ಕಮಲ್ ಹಾಸನ್ ರ ಬಹುನಿರೀಕ್ಷೆಯ ವಿಕ್ರಮ್ ಸಿನಿಮಾ ಹಾಡುಗಳು ಇತ್ತೀಚೆಗೆ ರಿಲೀಸ್ ಆಗಿ ಧೂಳೆಬ್ಬಿಸಿದೆ..
ಲೋಕೇಶ್ ಕನಕರಾಜ್ ನಿರ್ದೇಶನದ ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಮತ್ತು ಫಹಾದ್ ಫಾಜಿಲ್ ಕೂಡ ನಟಿಸಿದ್ದಾರೆ.
ಮೂವರು ನಾಯಕರಿರುವ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
ಈ ಸಿನಿಮಾದಲ್ಲಿ ನಾಯಕ ಸೂರ್ಯ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಕಾಲಿವುಡ್ ನ ಲೇಟೆಸ್ಟ್ ಟಾಕ್.
ಈ ಸುದ್ದಿಗೆ ನಿರ್ದೇಶಕ ಲೋಕೇಶ್ ಕನಕರಾಜು ಪ್ರತಿಕ್ರಿಯಿಸಿದ್ದಾರೆ. ಸಿನಿಮಾದಲ್ಲಿ ಈ ಮೂವರು ಸ್ಟಾರ್ ಹೀರೋಗಳ ಜೊತೆಗೆ ಸೂರ್ಯ ಕೂಡ ನಟಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ವಿಕ್ರಂ ಸಿನಿಮಾದಲ್ಲಿ ಸೂರ್ಯ ಪ್ರಮುಖ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರವನ್ನು ಲೋಕೇಶ್ ಕನಕರಾಜು ನಿರ್ದೇಶಿಸಿದ್ದಾರೆ. ಕಮಲ್ ಅವರ ಸ್ವಂತ ನಿರ್ಮಾಣ ಸಂಸ್ಥೆ ರಾಜ್ ಕಮಲ್ ಇಂಟರ್ ನ್ಯಾಶನಲ್ ಫಿಲಂಸ್ ನ ಬ್ಯಾನರ್ ನಲ್ಲಿ ಅದ್ಧೂರಿ ಬಜೆಟ್ ನಲ್ಲಿ ಮೂಡಿಬಂದಿರುವ ಈ ಸಿನಿಮಾ ಜೂನ್ 3ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಇತ್ತೀಚೆಗಷ್ಟೇ ಸೂರ್ಯ ‘ವಿಕ್ರಂ’ ಶೂಟಿಂಗ್ ಸ್ಥಳಕ್ಕೆ ಹೋದಾಗ ಕಮಲ್ ಅವರನ್ನು ಆತ್ಮೀಯವಾಗಿ ಆಹ್ವಾನಿಸಿದ ವಿಡಿಯೋ ಬಿಡುಗಡೆಯಾಗಿದೆ.
ಇದರೊಂದಿಗೆ ಸೂರ್ಯ ಅತಿಥಿ ಪಾತ್ರ ಮಾಡಿರುವುದು ಸ್ಪಷ್ಟವಾಗಿದೆ. ಜೂನ್ 3 ರಂದು ತಮಿಳು ಮತ್ತು ತೆಲುಗಿನಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.