಹ್ನ 12.12 ಕ್ಕೆ ‘777 ಚಾರ್ಲಿ’ ಸಿನಿಮಾದ ಟ್ರೇಲರ್ 5 ಭಾಷೆಗಳಲ್ಲಿ ರಿಲೀಸ್ ಆಗಿದೆ. ಏಕಕಾಲದಲ್ಲಿ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಿದೆ. ಆಯಾ ಭಾಷೆಯ ಸ್ಟಾರ್ ನಟರು ಸಿನಿಮಾದ ಟ್ರೈಲರ್‌ನ್ನು ರಿಲೀಸ್ ಮಾಡಿದ್ದಾರೆ.
ಜೂನ್ 10 ಕ್ಕೆ ವಿಶ್ವದ್ಯಾಂತ ‘777 ಚಾರ್ಲಿ’ ಸಿನಿಮಾ ರಿಲೀಸ್ ಆಗಲಿದೆ. ಕಿರಣ್ ರಾಜು ನಿರ್ದೇಶನ ಮಾಡಿರುವ 777 ಚಾರ್ಲಿ ಸಿನಿಮಾ ಜೂನ್ 10 ಕ್ಕೆ ಎಲ್ಲಾ ಥಿಯೇಟರ್‌ಗಳಲ್ಲಿ ಅಬ್ಬರಿಸಲು ಸಜ್ಜಾಗಿದೆ. ಕೆಜಿಎಫ್ 2 ಬಳಿಕ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.