RRR ಸಿನಿಮಾ ಬ್ಲಾಕ್ ಬಾಸ್ಟರ್ ಹಿಟ್ ಆಗಿರುವ ಸಕ್ಸಸ್ ನಲ್ಲಿರುವ ಟಾಲಿವುಡ್ ನ ಯಂಗ್ ಟೈಗರ್ ಜ್ಯೂನಿಯರ್ NTR ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅವರ ಬರ್ತ್ ಡೇ ಪ್ರಯುಕ್ತ ಕೊರಟಾಲ ಶಿವ ಅವರು ಒಂದು ದಿನದ ಮುಂಚೆಯೇ NTR 30 ಮೋಷನ್ ಪೋಸ್ಟರ್ ರಿಲೀಸ್ ಮಾಡಿ NTR ಅಭಿಮಾನಿಗಳಿಗೆ ಗಿಫ್ಟ್ ಕೊಟ್ಟಿದ್ದಾರೆ..
ಸದ್ಯ ರಾಜಮೌಳಿ ನಿರ್ದೇಶನದ RRR ಸಿನಿಮಾದ ಮೂಲಕ ಜ್ಯೂನಿಯರ್ NTR ಇಂಡಿಯನ್ ಸ್ಟಾರ್ ಆಗಿದ್ದು , ಎಲ್ಲೆಡೆ ಅವರ ಕ್ರೇಜ್ ಹೆಚಚಾಗಿದೆ.. ಇದೀಗ ಮತ್ತೊಂದು ಮಾಸ್ ಸಿನಿಮಾಗೆ ಜ್ಯೂ. NTR ಸಜ್ಜಾಗಿದ್ಧಾರೆ. ಯಂಗ್ ಟೈಗರ್ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ತಿದ್ದಾರೆ. ಈ ಪ್ರಯುಕ್ತ NTR 30ರ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
https://twitter.com/i/status/1527281321306771456
ಜೂ. ಎನ್ಟಿಆರ್ ಹಾಗೂ ಕೊರಟಾಲ ಶಿವ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಈ ಹೊಸ ಸಿನಿಮಾದ ಬಗ್ಗೆ ಸಾಕಷ್ಟು ಕ್ರೇಜ್ ಇದೆ.. ಅದಕ್ಕೆ ಸರಿಯಾಗಿ ಯಂಗ್ ಟೈಗರ್ ಬರ್ತ್ಡೇ ಒಂದು ದಿನ ಇರುವಾಗಲೇ ಮೋಷನ್ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿದೆ.