ಸದ್ಯ ಸಸಾಯಿ ಪಲ್ಲವಿ ಪ್ಯಾನ್ ಇಂಡಿಯಾ ಗಾರ್ಗಿ ಸಿನಿಮಾದಲ್ಲಿ ಬ್ಯುಸಿಯಾಗಗಿರುವ ವಿಚಾರ ಗೊತ್ತೇ ಇದೆ.. ವಿಶೇಷ ಅಂದ್ರೆ ಈ ಸಿನಿಮಾಗಾಗಿ ಅವರು ಕನ್ನಡ ಕಲಿತು ಸ್ವತಃ ಕನ್ನಡದಲ್ಲಿ ಡಬ್ ಮಾಡಿದ್ದಾರೆ ಕೂಡ..
ಈಗ ಸಾಯಿಪಲ್ಲವಿ ತಮ್ಮ ಮುಂಬರುವ ಚಿತ್ರ ವಿರಾಟಪರ್ವಂ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.
ಈ ನಡುವೆ ಸಾಯಿಪಲ್ಲವಿ ತಮಿಳಿನಲ್ಲಿ ಪ್ರಾಜೆಕ್ಟ್ ವೊಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಗೊತ್ತಾಗಿದೆ.
ಈ ಚಿತ್ರವನ್ನು ಕಮಲ್ ಹಾಸನ್ ನಿರ್ಮಿಸುತ್ತಿದ್ದು, ಶಿವ ಕಾರ್ತಿಕೇಯನ್ ನಾಯಕನಾಗಿ ನಟಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಚಿತ್ರಕ್ಕೆ ‘ಮಾವೀರನ್‘ ಎಂಬ ಟೈಟಲ್ ಫೈನಲ್ ಮಾಡಲಾಗಿದೆಯಂತೆ.
ಸಾಯಿಪಲ್ಲವಿ ಅಭಿನಯದ ಕಮಲ್ ಹಾಸನ್ ನಿರ್ಮಾಣದ ಪ್ರಾಜೆಕ್ಟ್ ಆಗಿರುವುದರಿಂದ ಚಿತ್ರ ಈಗಾಗಲೇ ಹೈಪ್ ಕ್ರಿಯೇಟ್ ಮಾಡಿದೆ.
ಚಿತ್ರದ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ.