ಇದು ನಮ್ಮದೇ ಕಥೆ, ಎನಿಸುವಂತ ಕಥೆ ಹೇಳೊಕೆ ಯುವ ನಿರ್ದೇಶಕ ಸೂರ್ಯ ರವರು “ದೃಶ್ಯಕಾವ್ಯ” ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗುತ್ತಿದ್ದು. ನಮ್ಮ ಸಿನಿಮಾ ಕಥೆ ಅದ್ಬುತವಾಗಿದೆ , ಹೊಸ ಕಥೆ , ಇದುವರೆಗೂ ಕಂಡಿರದ,ಯಾರು ಕೇಳಿಲ್ಲದ ಕಥೆ, ಹೀಗೆಲ್ಲ ಹೇಳದೆ ಸಾಮಾನ್ಯ ವ್ಯಕ್ತಿಯ ಕಥೆ , ಪ್ರತಿಯೊಬ್ಬರ ಮನೆಯ ಹಾಗೂ ಮನಸ್ಸಿನ ಕಥೆ ನಮ್ಮ ದೃಶ್ಯಕಾವ್ಯ ಸಿನಿಮಾ ….
ಎನ್ನುತ್ತಾ , ನಮ್ಮ ಸಿನಿಮಾಗೆ ಕಥೆನೆ ನಾಯಕ , ಸಂಗೀತವೇ ನಾಯಕಿ ಎನ್ನುತ್ತ , ಚಿತ್ರರಂಗಕ್ಕೆ ಕಿರಣ್ ಮತ್ತು ರಚಿತಾ ರವರನ್ನು ಪರಿಚಯಿಸ್ತಿದ್ದಾರೆ. ಅದ್ಭುತ ರಾಗ ಸಂಯೋಜನೆಯೊಂದಿಗೆ ಕನ್ನಡ ಸಿನಿರಸಿಕರನ್ನು ರಂಜಿಸು ಜವಾಬ್ದಾರಿಯನ್ನು ವಿಶಾಲ್ ಆಲಾಪ ವಹಿಸಿಕೊಂಡಿದ್ದು, ಸಾಹಿತ್ಯ ರತ್ನ dr. ವಿ. ನಾಗೇಂದ್ರಪ್ರಸಾದ್ ಹಾಗೂ ವಿಶಾಲ್ ಆಲಾಪ ರವರು ಸಾಹಿತ್ಯ ರಚಿಸಿದ್ದು.ದೃಶ್ಯಕಾವ್ಯ ಸಿನಿಮಾದ ಕಥೆಯನ್ನು ದೃಶ್ಯವಾಗಿಸುವ ಜವಾಬ್ದಾರಿಯನ್ನು ಉದಯ್ ಲೀಲಾ ರವರು ವಹಿಸಿಕೊಂಡಿದ್ದಾರೆ. ಸಹ ನಿರ್ದೇಶಕರಾಗಿ ಪುಟ್ನಂಜ ಬಾರ್ಕಿ ಹಾಗೂ ಕಲೆ ಮತ್ತು ಕ್ರಿಯೇಟಿವ್ ಹೆಡ್ ಆಗಿ ಅನಿಲ್ ಕಭಿರ್ ರವರು ನಿರ್ದೇಶಕರ ಜೊತೆಗಿದ್ದಾರೆ. ಶ್ರೀಮತಿ ಐಶ್ವರ್ಯ ಮತ್ತು ನಿತಿನ್ ಗೌಡ k.S ರವರ ಸಹಕಾರದೊಂದಿಗೆ ಬ್ರೈಟ್ ವಿಷನ್ ಸ್ಟುಡಿಯೋಸ್ ಸಂಸ್ಥೆಯು ನಿರ್ಮಾಣ ಮಾಡುತ್ತಿದೆ.