ಮದಗಜ ಚಿತ್ರದ ನಂತರ ಶ್ರೀಮುರುಳಿ ಬಘೀರನಾಗಿ ಬರಲು ರೆಡಿಯಾಗಿದ್ದಾರೆ. ಹೊಂಬಾಳೆ ಫಿಲ್ಮ್ ನಿರ್ಮಾಣದ ಬಹುನಿರೀಕ್ಷಿತ ಚಿತ್ರಕ್ಕೆ ಡಾ, ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಯಶ್ ನಟನೆಯ ‘ಲಕ್ಕಿ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಡಾ.ಸೂರಿ ಆಕ್ಷನ್ ಕಟ್ ಹೇಳಿದ್ದರು. ಮೇ.20 ರಂದು ಚಿತ್ರದ ಮುಹೂರ್ತ ನಡೆಯಲಿದೆ.
ಶ್ರೀ ಮುರುಳಿ ಬಘೀರ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಲು ಉತ್ಸುಕರಾಗಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷವೆಂದರೆ, ಶ್ರೀಮುರುಳಿ ಅವರ ಕೆರಿಯರ್ ಮರುಜನ್ಮ ಕೊಟ್ಟ ಸಿನಿಮಾ ಉಗ್ರಂ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಕಥೆ ಬರೆದಿದ್ದಾರೆ.
ಬಘೀರ ಸಿನಿಮಾದಲ್ಲಿ ಶ್ರೀಮುರುಳಿ ಟಫ್ ರಗಡ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು ‘When society becomes a jungle.. ಎಂಬ ಟ್ಯಾಗ್ ಲೈನ್ ಹೊಂದಿದೆ.
ಸಿನಿಮಾ ಮುಹೂರ್ತಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಮುರುಳಿ, “ಬಘೀರ ಸಿನಿಮಾ ಶೂಟಿಂಗ್ ನ್ನು ಪ್ರಾರಂಭಿಸಲು ಉತ್ಸುಕನಾಗಿದ್ದೇನೆ, ಈ ತಿಂಗಳಲ್ಲಿ ಸಣ್ಣ ವೇಳಾಪಟ್ಟಿಯ ಮೂಲಕ ಶೂಟಿಂಗ್ ನ್ನು ಪ್ರಾರಂಭಿಸಲಿದ್ದೇವೆ. ನನಗೆ ದೊರೆತ ಅತ್ಯುತ್ತಮ ಕಥೆಗಳಲ್ಲಿ ಬಘೀರ ಒಂದಾಗಿದ್ದು, ಇದು ನನಗೆ ಪಾತ್ರಕ್ಕೆ ತಕ್ಕಂತೆ ತಯಾರಾಗುವುದಕ್ಕೆ ಸಹಾಯ ಮಾಡಿದೆ. ತಂಡ ಈ ಚಿತ್ರಕ್ಕಾಗಿ 2 ವರ್ಷಗಳಿಂದ ಅವಿರತ ಶ್ರಮ ಹಾಕಿದೆ. ಉಗ್ರಂ ನಂತರ ನನ್ನ ಈ ಪಾತ್ರವನ್ನು ಜನರು ಇಷ್ಟಪಡುತ್ತಾರೆ ಎಂಬ ವಿಶ್ವಾಸವಿದೆ” ಎಂದು ಹೇಳಿದ್ದಾರೆ.
ಲಕ್ಕಿ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿರುವ ಡಾ.ಸೂರಿ, ನಾಲ್ಕು ವರ್ಷಗಳಿಂದ ಯಾವುದೇ ಚಿತ್ರ ಮಾಡಿರಲಿಲ್ಲ. ಬಘೀರ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.