ಬಾಲಿವುಡ್ ನ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ನಲ್ಲೂ ಗುರುತಿಸಿಕೊಂಡಿದ್ದಾರೆ.. ಅಮೆರಿಕಾದ ಖ್ಯಾತ ಗಾಯಕ ನಿಕ್ ಜಾನಸ್ ಜೊತೆಗೆ ಮದುವೆಯಾದ ನಂತರ ಅಮೆರಿಕಾದಲ್ಲೇ ಸೆಟಲ್ ಆಗಿರುವ ನಟಿ ಆಗಾಗ ಪತಿ ಜೊತೆಗಿನ ಫೋಟೋ ವಿಡಿಯೋಗಳನ್ನ ಶೇರ್ ಮಾಡಿಕೊಳ್ತಾ ಇರುತ್ತಾರೆ..
ನಟಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ವೆಬ್ ಸಿರೀಸ್ ‘ಸಿಟಾಡೆಲ್’ ಚಿತ್ರೀಕರಣದ ವೇಳೆ ಸೆಟ್‌ನಲ್ಲಿನ ಫೋಟೋವೊಂದನ್ನ ಶೇರ್ ಮಾಡಿ ಅಭಿಮಾನಿಗಳಲಲ್ಲಿ ಗೊಂದಲ ಆತಂಕ ಸೃಷ್ಟಿ ಮಾಡಿದ್ದಾರೆ..
ಫೋಟೋ ನೋಡಿದ ಅಭಿಮಾನಿಗಳು ಆತಂಕದಿಂದ ಆರೋಗ್ಯ ಅವರನ್ನ ವಿಚಾರಿಸುತ್ತಿದ್ದಾರೆ.
ಪ್ರಿಯಾಂಕ ಹಂಚಿಕೊಂಡಿರುವ ಫೋಟೋದಲ್ಲಿ, ತುಟಿ ಮತ್ತು ಮೂಗಿನ ಸುತ್ತಲೂ ರಕ್ತ ಕಾಣುತ್ತಿದೆ. ಿದು ಮೇಕಪ್ ಎಂದು ಕೆಲವರು ಅಂದಾಜಿಸುತ್ತಿದ್ರೆ ಇನ್ನೂ ಹಲವರು ನಟಿಗೇನಾಯ್ತು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಿಯಾಂಕಾ ಚೋಪ್ರಾ ‘ಸಿಟಾಡೆಲ್’ ವೆಬ್ ಸರಣಿಯ ಚಿತ್ರೀಕರಣಕ್ಕಾಗಿ ಹಲವು ತಿಂಗಳುಗಳಿಂದ ಲಂಡನ್‌ನಲ್ಲಿ ವಾಸವಿದ್ದಾರೆ. ‘ಸಿಟಾಡೆಲ್’ ಸರಣಿಯಲ್ಲಿ ಪ್ರಿಯಾಂಕಾ ಚೋಪ್ರಾ ಪತ್ತೇದಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಿಯಾಂಕಾ ಅವರಲ್ಲದೆ, ಈ ಸರಣಿಯಲ್ಲಿ ರಿಚರ್ಡ್ ಮ್ಯಾಡೆನ್ ಮತ್ತು ಪೆಡ್ರೊ ಲಿಯಾಂಡ್ರೊ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಒಟಿಟಿ ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ‘ಸಿಟಾಡೆಲ್’ ಬಿಡುಗಡೆಯಾಗಲಿದೆ.
‘ಸಿಟಾಡೆಲ್’ ಮತ್ತು ‘ಟೆಕ್ಸ್ಟ್ ಫಾರ್ ಯೂ’ ಅಲ್ಲದೇ ಅನೇಕ ಹಾಲಿವುಡ್ ಪ್ರಾಜೆಕ್ಟ್‌ಗಳು ಪ್ರಿಯಾಂಕಾ ಕೈಯಲ್ಲಿವೆ. ಶೀಘ್ರದಲ್ಲೇ ಜನಪ್ರಿಯ ಚಿತ್ರಗಳಾದ ‘ಮ್ಯಾಟ್ರಿಕ್ಸ್ 4’, ‘ಇಟ್ಸ್ ಆಲ್ ಕಮಿಂಗ್ ಬ್ಯಾಕ್ ಟು ಮಿ’ ಮತ್ತು ‘ಎಂಡಿಂಗ್ ಥಿಂಗ್ಸ್’ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ‘ಜೀ ಲೇ ಜರಾ’ ಚಿತ್ರದ ಮೂಲಕ ಬಾಲಿವುಡ್‌ಗೆ ಮರಳಲಿದ್ದಾರೆ.
ಶೂಟಿಂಗ್ ವೇಳೆ ಪ್ರಿಯಾಂಕಾ ಚೋಪ್ರಾಗೆ ಗಾಯ..