NTR ಅಭಿಮಾನಿಗಳಿಗೆ ಇಂದು ತ್ರಿಬಲ್ ಧಮಾಕ ಅಭಿಮಾನಿಗಳ ನೆಚ್ಚಿನ ಯಂಗ್ ಟೈಗರ್ ಇಂದು 39ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಹೊಸ ಚಿತ್ರದ ಅಪ್ಡೇಟ್ ಗಳನ್ನ ಉಡುಗೊರೆಯಾಗಿ ನೀಡಿದ್ದಾರೆ ಮ್ಯಾನ್ ಆಫ್ ಮಾಸ್ ಯಂಗ್ ಟೈಗರ್.
RRR ಚಿತ್ರದ ಸೂಪರ್ ಡೂಪರ್ ಹಿಟ್ ಯಶಸ್ಸಿನಲ್ಲಿರು ಎನ್ ಟಿ ಆರ್ ಹುಟ್ಟುಹಬ್ಬದ ಪ್ರಯುಕ್ತ ತಮ್ಮ ಮುಂದಿನ ಚಿತ್ರದ ಗ್ಲಿಂಪ್ಸ್ ಹಂಚಿಕೊಂಡಿದ್ದಾರೆ. ನಿನ್ನೆ ಸಂಜೆಯೆ NTR30 ಚಿತ್ರದ ಇಂಟ್ರಡಕ್ಷನ್ ಝಲಕ್ ಅನ್ನ ಹಂಚಿಕೊಂಡಿದ್ದರು. ಪುಷ್ಪಾದಂತಹ ಹಿಟ್ ಸಿನಿಮಾ ಕೊಟ್ಟ ಮೈತ್ರಿ ಮೂವಿ ಮೇಕರ್ಸ್ ಈ ಮೂವಿಗೆ ಬಂಡವಾಳ ಹೂಡುತ್ತಿದ್ದಾರೆ. ಜನತಾ ಗ್ಯಾರೇಜ್ ನಂತರ ಮತ್ತೊಮ್ಮೆ ಕೊರಟಾಲ ಶಿವ NTR ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ ಟ್ಯೂನ್ ಕಂಪೋಸ್ ಮಾಡುತ್ತಿದ್ದಾರೆ.
ತಾರಕ್ ಅಭಿಮಾನಿಗಳಿಗೆ ಮತ್ತೊಂದು ಭರ್ಜರಿ ಸಿಹಿ ಸುದ್ದಿ ಏನೆಂದರೆ ಕೆಜಿಎಫ್ ನಂತಹ ಹಿಟ್ ಚಿತ್ರ ಕೊಟ್ಟ ಪ್ರಶಾಂತ್ ನೀಲ್ NTR ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ತಾರಕ್ ಅವರ 31 ನೇ ಚಿತ್ರ. ನೀಲ್ ಅವರ ಟ್ರೇಡ್ ಮಾರ್ಕ್ ನಂತೆ ಕಪ್ಪು ಚಿತ್ರದಲ್ಲಿ ಎನ್ಟಿಆರ್ ಫಸ್ಟ್ ಲುಕ್ ಅನಾವರಣಗೊಂಡಿದೆ. ಕಣ್ಣಿನ ನೋಟ ತೀಕ್ಷ್ಣವಾಗಿದೆ. “ರಕ್ತದಲ್ಲಿ ನೆನೆದ ಮಣ್ಣು ಮಾತ್ರ ನೆನಪಿಗೆ ಯೋಗ್ಯವಾಗಿದೆ! ಅವರ ಮಣ್ಣು ಅವರ ಆಳ್ವಿಕೆ … ಆದರೆ ಅವರ ರಕ್ತ ಖಂಡಿತ ಅಲ್ಲ ಎಂದು ಪೋಸ್ಟರ್ ನಲ್ಲಿ ಕ್ಯಾಪ್ಶನ್ ನೀಡಲಾಗಿದೆ.
ಎರಡೂ ಚಿತ್ರಗಳೂ ಸಹ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿವೆ ಎನ್ನುವುದು ತಾರಕ್ ಅಭಿಮಾನಿಗಳಿಗೆ ಹೆಮ್ಮೆಯ ಸಂಗತಿ. NTR ಬರ್ತಡೇ ಪ್ರಯುಕ್ತ ಇಂದು ಒಟಿಟಿಯಲ್ಲಿ RRR ಚಿತ್ರ ಬಿಡುಗಡೆಯಾಗಲಿದೆ.