ಬಾಲಿವುಡ್ ನಟಿ ಕಂಗನಾ ರಣೌತ್ ಹಾಗೂ ವಿವಾದಗಳಿಗೆ ಒಂದು ಅವಿನಾಭಾವ ಸಂಬಂಧವಿದೆ. ವಿವಾದಗಳೇ ಕಂಗನಾರನ್ನ ಬಿಟ್ರೂ ವಿವಾದಗಳು ಕಂಗನಾ ಬೆನ್ನು ಬಿಡಲ್ಲ.. ಎಷ್ಟು ಒಳ್ಳೆ ನಟಿ ಎಂಬ ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೋ ಅದಕ್ಕಿಂತ 100 ಪಟ್ಟು ವಿವಾದಗಳ ಮೂಲಕವೇ , ಸದಾ ಏನಾದ್ರೂ ಒಂದು ವಿಚಾರವನ್ನ , ಯಾರದರೂ ಒಬ್ರನ್ನ ವಿರೋಧಿಸುತ್ತಲೇ , ನೇರವಾಗಿ ಮಾತನಾಡ್ತಾ ದಿಟ್ಟತನ ಪ್ರದರ್ಶಿಸುವ ನಟಿ..
ಒಂದ್ ರೀತಿ ಬಾಲಿವುಡ್ ‘ಕ್ವೀನ್’ ಗೆ ವಿವಾದಗಳಂದ್ರೆ ಭಾರೀ ಇಷ್ಟ ಏನ್ನುವಂತಾಗಿದೆ.. ಅವರ ಜನಪ್ರಿಯತೆಯೂ ಇತರರಿಗಿಂತ ಹೆಚ್ಚಿದೆ.. ಇದೀಗ ಬಾಲಿವುಡ್ ವಿರುದ್ಧ ಮತ್ತೆ ಗುಡುಗಿದ್ದಾರೆ.. ಅದ್ರಲ್ಲೂ ಸ್ಟಾರ್ ಕಿಡ್ ಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ..
ಸದಾ ಬಾಲಿವುಡ್ ಮಾಫಿಯಾ , ನೆಪಾಟಿಸಮ್ ವಿರುದ್ಧ ಧ್ವನಿ ಎತ್ತುವ ಕಂಗನಾ ಇದೀಗ ಮತ್ತೆ ಈ ಬಗ್ಗೆ ಮಾತನಾಡಿದ್ದಾರೆ..
ಅವರ ‘ಧಾಕಡ್’ ಸಿನಿಮಾದ ಪ್ರಚಾರದಲ್ಲಿ ತೊಡಗಿರುವ ಕಂಗನಾ ಪ್ರಚಾರದ ವೇಳೆಯೇ ಬಾಲಿವುಡ್ ವಿರುದ್ಧ ಗುಡುಗಿದ್ಧಾರೆ..
ಕೆಲವು ದಿನಗಳ ಹಿಂದೆ ಹಿಂದಿ ಚಿತ್ರಗಳನ್ನು ದಕ್ಷಿಣ ಭಾರತದ ಸಿನಿಮಾಗಳಿಗೆ ಹೋಲಿಸಿ ಮಾತನಾಡಿದ್ದರು. ಇದೀಗ ಬಿಗ್ ಸ್ಟಾರ್ ಮಕ್ಕಳ ಲೈಫ್ಸ್ಟೈಲ್ ಬಗ್ಗೆ ಮಾತನಾಡಿ, ಅವರು ನೋಡಲು ಬೆಂದ ಮೊಟ್ಟೆಗಳಂತೆ ವಿಚಿತ್ರವಾಗಿರುತ್ತಾರೆ ಎಂದಿದ್ದಾರೆ.
ಬಾಲಿವುಡ್ ಸ್ಟಾರ್ ಮಕ್ಕಳು ವಿದೇಶಕ್ಕೆ ಓದಲು ಹೋಗುತ್ತಾರೆ. ಇಂಗ್ಲೀಷ್ನಲ್ಲೇ ಮಾತಾನಾಡುತ್ತಾರೆ. ಹಾಲಿವುಡ್ ಚಿತ್ರಗಳನಷ್ಟೇ ನೋಡುತ್ತಾರೆ. ಅವರ ಲೈಫ್ಸ್ಟೈಲ್ ವಿಭಿನ್ನವಾಗಿರುತ್ತದೆ. ಅವರು ಅಭಿಮಾನಿಗಳ ಜತೆ ಕನೆಕ್ಟ್ ಆಗೋದಾದರೂ ಹೇಗೆ ಹೇಳಿ. ನಾನು ಅವರನ್ನು ಟ್ರೋಲ್ ಮಾಡುತ್ತಿಲ್ಲ. ಆದರೆ ಅವರು ನೋಡಲು ಬೆಂದ ಮೊಟ್ಟೆಗಳಂತೆ ವಿಚಿತ್ರವಾಗಿರುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ..