KGF 2 ನಂತರ ಸದ್ಯಕ್ಕೆ ಒಂದು ರೇಂಜ್ ಗೆ ಸೌಂಡ್ ಮಾಡ್ತಿರುವ ಬಹುಭಾಷಾ ಸಿನಿಮಾ ಅಂದ್ರೆ ಅದು ಕನ್ನಡದ ಕಿಚ್ಚು ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾನೆ..
ವಿಕ್ರಾಂತ್ ರೋಣ ಸಿನಿಮಾ ಹಾಲಿವುಡ್ ರೇಂಜ್ ಗೆ ಸೌಂಡ್ ಮಾಡ್ತಿದೆ..
ಭಾರತೀಯ ಸಿನಿಮಾರಂಗದ ಒನ್ ಆಫ್ ದ ಮೋಸ್ಟ್ ಆಂಟಿಸಿಪೇಟೆಡ್ ಸಿನಿಮಾ… ಈ ಸಿನಿಮಾ ಸ್ಯಾಂಡಲ್ ವುಡ್ ಮಾತ್ರವಲ್ಲದೆ ಪಕ್ಕದ ರಾಜ್ಯಗಳಲ್ಲೂ ಭಾರಿ ನಿರೀಕ್ಷೆ ಹುಟ್ಟಿಸಿದೆ.. ಬರೀ ಗ್ಲಿಂಪ್ಸ್ ಮೂಲಕವೇ ಹಾಲಿವುಡ್ ರೇಂಜ್ ಗೆ ಸೌಂಡ್ ಮಾಡಿರುವ ಈ ಸಿನಿಮಾದ TiTle ಲಾಂಚ್ ಆಗಿದ್ದು , ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ… 3ಡಿ ತಂತ್ರಜ್ಞಾನದಲ್ಲಿ ಮೂಡಡಿರುತತ್ತಿರುವ ಈ ಸಿನಿಮಾ ಅನೇಕ ವಿಚಾರಗಳಿಂದ ಜಗತ್ತಿನ ಗಮನ ಸೆಲೆದಿದೆ..ಟೀಸರ್ ಕೂಡ ಸುಮಾರು ಭಾಷೆಗಳಲ್ಲಿ ರಿಲೀಸ್ ಆಗಿತ್ತು.. ಇಂಗ್ಲಿಷ್ ನಲ್ಲೂ ರಿಲೀಸ್ ಆಗಿದ್ದು ವಿಶೇಷ..
ವಿಕ್ರಾಂತ್ ರೋಣ ಚಿತ್ರ ಜುಲೈ 28ಕ್ಕೆ ಅದ್ದೂರಿಯಾಗಿ ರಿಲೀಸ್ ಆಗಲಿದೆ. ಅದಕ್ಕೂ ಮೊದಲು ಚಿತ್ರತಂಡದಿಂದ ಅಭಿಮಾನಿಗಳಿಗೆ ಹೊಸ ಅಪ್ಡೇಟ್ ಸಿಕ್ಕಿದೆ.
`ವಿಕ್ರಾಂತ್ ರೋಣ’ ಚಿತ್ರದ ಹಿಂದಿ ವಿತರಣೆಯ ಜವಾಬ್ದಾರಿ ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ತೆಗೆದುಕೊಂಡಿದ್ದಾರೆ. ಈ ಮೂಲಕ ಕಿಚ್ಚ ಸುದೀಪ್ ಸಿನಿಮಾಗೆ ಸಲ್ಮಾನ್ ಖಾನ್ ಸಾಥ್ ನೀಡಿದ್ದಾರೆ.
ವಿಕ್ರಾಂತ್ ರೋಣ ಹಿಂದಿ ವಿತರಣೆಯ ಜವಾಬ್ದಾರಿಯನ್ನು ಸಲ್ಮಾನ್ ತೆಗೆದುಕೊಳ್ಳುತ್ತಿರುವುದು ಕೇಳಿ ಅಭಿಮಾನಿಗಳು ರೋಮಾಂಚನಗೊಂಡಿದ್ದಾರೆ. ಈ ಬಗ್ಗೆ ಚಿತ್ರತಂಡ ಕೂಡ ರಿವೀಲ್ ಮಾಡಿದ್ದು, ಸಲ್ಮಾನ್ ಖಾನ್ ಕೂಡ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಕಿಚ್ಚ ಸುದೀಪ್ ವಿಕ್ರಾಂತ್ ರೋಣ 3ಡಿ ಅವತರಣಿಕೆಯನ್ನು ಹಿಂದಿಯಲ್ಲಿ ಪ್ರೆಸೆಂಟ್ ಮಾಡುತ್ತಿರುವುದು ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.
ಬಿಡುಗಡೆಗೂ ಮೊದಲೇ ವಿಕ್ರಾಂತ್ ರೋಣ ಚಿತ್ರ ದಾಖಲೆ ಬರೆಯುತ್ತಿದೆ. ಓವರ್ಸೀಸ್ ರೈಟ್ಸ್ ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಕಿಚ್ಚನ ಬಹುನಿರೀಕ್ಷಿ ಸಿನಿಮಾ ಇದೇ ಜುಲೈ 28ಕ್ಕೆ 3ಡಿಯಲ್ಲಿ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಸುದೀಪ್ ಜತೆ ಜಾಕ್ವೆಲಿನ್ ಫೆರ್ನಾಂಡಿಸ್ ನಿರೂಪ್ ಭಂಡಾರಿ, ನೀತಾ ಅಶೋಕ್, ಸೇರಿದಂತೆ ಹಲವರು ನಟಿಸಿದ್ದಾರೆ.