ಬಾಲಿವುಡ್ ನ ಕಾಂಟ್ರವರ್ಸಿ ಕ್ವೀನ್ ಕಂಗನಾ ರಣೌತ್ ಸದ್ಯ ಧಾಕಡ್ ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿಯಿದ್ದಾರೆ.. ಜೊತೆಗೆ ಟೆಂಪಲ್ ರನ್ ಶುರುಮಾಡಿದ್ದು , ಸಿನಿಮಾ ರಿಲೀಸ್ ಗೂ ಮುನ್ನವೇ ತಿರುಪತಿ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ..
ಸಿನಿಮಾ ಮೇ 20 ರಂದು ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಈ ಹಿನ್ನಲೆ ಕಂಗನಾ ರನೌತ್ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈಗಾಗಲೇ ಸಿನಿಮಾದ ಹಾಡು, ಟ್ರೈಲರ್ಗಳು ಪ್ರೇಕ್ಷಕರ ಗಮನ ಸೆಳೆದಿದ್ದು, ಸಿನಿಮಾ ಶೀಘ್ರವೇ ಬಿಡುಗಡೆಯಾಗಬೇಕಿದೆ.
ಇಂದು ಮೇ 16 ಬುದ್ಧ ಪೂರ್ಣಿಮೆ ಹಿನ್ನಲೆ ನಟಿ ಕಂಗನಾ ರಣೌತ್ ಆಂಧ್ರದ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಭೇಟಿ ನೀಡಿದ್ದರು. ಕುಟುಂಬಸ್ಥರು ಹಾಗೂ ಧಾಕಡ್ ಸಿನಿಮಾದ ನಿರ್ಮಾಪಕರಾದ ದೀಪಕ್ ಮುಕುಟ್, ಪತ್ನಿ ಕೃಷ್ಣ ಮುಕಟ್ ಕೂಡ ದೇಗುಲಕ್ಕೆ ಆಗಮಿಸಿ ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದಾರೆ. ಈ ಸಿನಿಮಾದಲ್ಲಿ ಕಂಗನಾ ಸಖತ್ ಆಕ್ಷನ್ ಸೀನ್ ಗಳಲ್ಲಿ ಕಾಣಿಸಿಕೊಳ್ತಾಯಿದ್ದು ಸಿನಿಮಾದ ಮೇಲೆ ಭಾರೀ ನಿರೀಕ್ಷೆ ಇದೆ..