15 ಸೆಕೆಂಡ್ ವೀಡಿಯೋಗಾಗಿ ಬೆಟ್ಟಕ್ಕೆ ಬೆಂಕಿ ಇಟ್ಟ ಟಿಕ್ ಟಾಕ್ ತಾರೆ….
15 ಸೆಕೆಂಡ ನ ಟಿಕ್ ಟಾಕ್ ವೀಡಿಯೋ ರೀಲ್ಸ್ ಗಾಗಿ ಪಾಕಿಸ್ತಾನಿ ಸೋಶಿಯಲ್ ಮೀಡಿಯಾ ಸ್ಟಾರ್ ಒಬ್ಬಳು ಬೆಟ್ಟಕ್ಕೆ ಬೆಂಕಿ ಹಚ್ಚಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಹುಮೈರಾ ಅಸ್ಗರ್ ಎಂಬ ಯುವತಿ ಟಿಕ್ ಟಾಕ್ ಗಾಗಿ ಕಾಡಿಗೆ ಬೆಂಕಿ ಇಟ್ಟು ಟೀಕೆಯಗಳನ್ನ ಎದುರಿಸುತ್ತಿದ್ದಾಳೆ. ಹುಮೈರಾ ಅಸ್ಗರ್ ಪೊಸ್ಟ್ ಮಾಡಿದ ವೀಡಿಯೋ ಗೆ “ ನಾನು ಎಲ್ಲಿದ್ದರು ಅಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ ಎಂಬ ಶೀರ್ಷಿಕೆ ನೀಡಿದ್ದಾಳೆ. ಬೆಟ್ಟದ ಮುಂದೆ ಸಿಲ್ವರ್ ಬಣ್ಣದ ಗೌನ್ ತೊಟ್ಟು ನಡೆದುಕೊಂಡು ಬರುತ್ತಿರುವುದನ್ನ ವೀಡಿಯೋದಲ್ಲಿ ನೋಡಬಹುದು.
ಪರಿಸರ ಕಾಳಜಿ ಮರೆತು ಬೇಜವಾಬ್ದಾರಿ ಪ್ರದರ್ಶಿಸಿದ ಯುವತಿಯ ನಡೆಗೆ ನೆಟ್ಟಿಗರು ಟೀಕೆಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಟೀಕೆಗಳ ಬಳಿಕ ಆ ವೀಡಿಯೋವನ್ನ ತೆಗೆದು ಹಾಕಲಾಗಿದೆ. ಟಿಕ್ಟಾಕ್ನಲ್ಲಿ ಹುಮೈರಾ ಅಸ್ಗರ್ 11 ಮಿಲಿಯನ್ಗಿಂತಲೂ ಹೆಚ್ಚು ಫಾಲೋವರ್ಸ್ ಗಳನ್ನ ಹೊಂದಿದ್ದಾಳೆ.
https://twitter.com/i/status/1526492125428326406