ಸಿನಿಮಾ ವಿಮರ್ಶೆ
ಸಿನಿಮಾ – ದಾರಿ ಯಾವುದಯ್ಯ ವೈಕುಂಠಕ್ಕೆ
ನಿರ್ದೇಶಕ – ಸಿದ್ದು ಪೂರ್ಣಚಂದ್ರ
ನಿರ್ಮಾಪಕರು – ಶರಣಪ್ಪ ಎಂ. ಕೊಟಗಿ
ತಾರಾಬಳಗ – ವರ್ಧನ್ ತೀರ್ಥಿಹಳ್ಳಿ , ಪೂಜಾ , ರಾಜ್ ಬಲವಾಡಿ , ಶೀಬಾ , ಸ್ಪಂದನ ಪ್ರಸಾದ್ , ಸುಧಾ , ಪ್ರಣಯ ಮೂರ್ತಿ ಮುಂತಾದವರು
ಮನುಷ್ಯತ್ವದ ಜೊತೆಗೆ ಬದುಕಿನ ಪಾಠ ಕಲಿಸುವ ಚಿತ್ರ ದಾರಿ ಯಾವುದಯ್ಯ ವೈಕುಂಠಕ್ಕೆ… ಈ ಸಿನಿಮಾದ ಪ್ರಮುಖ ಹೈಲೇಟ್ ಅಂದ್ರೆ ಅದು ಸ್ಮಶಾನ.. ಇಡೀ ಸಿನಿಮಾ ಬಹುತೇಕ ನಡೆಯೋದು ಸ್ಮಶಾನದಲ್ಲೇ.. ಮೌಲ್ಯಭರಿತ ಕಥೆ,,,, ಸಿನಿಮಾದಲ್ಲಿ ಭಾವನೆಗಳ ಸಮಾಗಮ ,,, ಆಗಾಗ ಅಳಿಸುವ , ಜೀವನದ ಕೆಲ ಮೌಲ್ಯಗಳನ್ನ ತಿಳಿಸುವ , ಮನುಷ್ಯತ್ವದ ಪಾಠ ಕಲಿಸುವ ಕಥೆ ಮನಸ್ಸು ಮುಟ್ಟುತ್ತೆ..
ಸಿನಿಮಾದಲ್ಲಿ ಪ್ರೀತಿ , ಆಸೆ , ದುರಾಸೆ, ಮೋಸ , ಕೊಲೆ , ಸುಲಿಗೆ ಎಲ್ಲದರ ಮಿಶ್ರಣವಿದೆ.,.
ಪರಿವರ್ತನೆಯ ಜಾತ್ಯಾತೀತೆಯ , ಭಾವನೆಗಳ ಸಮ್ಮಿಲನದ ಕಥೆ…
ಸರಳ ಕಥೆ ಆದರೆ ಸುಂದರವಾಗಿ ಮನಸ್ಸಿಗೆ ನಾಟುವಂತೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಪೂರ್ಣಚಂದ್ರ ಅವರು.
ವೈಕುಂಠ ದರ್ಶನ ಪ್ರೇಕ್ಷಕರನ್ನ ಖುಷಿಪಡಿಸುತ್ತೆ.. ಮಾನವ ಸಂಬಂಧಗಳ ಮೌಲ್ಯವನ್ನ ಈ ಸಿನಿಮಾ ತಿಳಿಸುತ್ತದೆ.
ಸ್ಮಶಾಣ ಕಾಯುವ ಬಿಕ್ರನ ಪಾತ್ರವೂ ಅಷ್ಟೇ ಭಾವುಕರನ್ನಾಗಿಸುತ್ತೆ..
ಬಿಕ್ರನ ಪತ್ನಿ ಪುತ್ರ ವಿಯೋಗದಲ್ಲಿ ಕೊರಗುವುದು , ಈ ರೀತಿ ಕೆಲ ಸನ್ನಿವೇಷಗಳು ಪ್ರೇಕ್ಷಕರ ಕಣ್ಣು ಒದ್ದೆಯಾಗಿಸುತ್ತೆ..
ಮೋಸ , ಪಾಪ ಪ್ರಜ್ಞೆ , ಪರಿವರ್ತನೆ ಎಲ್ಲವೂ ಸಿನಿಮಾದಲ್ಲಿದೆ..
ಸ್ಮಶಾಣದಲ್ಲಿ ನೀರವ ಮೌನ.. ಆಗಾಗ ಎದೆ ತುಂಬಿ ಬರುವಂತಹ ಸನ್ನಿವೇಷಗಳು , ಬಿಕ್ರನ ಪರಿವಾರ ವಾಸ , ಕಳ್ಳನ ಎಂಟ್ರಿ , ಕ್ರೂರಿ ಒಬ್ಬನ ಪರಿವರ್ತನೆಯ ಕಥೆ ಎಲ್ಲವೂ ಸಿನಿಮಾದ ತೂಕ ಹೆಚ್ಚಿಸಿದೆ..
ಮುಗ್ಧ ಪ್ರೀತಿ , ಸ್ಮಶಾನ ಕಾಯುವಕ ಬಿಕ್ರನ ಮಗಳು ತನ್ನ ಪ್ರಿಯಕರನ ಬರುವಿಕೆಗಾಗಿ ಕಾಯುವುದು ಎಲ್ಲವೂ ಹೃದಯ ಭಾರಗೊಳಿಸುತ್ತೆ..
ಕ್ರೂರಿಯನ್ನೂ ಆರೈಕೆ ಮಾಡುವ ಬಿಕ್ರನ ಪಾತ್ರ ಕಲ್ಲು ಹೃದಯದವರ ಮನಸ್ಸನ್ನೂ ಮುಟ್ಟದೇ ಇರೋದಿಲ್ಲ. ಅದೇ ಕಳ್ಳ ಅದ್ಹೇಗೆ ಪರಿವರ್ತನೆಯಾಗುತ್ತಾನೆ ಎಂಬುದೂ ಕಥೆಯ ಜೀವಾಳ..
ಬಿಕ್ರನಾಗಿ ಕಾಣಿಸಿಕೊಂಡಿರುವ ರಾಜ್ ಬಲವಾಡಿಯವರು ತಮ್ಮ ಪಾತ್ರಜಕ್ಕೆ ಅದ್ಭುತವಾಗಿ ಜೀವ ತುಂಬಿದ್ದಾರೆ.. ವರ್ಧನ್ ತೀರ್ಥಹಳ್ಳಿ ಅವರ ಪಾತ್ರ ನೋಡುಗರನ್ನ ಮೆಚ್ಚಿಸದೇ ಇರೋದಿಲ್ಲ..
ಕ್ರೂರಿ ಕಳ್ಳನಿಂದ ಪರಿವರ್ತನೆಯಾಗಿ ಒಬ್ಬ ಉತ್ತಮ ವ್ಯಕ್ತಿಯಾಗುವ ವರ್ಧನ್ ಅವರ ಪಾತ್ರ ನಿಜಕ್ಕೂ ಜನರ ಸೆಳೆಯುತ್ತೆ.. ಜೊತೆಗೆ 30 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ವರ್ಧನ್ ಅವರು ಈ ಸಿನಿಮಾದಲ್ಲಿ ನಿಭಾಯಿಸಿರುವ ಪಾತ್ರ ಅವರ ವೃತ್ತಿ ಜೀವನಕ್ಕೆ ಮಹತ್ವದ ಒಳ್ಳೆ ಸಿನಿಮಾ ಎಂದ್ರೆ ತಪ್ಪಾಗಲಾರದು..
ಪೂಜಾ ಕೂಡ ತಮ್ಮ ಪಾತ್ರಕ್ಕೆ ಅಚ್ಚುಕಟ್ಟಾಗಿ ಹೊಂದಿಕೊಂಡಿದ್ದಾರೆ..
ಸಿನಿಮಾದಲ್ಲಿ ಲೋಕಿ ಅವರ ಮ್ಯೂಸಿಕ್ ಅದ್ಭುತವಾಗಿದ್ರೆ , ನಿತಿನ್ ಅಪ್ಪಿ ಅವರ ಕ್ಯಾಮೆರಾ ಕೈಚಳಕ ಮೋಡಿ ಮಾಡುತ್ತೆ..
ಒಟ್ಟಾರೆ ಸಿನಿಮಾ ಯಾವುದೂ ಶಾಸ್ವತವಲ್ಲ ನಾವೂ ಶಾಸ್ವತವಲ್ಲ , ಇರೋ ಚಿಕ್ಕ ಸಮಯದಲ್ಲಿ ಮಾನವೀಯತೆಯಿಂದ ಬದುಕೋಣ ಎಂಬ ಸಂದೇಶವನ್ನಂತೂ ಒತ್ತಿ ಹೇಳಿದೆ..