ಇತ್ತೀಚೆಗೆ ಕಿರುತೆರೆ ನಟಿ ಚೇತನಾ ರಾಜ್ ಫ್ಯಾಟ್ ಸರ್ಜರಿ ವೇಳೆ ಮೃತಪಟ್ಟಾಗಿನಿಂದಲೂ ಅನೇಕ ತಾರೆಯರು ಬಾಡಿ ಶೇಮಿಂಗ್ ವಿರುದ್ಧ ಮಾತನಾಡ್ತಿದ್ದಾರೆ.. ಇದೀಗ ನಟಿ ಮಯೂರಿ ಸಹ ಈ ಬಗ್ಗೆ ಮಾತನಾಡಿದ್ದಾರೆ..
ರಮ್ಯಾ, ಪ್ರಿಯಾಂಕಾ ಉಪೇಂದ್ರ, ರಾಕಿ ಸಾವಂತ್ ಅವರೆಲ್ಲಾ ಈ ಬಗ್ಗೆ ಮಾತನಾಡಿದ ನಂತರ ಇದೀಗ ಮಯೂರಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ..
ಚಿತ್ರರಂಗದಲ್ಲಿ ಎಲ್ಲಾ ನಟಿಯರಿಗೂ ಸಾಕಷ್ಟು ರೀತಿಯಲ್ಲಿ ಸವಾಲುಗಳ ಎದುರಾಗಿರುತ್ತದೆ. ಆದರೆ, ನಮ್ಮನ್ನು ನಾವು ಪ್ರೀತಿಸುವುದು ಮುಖ್ಯ. ನಾವು ಹೇಗಿದ್ದೀವಿ ಅಂತಾ ನಾವು ಒಪ್ಪಿಕೊಂಡರೆ ಸಾಕು.
ನಾಯಕಿಯರು ಮಾತ್ರ ಅಲ್ಲ, ಎಲ್ಲರೂ ಸೌಂದರ್ಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ನಾವು ಸಣ್ಣಗೆ ಅಥವಾ ದಪ್ಪಗೆ ಇದ್ದೇವೆ ಎಂಬ ರೀತಿಯ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು. ಜತೆಗೆ ಎಲ್ಲವನ್ನು ಎದುರಿಸಿ ನಿಲ್ಲಬೇಕು ಎಂದು ಮಯೂರಿ ಹೇಳಿದ್ದಾರೆ.